Thursday, June 13, 2024

ಸತ್ಯ | ನ್ಯಾಯ |ಧರ್ಮ

ಚೈತ್ರಾ ಕುಂದಾಪುರ ಹಣ ವಂಚನೆ ಪ್ರಕರಣ: ಶಿವಮೊಗ್ಗ ABVP ಶಾಮೀಲು?

ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದ ತನಿಖೆಗಾಗಿ ಪ್ರಕರಣದ ಎ2 ಆರೋಪಿ ಆಗಿರುವ ಗಗನ್ ಕಡೂರು ಎಂಬ ಆರೋಪಿಯನ್ನು ಶಿವಮೊಗ್ಗ RSS ಕಚೇರಿಗೆ ಸಿಸಿಬಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಶಿವಮೊಗ್ಗದ RSS ಕಚೇರಿ ಬಳಿಯಲ್ಲಿ ಸಂತ್ರಸ್ತರಿಗೆ ಸಂಬಂಧಿಸಿದ 50 ಲಕ್ಷ ಹಣವನ್ನು ಪಡೆದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಗಗನ್ ಕಡೂರು ನನ್ನು ಶಿವಮೊಗ್ಗಕ್ಕೆ ತನಿಖೆಗೆ ಕರೆದುಕೊಂಡು ಹೋಗಿದ್ದಾರೆ.

ಉದ್ಯಮಿ ಹಾಗೂ ಹಾಗೂ RSS ಕಾರ್ಯಕರ್ತನೂ ಆಗಿರುವ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರ ಕುಂದಾಪುರ ತಂಡ ವಂಚಿಸಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಸ್ವಾಮಿ ಹಾಲಶ್ರೀಯನ್ನು ಬಂಧಿಸಿ ಸಧ್ಯ ಬೆಂಗಳೂರಿಗೆ ಕರೆತರಲಾಗುತ್ತಿದೆ.

ಈ ನಡುವೆ ಎ2 ಆರೋಪಿ ಗಗನ್‌ ನನ್ನು ಶಿವಮೊಗ್ಗಕ್ಕೆ ಕರೆದೊಯ್ದ ಸಿಸಿಬಿ ತಂಡ, ಶಿವಮೊಗ್ಗ ಆರ್‌ ಎಸ್‌ ಎಸ್‌ ಕಚೇರಿ ಬಳಿ 50 ಲಕ್ಷ ಪಡೆದಿದ್ದ ಗಗನ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಹಣ ವರ್ಗಾವಣೆ ಬಗ್ಗೆ ಶಿವಮೊಗ್ಗ ABVP ಕಚೇರಿಯಲ್ಲೇ ಪ್ರಮುಖವಾಗಿ ಮಾತುಕತೆ ಮತ್ತು ಸಭೆ ನಡೆದ ಬಗ್ಗೆ ಆರೋಪಿ ಗಗನ್ ಕಡೂರು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಸಧ್ಯದ ಬೆಳವಣಿಗೆ ನೋಡಿದರೆ ಶಿವಮೊಗ್ಗದ RSS ಹಾಗೂ ABVP ಕಚೇರಿಯಲ್ಲೇ ಇದರ ಮಾತುಕತೆ ನಡೆದಿರಬಹುದಾದದ ಹಿನ್ನೆಲೆಯಲ್ಲಿ ಜಿಲ್ಲಾ ABVP ಮುಖಂಡರು ಸಹ ಇದರಲ್ಲಿ ಭಾಗಿ ಆಗಿರಬಹುದು ಎಂದೂ ಸಿಸಿಬಿ ಪೊಲೀಸರು ಶಂಕಿಸಿದ್ದಾರೆ. ಜೊತೆಗೆ ಇದರಲ್ಲಿ ಭಾಗಿ ಆಗಿರಬಹುದಾದ RSS ನಾಯಕರ ಬಗ್ಗೆಯೂ ತೀವ್ರವಾಗಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸಧ್ಯ ಗೋವಿಂದ ಬಾಬು ಪೂಜಾರಿ, ಚೈತ್ರಾ ಕುಂದಾಪುರ ಹಾಗೂ ಗಗನ್‌ ಕಡೂರು ನಡುವೆ ನಡೆದಿದ್ದ ಶಿವಮೊಗ್ಗ ABVP ಕಚೇರಿಯಲ್ಲಿ ನಡೆದ ಸಭೆಯ ಬಗ್ಗೆ ಕುತೂಹಲ ಮೂಡಿಸಿದೆ. ಇನ್ನೇನು ABVP, RSS ಕಚೇರಿ ಬಳಿಯೂ ಸಿಸಿಬಿ ತಂಡ ಪರಿಶೀಲನೆ ನಡೆಸಲಿದೆ.

Related Articles

ಇತ್ತೀಚಿನ ಸುದ್ದಿಗಳು