Sunday, June 23, 2024

ಸತ್ಯ | ನ್ಯಾಯ |ಧರ್ಮ

ದೇಶಕ್ಕೆ ಹೊಸ ಸಂವಿಧಾನದ ಅಗತ್ಯವಿದೆ!: ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ

ಹೊಸದೆಹಲಿ: ದೇಶಕ್ಕೆ ಹೊಸ ಸಂವಿಧಾನದ ಅಗತ್ಯವಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ಅಧ್ಯಕ್ಷ ವಿವೇಕ್ ದೇಬ್ರಾಯ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಅವರು ರಾಷ್ಟ್ರ ಮಟ್ಟದ ನಿಯತಕಾಲಿಕೆಯೊಂದರಲ್ಲಿ ಬರೆದ ಲೇಖನವೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಏಳು ದಶಕಗಳ ಹಿಂದೆ 1950ರಲ್ಲಿ ಜಾರಿಗೆ ಬಂದ ಸಂವಿಧಾನವು ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಿಲ್ಲ ಎಂದು ಈ ಲೇಖನ ಅಭಿಪ್ರಾಯಪಟ್ಟಿದೆ. ಸಂವಿಧಾನಕ್ಕೆ ಈಗಾಗಲೇ ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ ಎಂದೂ ಅವರು ಬರೆದ್ದಾರೆ..

ಪ್ರಜಾಪ್ರಭುತ್ವದ ಅಗತ್ಯತೆಗಳ ಕಾರಣವಿಲ್ಲದೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಬಾರದು ಎಂದು ಸುಪ್ರೀಂ ಕೋರ್ಟ್ 1973ರಲ್ಲಿ ತೀರ್ಪು ನೀಡಿತ್ತು ಮತ್ತು ಈ ತೀರ್ಪು ಹೊಸದಲ್ಲ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಭಾರತೀಯ ಸಂವಿಧಾನವು ವಸಾಹತುಶಾಹಿ ಪರಂಪರೆಗೆ ಸೇರಿದೆ ಎಂದು ವಿವೇಕ್ ದೇಬ್ರಾಯ್ ಬಣ್ಣಿಸಿದ್ದಾರೆ.

ಈ ನಡುವೆ ವಿವೇಕ್ ದೇಬ್ರಾಯ್ ಬರೆದ ಲೇಖನದಿಂದ ಕೌನ್ಸಿಲ್‌ ಅಂತರ ಕಾಯ್ದುಕೊಂಡಿದ್ದು, “ವಿವೇಕ್ ದೇಬ್ರಾಯ್ ಬರೆದ ಲೇಖನಕ್ಕೂ ತಮ್ಮ ಕೌನ್ಸಿಲ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಇಎಸಿ-ಪಿಎಂ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

‘ಇಎಸಿ’ ಎಂಬುದು ಪ್ರಧಾನ ಮಂತ್ರಿಯವರಿಗೆ ಆರ್ಥಿಕ ವಿಷಯಗಳ ಕುರಿತು ಸಲಹೆ ನೀಡಲು ಸ್ಥಾಪಿಸಲಾದ ಸ್ವತಂತ್ರ ಸಂಸ್ಥೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು