Friday, June 14, 2024

ಸತ್ಯ | ನ್ಯಾಯ |ಧರ್ಮ

ಜ್ವರ ಬಂದಾಗ ಸ್ನಾನ ಮಾಡಬೇಕೆ? ತಜ್ಞರು ಏನೆನ್ನುತ್ತಾರೆ?

ಈಗ ಮಳೆಗಾಲ ನಡೆಯುತ್ತಿದೆ. ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಸೇರಿದಂತೆ ಹಲವು ರೋಗಗಳು ಈ ಋತುವಿನಲ್ಲಿ ಬರುತ್ತವೆ. ಅದರಲ್ಲೂ ವೈರಲ್ ಫೀವರ್ ಹಲವೆಡೆ ಅವಾಂತರ ಸೃಷ್ಟಿಸುತ್ತಿದೆ.

ಡೆಂಗ್ಯೂ ಕೂಡ ವೈರಲ್ ಜ್ವರ ಆದರೆ ಇದು ಮಾರಣಾಂತಿಕವಾಗಬಹುದು. ಆದರೆ ಹಲವರು ಜ್ವರ ಬಂದಾಗ ಸ್ನಾನ ಮಾಡುವುದನ್ನು ನಿಲ್ಲಿಸುತ್ತಾರೆ. ಜ್ವರದ ಸಮಯದಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಇಂತಹ ಜ್ವರಗಳು ಅಥವಾ ಋತುಮಾನದ ಕಾಯಿಲೆಗಳು ಬಂದಾಗ ಸ್ನಾನದಿಂದ ದೂರವಿರಲು ಬಯಸಿದರೆ ಏನು ಮಾಡಬೇಕು? ನವದೆಹಲಿಯ ಪ್ರಸಿದ್ಧ ಆಸ್ಪತ್ರೆಯ ವೈದ್ಯರ ಪ್ರಕಾರ ಜ್ವರ ಬಂದಾಗ ಸ್ನಾನ ಮಾಡಿದರೆ ತೊಂದರೆ ಇಲ್ಲ. ಎಲ್ಲರೂ ಸ್ನಾನ ಮಾಡಬಹುದು. ನಮಗೆ ಜ್ವರ ಬಂದಾಗ, ನಮ್ಮ ದೇಹದ ಉಷ್ಣತೆಯು ಹೆಚ್ಚಾಗುವುದರ ಜೊತೆಗೆ ನಮ್ಮ ದೇಹದಲ್ಲಿ ನೋವು ಕೂಡಾ ಪ್ರಾರಂಭವಾಗುತ್ತದೆ. ಜ್ವರವು ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ. ಈ ಕಾರಣಕ್ಕಾಗಿಯೇ ಜನರು ಸ್ನಾನವನ್ನು ಇಷ್ಟಪಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಬೆಚ್ಚಗಿನ ನೀರಿನ ಸ್ನಾನವು ಬಹಳ ಪ್ರಯೋಜನಕಾರಿ.

ಈ ರೀತಿ ಸ್ನಾನ ಮಾಡುವುದರಿಂದ ಜ್ವರ ಕಡಿಮೆಯಾಗಿ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದ ನೋವು ಕಡಿಮೆಯಾಗುತ್ತದೆ. ಜ್ವರ ತುಂಬಾ ಹೆಚ್ಚಿದ್ದರೆ ಹೆಚ್ಚು ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಬೇಡಿ. ಹಾಗೆ ಮಾಡುವುದು ಒಳ್ಳೆಯದಲ್ಲ. ಹಲವು ಬಾರಿ ತೀವ್ರ ಜ್ವರದಿಂದ ಜನರ ಸ್ಥಿತಿ ಹದಗೆಟ್ಟಿದ್ದು, ಎದ್ದು ಕುಳಿತರೂ ಸಾಕಷ್ಟು ತೊಂದರೆಯಾಗುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸ್ನಾನ ಮಾಡಲಾಗದವರು ಏನು ಮಾಡಬೇಕು..? ಅಂತಹ ಜನರು ಟವೆಲ್ಲನ್ನು ತಣ್ಣೀರಿನಿಂದ ಒದ್ದೆ ಮಾಡಿ ದೇಹವನ್ನು ಒರೆಸಿಕೊ‍ಳ್ಳಬಹುದು. ಇದರಿಂದ ಜ್ವರದಿಂದಲೂ ಸ್ವಲ್ಪ ಪರಿಹಾರ ಸಿಗುತ್ತದೆ. ಅಲ್ಲದೆ ದೇಹಕ್ಕೂ ಒಂದಷ್ಟು ಬಲ ಬರುತ್ತದೆ.

ಹೀಗೆ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು. ಇನ್ನೊಂದು ಮುಖ್ಯವಾದ ವಿಷಯವೆಂದರೆ ಇದನ್ನು ಮಾಡುವಾಗ (ಟವೆಲ್‌ ಬಳಸಿ ಮೈ ಒರೆಸುವಾಗ) ಐಸ್ ನೀರನ್ನು ಬಳಸಬೇಡಿ. ಏಕೆಂದರೆ ಐಸ್ ನೀರು ಆರೋಗ್ಯಕ್ಕೆ ಹಾನಿಕಾರಕವಾದದ್ದು. ಜ್ವರ ಬಂದಾಗಲೂ ಸ್ನಾನ ಮಾಡುವುದರಿಂದ ದೇಹ ಅಥವಾ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಜ್ವರದ ಸಮಯದಲ್ಲಿ ದೇಹದಲ್ಲಿ ನೋವು ಇರುತ್ತದೆ. ನಿಶಃಕ್ತಿ ಕೂಡಾ ಕಾಡುತ್ತಿರುತ್ತದೆ. ಅಂತಹ ಸಮಯದಲ್ಲಿ ಸ್ನಾನ ಮಾಡಬೇಕೆಂದು ಅನೇಕರಿಗೆ ಅನಿಸುವುದಿಲ್ಲ. ಅದಕ್ಕಾಗಿಯೇ ಜ್ವರದ ಪರಿಸ್ಥಿತಿಯಲ್ಲಿ ತಣ್ಣೀರಿನ ಬದಲು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಪ್ರಯೋಜನಕಾರಿ. ಇದರಿಂದ ಸ್ನಾಯುಗಳಿಗೆ ಆರಾಮ ದೊರೆಯುವುದರ ಜೊತೆಗೆ ದೇಹದ ಉಷ್ಣತೆಯೂ ತಗ್ಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು