Wednesday, June 19, 2024

ಸತ್ಯ | ನ್ಯಾಯ |ಧರ್ಮ

ಟೆಂಡರ್‌ ವೋಟಿಂಗ್‌ | ನಿಮ್ಮ ಮತವನ್ನು ಬೇರೆಯವರು ಚಲಾಯಿಸಿದ ಸಂದರ್ಭದಲ್ಲಿ ಏನು ಮಾಡಬೇಕು? ಇದಕ್ಕೆ ಪರಿಹಾರವಿದೆಯೇ?

ಈ ದೇಶದಲ್ಲಿ ವರ್ಷವಿಡೀ ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುತ್ತದೆ. ಅದರ ನಡುವೆ ಲೋಕಸಭಾ ಚುನಾವಣೆಯೂ ಬರುತ್ತದೆ. ಈ ದೇಶದ 18 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಇಲ್ಲಿ ಮತ ಚಲಾಯಿಸುವ ಹಕ್ಕಿದೆ. ಈ ದೇಶದ ಸಂವಿಧಾನ ನಮಗೆ ಆ ಹಕ್ಕನ್ನು ನೀಡಿದೆ.

ಈಗ ದೇಶದೆಲ್ಲೆಡೆ ಒಂದು ದೇಶ ಒಂದು ಚುನಾವಣೆಯದೇ ಚರ್ಚೆ. ಅದರ ಲಾಭ ನಷ್ಟಗಳ ಕುರಿತು ಈಗಾಗಲೇ ಹಲವು ಸುತ್ತಿಬ ಚರ್ಚೆಗಳು ನಡೆದಿವೆ. ಈ ನಡುವೆ ಇನ್ನೂ ಕೆಲವರು ಇವಿಎಮ್‌ ಬದಲು ಹಳೆಯ ಬ್ಯಾಲೆಟ್‌ ಪದ್ಧತಿಗೆ ಮರಳಬೇಕೆಂದೂ ಹೇಳುತ್ತಿದ್ದಾರೆ.

ಆದರೆ ಇವೆರಡು ಅಲ್ಲದೆ ಇನ್ನೊಂದು ವಿಧಾನವಿದೆ. ಅದುವೇ ಟೆಂಡರ್‌ ವೋಟಿಂಗ್.‌ ಈ ವೋಟಿಂಗ್‌ ಪದ್ಧತಿಯಲ್ಲಿ ವೋಟ್‌ ಮಾಡಲು ಇವಿಎಮ್‌ ಬಳಸುವ ಬದಲು ಎನ್ವಲಪ್‌ ಬಳಸಲಾಗುತ್ತದೆ. ಬನ್ನಿ ಈ ಕುರಿತು ಇನ್ನಷ್ಟು ತಿಳಿಯೋಣ.

ಮತದಾನದ ಹಕ್ಕು ದೇಶದ ಭವಿಷ್ಯವನ್ನು ಮತ್ತು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಭಾರತ ಜನತಂತ್ರದಡಿ ಮತದಾನದ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರಜೆಯ ಮತ ದೇಶದ ಮತ್ತು ಸಮಾಜದ ಭವಿಷ್ಯವನ್ನು ನಿರ್ಧರಿಸುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬ ನಾಗರಿಕನೂ ಈ ಅಧಿಕಾರವನ್ನು ಚಲಾಯಿಸುವುದು ಬಹಳ ಮುಖ್ಯ.

ಆದರೆ ಕೆಲವೊಮ್ಮೆ ನೀವು ಮತದಾನದ ದಿನ ವೋಟಿಂಗ್‌ ಬೂತ್‌ ತಲುಪುಷ್ಟರಲ್ಲಿ ಇನ್ಯಾರೋ ನಿಮ್ಮ ಮತ ಚಲಾಯಿಸಿ ಹೋಗಿರುತ್ತಾರೆ. ಪೋಲಿಂಗ್‌ ಬೂತ್‌ ಅಧಿಕಾರಿ ನಿಮ್ಮ ಮತ ಈಗಾಗಲೇ ಚಲಾವಣೆ ಆಗಿದೆ ಎನ್ನುತ್ತಾರೆ. ಆಗ ಏನು ಮಾಡುತ್ತೀರಿ?

ಈ ಪರಿಸ್ಥಿತಿಯಿಂದ ನಿಮ್ಮನ್ನು ಪಾರುಮಾಡಲು ಇರುವ ವ್ಯವಸ್ಥೆಯೇ ಟೆಂಡರ್‌ ವೋಟಿಂಗ್.‌ ಈ ಮತದಾನ ವ್ಯವಸ್ಥೆಯ ಮೂಲಕ ನೀವು ನಿಮ್ಮ ಹಕ್ಕನ್ನು ಚಲಾಯಿಸಬಹುದು.

ಟೆಂಡರ್‌ ವೋಟಿನ ಹಕ್ಕನ್ನು ಹೇಗೆ ಕೇಳುವುದು?

ಇದರಲ್ಲಿ ಮೊದಲಿಗೆ ನೀವು ನಿಮ್ಮ ಗುರುತಿನ ಚೀಟಿ ಹಿಡಿದುಕೊಂಡು ಮತಗಟ್ಟೆಯ ಪ್ರೆಸಿಡಿಂಗ್‌ ಅಧಿಕಾರಿಯ ಬಳಿ ಹೋಗಬೇಕು. ನೀವು ಅವರಿಗೆ ನಿಮ್ಮ ಪರಿಸ್ಥಿತಿಯನ್ನು ವಿವರಿಸಬೇಕು. ಆಗ ಅವರು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಜೊತೆಗೆ ಕೆಲವು ದಾಖಲೆಗಳನ್ನು ಸಹ ಕೇಳಬಹುದು.

ಅವರ ಪ್ರಶ್ನೆಗಳಿಗೆ ನೀವು ತೃಪ್ತಿದಾಯಕ ಉತ್ತರಗಳನ್ನು ನೀಡಿ, ಸರಿಯಾದ ದಾಖಲೆಗಳನ್ನು ಸಲ್ಲಿಸಿದ ನಂತರ ಅವರು ನಿಮಗೆ ಮತ ಚಲಾಯಿಸಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಇಲ್ಲಿ ನಿಮಗೆ ಇವಿಎಮ್‌ ಮೂಲಕ ವೋಟ್‌ ಮಾಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಅಧಿಕಾರಿ ನಿಮಗೊಂದು ಬ್ಯಾಲೆಟ್‌ ಪೇಪರ್‌ ಕೊಡುತ್ತಾರೆ.

ಆ ಬ್ಯಾಲೆಟ್‌ ಪೇಪರ್‌ ಬಳಸಿ ನಿಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದೆ ಟಿಕ್‌ ಮಾಡಬೇಕು. ಹೀಗೆ ಮತದಾನ ಮಾಡಿದ ನಂತರ ಆ ಬ್ಯಾಲೆಟ್‌ ಪೇಪರನ್ನು ಒಂದು ಎನ್ವಲಪ್‌ ಕವರ್‌ ಒಳಗೆ ಹಾಕಿ ಮತಗಟ್ಟೆ ಅಧಿಕಾರಿಗೆ ನೀಡಬೇಕು. ನಂತರ ಅವರು ಅದನ್ನು ಸೀಲ್‌ ಮಾಡಿ ಇಡುತ್ತಾರೆ. ನಂತರ ಮತ ಎಣಿಕೆಯ ದಿನ ಇತರ ಮತಗಳೊಂದಿಗೆ ನಿಮ್ಮ ಮತವನ್ನೂ ತೆರೆದು ಎಣಿಕೆಗೆ ಪರಿಗಣಿಸುತ್ತಾರೆ.

Related Articles

ಇತ್ತೀಚಿನ ಸುದ್ದಿಗಳು