Friday, June 14, 2024

ಸತ್ಯ | ನ್ಯಾಯ |ಧರ್ಮ

ಟ್ವಿಟರ್‌ನಲ್ಲಿ ಪ್ರೊಫೈಲ್‌ ಚಿತ್ರ ಚೇಂಜ್‌ ಮಾಡಿ ಗೋಲ್ಡನ್‌ ಟಿಕ್‌ ಮತ್ತು ಬ್ಲ್ಯೂ ಟಿಕ್‌ ಕಳೆದುಕೊಂಡ ಹಲವು ಬಿಜೆಪಿ ನಾಯಕರು ಹಾಗೂ UP CM

ಸರ್ಕಾರದ ‘ಹರ್ ಘರ್ ತಿರಂಗ ಅಭಿಯಾನ’ದ ಭಾಗವಾಗಿ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ರಾಜಕಾರಣಿಗಳು ತಮ್ಮ ಪ್ರೊಫೈಲ್ ಚಿತ್ರವನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಿದ ನಂತರ ‘X’ (ಈ ಮೊದಲು ಟ್ವಿಟರ್) ನಲ್ಲಿ ತಮ್ಮ ಗೋಲ್ಡನ್ ಮತ್ತು ನೀಲಿ ಟಿಕ್ ಅನ್ನು ಕಳೆದುಕೊಂಡಿದ್ದಾರೆ.

ಹೀಗೆ ಬ್ಲ್ಯೂ ಟಿಕ್‌ಗಳನ್ನು ಕಳೆದುಕೊಂಡವರಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಉಪ ದೇವೇಂದ್ರ ಫಡ್ನವೀಸ್ ಸೇರಿದ್ದಾರೆ

ದೆಹಲಿ LG ವಿನಯ್ ಕುಮಾರ್ ಸಕ್ಸೇನಾ ಗೋಲ್ಡನ್ ಟಿಕ್ ಅನ್ನು ಕಳೆದುಕೊಂಡ ನಾಯಕರಲ್ಲಿ ಒಬ್ಬರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಪ್ರೊಫೈಲ್ ಚಿತ್ರವಾಗಿ ತ್ರಿವರ್ಣ ಧ್ವಜ ಹಾಕಿದ ನಂತರ ತನ್ನ ಗೋಲ್ಡನ್‌ ಟಿಕ್ ಕಳೆದುಕೊಂಡಿದೆ.

https://twitter.com/BCCI?s=20

ಈ ಹಿಂದೆ, ಟ್ವಿಟರ್ ನಿಯಮ ಪಾಲಿಸದಿದ್ದಕ್ಕಾಗಿ ಸುಮಾರು 24 ಲಕ್ಷ ಖಾತೆಗಳನ್ನು ನಿರ್ಬಂಧಿಸಿತ್ತು. ಇದನ್ನು ಕಂಪನಿಯೇ ಬಹಿರಂಗಪಡಿಸಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ದಾಖಲೆಯ 23 ಲಕ್ಷದ 95 ಸಾವಿರ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ. ಹೆಚ್ಚಿನ ಖಾತೆಗಳು ಲೈಂಗಿಕ ಮತ್ತು ಅಶ್ಲೀಲ ವಿಷಯವನ್ನು ಒಳಗೊಂಡಿವೆ ಎಂದು X ಹೇಳಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವ 1,772 ಖಾತೆಗಳಿದ್ದವು ಎಂದು ಕಂಪನಿ ವಿವರಿಸಿದೆ.

Related Articles

ಇತ್ತೀಚಿನ ಸುದ್ದಿಗಳು