Friday, June 14, 2024

ಸತ್ಯ | ನ್ಯಾಯ |ಧರ್ಮ

ಮಣಿಪುರದಲ್ಲಿ ದೌರ್ಜನ್ಯ – ರಜೆ ಮೇಲೆ ಬಂದ ಯೋಧನನ್ನು ಕಿಡ್ನಾಪ್ ಮಾಡಿ ಹತ್ಯೆ

ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಸೇನಾ ಯೋಧನನ್ನು ಕೆಲವು ಅಪರಿಚಿತ ವ್ಯಕ್ತಿಗಳು ಆತನ ಮನೆಯಿಂದ ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ನಿನ್ನೆ ಬೆಳಗ್ಗೆ 9.30ರ ಸುಮಾರಿಗೆ ಅವರ ಮೃತದೇಹ ಪತ್ತೆಯಾಗಿದೆ. ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅಪಹರಣ ನಡೆದಾಗ ಯೋಧ ಸಿಪಾಯಿ ಸೆರ್ಟೊ ತಾಂಗ್‌ತಾಂಗ್ ಕೋಮ್ ರಜೆಯಲ್ಲಿದ್ದರು. ಅವರನ್ನು ಈಶಾನ್ಯ ರಾಜ್ಯದ ಲಿಮಾಖೋಂಗ್ ಮಿಲಿಟರಿ ನಿಲ್ದಾಣದಲ್ಲಿ ನಿಯೋಜಿಸಲಾಗಿತ್ತು. ಘಟನೆಯ ಒಬ್ಬನೇ ಪ್ರತ್ಯಕ್ಷದರ್ಶಿ ಅವರ 10 ವರ್ಷದ ಮಗನ ಪ್ರಕಾರ, ಅವನು ಮತ್ತು ಅವನ ತಂದೆ ವರಾಂಡಾದಲ್ಲಿ ಕೆಲಸ ಮಾಡುತ್ತಿದ್ದಾಗ ಮೂವರು ಪುರುಷರು ಅವರ ಮನೆಗೆ ಪ್ರವೇಶಿಸಿದರು.

“ಶಸ್ತ್ರಸಜ್ಜಿತ ಪುರುಷರು ಕಾನ್ಸ್‌ಟೇಬಲ್‌ನ ತಲೆಗೆ ಪಿಸ್ತೂಲ್ ಇಟ್ಟು ಬಿಳಿಯ ವಾಹನದಲ್ಲಿ ಕೂರುವಂತೆ ಬಲವಂತಪಡಿಸಿದರು” ಎಂದು ಅವರ ಮಗ ಹೇಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಮುಂದುವರೆದು, “ಭಾನುವಾರ ಬೆಳಗಿನವರೆಗೂ ಸಿಪಾಯಿ ಕೋಮ್ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಬೆಳಿಗ್ಗೆ 9.30 ರ ಸುಮಾರಿಗೆ, ಇಂಫಾಲ್ ಪೂರ್ವದ ಸೊಗೋಲ್ಮಾಂಗ್ ಠಾಣೆ ವ್ಯಾಪ್ತಿಯಲ್ಲಿ ಮೊಂಗ್ಜಾಮ್ನ ಪೂರ್ವದ ಖುನಿಂಗ್ಥೆಕ್ ಗ್ರಾಮದಲ್ಲಿ ಅವರ ಶವ ಪತ್ತೆಯಾಗಿದೆ.” ಕೋಮ್ ಅವರ ಗುರುತನ್ನು ಅವರ ಸಹೋದರ, ಸೋದರ ಮಾವ ಖಚಿತಪಡಿಸಿದ್ದಾರೆ. ಯೋಧನ ತಲೆಯ ಮೇಲೆ ಒಂದೇ ಒಂದು ಗುಂಡಿನ ಗಾಯವಾಗಿತ್ತು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಾಕಿ ಇದೆ.

ಮಾಹಿತಿ ಪ್ರಕಾರ, ಕುಟುಂಬ ಸದಸ್ಯರ ಇಚ್ಛೆಯಂತೆ ಯೋಧನ ಅಂತಿಮ ಸಂಸ್ಕಾರ ನಡೆಯಲಿದೆ. ಮೃತರ ಕುಟುಂಬಕ್ಕೆ ಸಹಾಯ ಮಾಡಲು ಸೇನೆ ತಂಡವನ್ನು ಕಳುಹಿಸಿದೆ.

Related Articles

ಇತ್ತೀಚಿನ ಸುದ್ದಿಗಳು