Monday, June 17, 2024

ಸತ್ಯ | ನ್ಯಾಯ |ಧರ್ಮ

ಭಿವಾನಿ: ಇಬ್ಬರನ್ನು ಜೀವಂತ ಸುಟ್ಟ ಪ್ರಕರಣದಲ್ಲಿ ಮೋನು ಮಾನೇಸರ್ ಬಂಧನ

ಚಂಡೀಗಢ: ಹರಿಯಾಣದ ಭಿವಾನಿಯಲ್ಲಿ ಇಬ್ಬರನ್ನು ಸಜೀವ ದಹನ ಮಾಡಿದ ಪ್ರಕರಣದ ಆರೋಪಿ ಮೋನು ಮಾನೇಸರ್ ಎನ್ನುವವನನ್ನು ಮಂಗಳವಾರ ರಾಜ್ಯ ಪೊಲೀಸರು ಬಂಧಿಸಿದ್ದಾರೆ.

ಭಿವಾನಿಯಲ್ಲಿ, ಕಳೆದ ಫೆಬ್ರವರಿಯಲ್ಲಿ ರಾಜಸ್ಥಾನದ ಅಲ್ಪಸಂಖ್ಯಾತ ಸಮುದಾಯದ ಇಬ್ಬರನ್ನು ಕಾರಿನೊಂದಿಗೆ ಸಜೀವ ದಹನ ಮಾಡಲಾಗಿತ್ತು. ಈ ಘಟನೆಯ ಆರೋಪಿ ಮೋನು ಮಾನೇಸರ್ ಎನ್ನುವವನನ್ನು ಪೊಲೀಸರು ಮಾರುಕಟ್ಟೆ ಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ.

ಆತನನ್ನು ರಾಜಸ್ಥಾನ ಪೊಲೀಸರ ವಶಕ್ಕೆ ಒಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಇಬ್ಬರು ವ್ಯಕ್ತಿಗಳ ಸಜೀವ ದಹನದಲ್ಲಿ ಮಾನೇಸರ್ ನೇರವಾಗಿ ಭಾಗಿಯಾಗಿಲ್ಲವಾದರೂ, ಘಟನೆಗೆ ಕುಮ್ಮಕ್ಕು ಇದೆಯೇ ಅಥವಾ ಪಿತೂರಿ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ರಾಜಸ್ಥಾನ ಪೊಲೀಸರು ಕಳೆದ ತಿಂಗಳು ಹೇಳಿದ್ದರು.

ಫೆಬ್ರವರಿ 16ರಂದು ಹರಿಯಾಣದ ಭಿವಾನಿಯಲ್ಲಿ ವಾಹನವೊಂದರಲ್ಲಿ ಇಬ್ಬರು ಸಜೀವ ದಹನಗೊಂಡಿದ್ದರು. ಮೃತರನ್ನು ರಾಜಸ್ಥಾನ ಮೂಲದ ನಾಸಿರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಎಂದು ಗುರುತಿಸಲಾಗಿತ್ತು.

ಈ ಘಟನೆಯಲ್ಲಿ ಭಾಗಿಯಾಗಿರುವ ಶಂಕಿತ 21 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಜರಂಗದಳದ ಸದಸ್ಯರು ಇಬ್ಬರನ್ನೂ ಅಪಹರಿಸಿ ಕಾರಿನ ಸಮೇತ ಸಜೀವ ದಹನ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಬಜರಂಗದಳ ನಿರಾಕರಿಸಿದೆ. ಸಜೀವ ದಹನವಾದ ಇಬ್ಬರ ವಾಹನದ ಮೇಲಿನ ರಕ್ತದ ಕಲೆಗಳು ಹೋಲುತ್ತಿವೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ. ಈ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಕಟ್ಟರ್ ಈ ಬಗ್ಗೆ ಕ್ರಮಕ್ಕೆ ಆದೇಶಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು