Tuesday, June 18, 2024

ಸತ್ಯ | ನ್ಯಾಯ |ಧರ್ಮ

IPC, CrPC ಸಾಕ್ಷ್ಯ ಕಾಯ್ದೆಗೆ ಹಿಂದಿಯಲ್ಲಿ ಹೆಸರಿಡಬೇಡಿ: ಮದ್ರಾಸ್ ಬಾರ್ ಅಸೋಸಿಯೇಷನ್

ಮದ್ರಾಸ್ ಬಾರ್ ಅಸೋಸಿಯೇಷನ್ ಭಾರತೀಯ ದಂಡ ಸಂಹಿತೆ (IPC), ಇಂಡಿಯನ್ ಎವಿಡೆನ್ಸ್ ಆಕ್ಟ್ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಯನ್ನು ಹಿಂದಿಯಲ್ಲಿ ಮರುನಾಮಕರಣದ ವಿರುದ್ಧ ಆಕ್ಷೇಪ ಎತ್ತುವ ನಿರ್ಣಯವನ್ನು ಅಂಗೀಕರಿಸಿದೆ.

IPC ಮತ್ತು CrPC ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸುವ ಮಸೂದೆಗಳಿಗೆ “ಭಾರತೀಯ ನ್ಯಾಯ ಸಂಹಿತಾ ಬಿಲ್”, “ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ ಬಿಲ್”, “ಭಾರತೀಯ ಸಾಕ್ಷ್ಯ ಬಿಲ್” ಎಂಬ ಹೆಸರುಗಳಿಗೆ ಮದ್ರಾಸ್ ಬಾರ್ ಅಸೋಸಿಯೇಷನ್ ಆಕ್ಷೇಪಣೆಯನ್ನು ಎತ್ತಿದೆ.

ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಇರುವ ಭಾರತದಲ್ಲಿ ಕಾನೂನಾತ್ಮಕ ಮಸೂದೆಗಳಿಗೆ ಹಿಂದಿಯಲ್ಲಿ ಹೆಸರಿಸುವುದು ಅಸಂವಿಧಾನಿಕ ಎಂದು ಮದ್ರಾಸ್ ಬಾರ್ ಅಸೋಸಿಯೇಷನ್ ಹೇಳಿದೆ. ಹಾಗೆಯೇ ಇಂಗ್ಲಿಷ್ ಹೆಸರುಗಳನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದೆ.

ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನ, ಆಗಸ್ಟ್ 11 ರಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಮಸೂದೆಗಳನ್ನು ಮಂಡಿಸಿದ್ದರು. ಈಗ ಮಸೂದೆಗಳನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು