Wednesday, June 19, 2024

ಸತ್ಯ | ನ್ಯಾಯ |ಧರ್ಮ

ನೂಹ್ ಗಲಭೆ: ಸುದರ್ಶನ ಟಿವಿ ವಾಹಿನಿಯ ಸ್ಥಾನಿಕ ಸಂಪಾದಕನ ಬಂಧನ

ಚಂಡೀಗಢ: ನೂಹ್ ಗಲಭೆ ವೇಳೆ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಹಿಂದಿ ಚಾನೆಲ್ ಸುದರ್ಶನ್ ಟಿವಿಯ ಸಂಪಾದಕನನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆ ಹೆಚ್ಚಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಸುದರ್ಶನ್ ಟಿವಿ ಚಾನೆಲ್ ರೆಸಿಡಂಟ್ ‌ಎಡಿಟರ್ ಮುಖೇಶ್ ಕುಮಾರ್ ಅವರನ್ನು ಪೊಲೀಸರು ಗುರುಗ್ರಾಮ್‌ನಲ್ಲಿ ಬಂಧಿಸಿದ್ದಾರೆ. ‌

ಆದರೆ.. “ಕೆಲ ದರೋಡೆಕೋರರು ಆತನನ್ನು ಬಂಧಿಸಿದ್ದಾರೆ” ಎಂದು ಸುದರ್ಶನ್ ವಾಹಿನಿ ಹೇಳಿತ್ತು. ಈ ಕುರಿತು ವಿವರಣೆ ನೀಡಿರುವ ಪೊಲೀಸರು, ವಾಹಿನಿಯ ಸಂಪಾದಕನನ್ನು ಸೈಬರ್ ಕ್ರೈಂ ವಿಭಾಗ ಬಂಧಿಸಿದೆ ಎಂದು ತಿಳಿಸಿದ್ದಾರೆ.

ಆಲ್ ಜಜೀರಾ ವಾಹಿನಿಯ ಒತ್ತಡದ ಮೇರೆಗೆ ಗುರುಗ್ರಾಮ ಪೊಲೀಸರು ಹಿಂದೂ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಮುಖೇಶ್ ಕುಮಾರ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ. ವಿದೇಶಿ ಮಾಧ್ಯಮಗಳು ಗುರುಗ್ರಾಮ್ ಪೊಲೀಸರಿಗೆ ಕರೆ ಮಾಡಿ ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಂಪಾದಕರು ಪೋಸ್ಟ್ ಮಾಡಿದ್ದನು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಕುಮಾರ್ ಪೋಸ್ಟ್ ನಿರಾಧಾರ ಎಂದು ತಳ್ಳಿ ಹಾಕಿ, ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿತ್ತು. ಐಟಿ ಕಾಯ್ದೆಯಡಿ ಸಂಪಾದಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದರೆ, ಕುಮಾರ್ ತಮ್ಮ ಕರ್ತವ್ಯದ ಭಾಗವಾಗಿ ಮೇವಾತ್ ಪ್ರದೇಶಕ್ಕೆ ತೆರಳಿದ್ದರು ಎಂದು ಸುದರ್ಶನ್ ಟಿವಿ ತಿಳಿಸಿದೆ. ಕೆಲ ಪುಂಡರು ಆತನನ್ನು ವಶಕ್ಕೆ ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ಅದು ಹೇಳಿದೆ. ಸುದರ್ಶನ್ ಟಿವಿ ಚಾನೆಲ್ ಮುಖ್ಯ ಸಂಪಾದಕ ಸುರೇಶ್ ಚವಾಣ್ಕೆ ಪೊಲೀಸರ ಕ್ರಮವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಆದರೆ, ಕೆಲವು ಗಂಟೆಗಳ ನಂತರ ಮುಖೇಶ್ ಕುಮಾರ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

https://twitter.com/gurgaonpolice/status/1690014743484862465?s=20

ಜುಲೈ 31ರಂದು ಹರಿಯಾಣದ ನೂಹ್‌ನಲ್ಲಿ ಗಲಭೆಗಳು ಭುಗಿಲೆದ್ದಿತ್ತು. ವಿಶ್ವ ಹಿಂದೂ ಪರಿಷತ್ ರಥಯಾತ್ರೆಯ ಸಮಯದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಪ್ರಾರಂಭವಾಯಿತು ಮತ್ತು ರಾಜ್ಯದಾದ್ಯಂತ ಹರಡಿತು. ಈ ಆಂದೋಲನಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು