Sunday, June 23, 2024

ಸತ್ಯ | ನ್ಯಾಯ |ಧರ್ಮ

ಕ್ರಿಕೆಟ್‌ ‘ಕಿಂಗ್’ ಕೊಹ್ಲಿ ವೃತ್ತಿಜೀವನಕ್ಕೆ 15 ವರ್ಷ

ಕ್ರಿಕೆಟ್ ನ ಕಿಂ‌ಗ್ ಎಂದೇ ಖ್ಯಾತಿ ಪಡೆದ ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿ ಇಂದಿಗೆ ಸರಿಯಾಗಿ 15 ವರ್ಷಗಳು. ವಿರಾಟ್ ಕೊಹ್ಲಿ 18 ಆಗಸ್ಟ್ 2008ರಂದು ಶ್ರೀಲಂಕಾ ವಿರುದ್ಧದ ODI ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು.

ಫಾರ್ಮ್ಯಾಟ್‌ ಯಾವುದೇ ಇರಲಿ, ರನ್‌ಗಳ ಪ್ರವಾಹವನ್ನೇ ಹರಿಸುವ ಕೊಹ್ಲಿ ಇದುವರೆಗೆ ಟೆಸ್ಟ್, ODI ಮತ್ತು T20 ಯಂತಹ ಎಲ್ಲಾ ಮೂರು ಸ್ವರೂಪಗಳಲ್ಲಿ 500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಸತತವಾಗಿ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಅವರು ಚೇಸಿಂಗ್ ಮಾಸ್ಟರ್ ಎಂದು ಹೊಗಳಲ್ಪಟ್ಟಿದ್ದಾರೆ. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ, ಕೊಹ್ಲಿ 111 ಟೆಸ್ಟ್‌ಗಳಲ್ಲಿ 49.3 ಸರಾಸರಿಯಲ್ಲಿ 8676 ರನ್ ಗಳಿಸಿದ್ದಾರೆ. ಅವರು 275 ODIಗಳಲ್ಲಿ 57.32 ಸರಾಸರಿಯಲ್ಲಿ 12,898 ರನ್ ಗಳಿಸಿದ್ದಾರೆ. 115 T20I ಗಳಲ್ಲಿ 52.73ರ ಸರಾಸರಿಯಲ್ಲಿ ಮತ್ತು 137.97 ರ ಸ್ಟ್ರೈಕ್ ರೇಟ್‌ನಲ್ಲಿ 4008 ರನ್ ಗಳಿಸಿದ್ದಾರೆ.

ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 15 ವರ್ಷ ಪೂರೈಸಿರುವ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಕೊಹ್ಲಿಯ ಅದ್ಭುತ ಸಾಧನೆಗಳು ಕೋಟ್ಯಂತರ ಜನರಿಗೆ ಸ್ಫೂರ್ತಿ ನೀಡಿವೆ ಎಂದು ಜಯ್ ಶಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು