Sunday, June 16, 2024

ಸತ್ಯ | ನ್ಯಾಯ |ಧರ್ಮ

ಮೀನು ತಿಂದರೆ ಐಶ್ವರ್ಯ ರೈ ಅವರಂತಹ ಸುಂದರ ಕಣ್ಣುಗಳು ನಿಮ್ಮದಾಗುತ್ತವೆ: ಮಹಾರಾಷ್ಟ್ರ ಸಚಿವ ವಿಜಯ್‌ಕುಮಾರ್‌ ಹೇಳಿಕೆ

ಮುಂಬೈ: ನಿತ್ಯವೂ ಮೀನು ತಿಂದರೆ ಚಿತ್ರ ನಟಿ ಐಶ್ವರ್ಯಾ ರೈ ಅವರಂತೆ ಸುಂದರ ಕಣ್ಣುಗಳು ನಿಮ್ಮದಾಗುತ್ತವೆ ಎಂದು ಮಹಾರಾಷ್ಟ್ರದ ಬುಡಕಟ್ಟು ಇಲಾಖೆ ಸಚಿವ ವಿಜಯ್‌ಕುಮಾರ್ ಗವಿತ್ ಪ್ರತಿಕ್ರಿಯಿಸಿದ್ದಾರೆ.

ನಂದೂರಬಾರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಅವರು ಹೇಳಿದ ಮಾತುಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. “ಪ್ರತಿದಿನ ಮೀನು ತಿನ್ನುವವರ ತ್ವಚೆ ನಯವಾಗುತ್ತದೆ. ಕಣ್ಣುಗಳು ಹೊಳೆಯುತ್ತವೆ. ಯಾರಾದರೂ ನಿಮ್ಮನ್ನು ನೋಡಿದರೆ, ಆ ವ್ಯಕ್ತಿ ನಿಮ್ಮತ್ತ ಆಕರ್ಷಿತರಾಗುತ್ತಾರೆ.” ಎಂದು ಅವರು ಭಾಷಣದ ನಡುವೆ ಹೇಳಿದ್ದರು.

“ನೀವು ನಾನು ಐಶ್ವರ್ಯಾ ರೈ ಕುರಿತು ಹೇಳುತ್ತಿರುಬಹುದೇ ಎಂದು ನಿಮಗೆ ಅನ್ನಿಸಬಹುದು. ಹೌದು ಐಶ್ವರ್ಯಾ ರೈ ಕೂಡಾ ಮಂಗಳೂರಿನ ಸಮುದ್ರ ತೀರದಲ್ಲಿ ವಾಸವಿದ್ದರು. ಹಾಗಾಗಿ ಆಕೆ ಬಹಳಷ್ಟು ಮೀನು ತಿನ್ನುತ್ತಿದ್ದರು. ನೀವು ಅವರ ಕಣ್ಣುಗಳನ್ನು ನೋಡಿದ್ದೀರ? ಮೀನು ತಿಂದರೆ ನೋವು ಕೂಡಾ ಅವರಂತಹ ಕಣ್ಣುಗಳನ್ನು ಹೊಂದಬಹುದು.” ಎಂದು ಅವರು ಹೇಳಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು