Wednesday, June 19, 2024

ಸತ್ಯ | ನ್ಯಾಯ |ಧರ್ಮ

ಸಂಸದರನ್ನು ಭಯೋತ್ಪಾದಕ ಎಂದು ನಿಂದಿಸಿದ ರಮೇಶ್ ಬಿಧುರಿಗೆ ಪ್ರಮುಖ ಹುದ್ದೆ ನೀಡಿ ಪ್ರೋತ್ಸಾಹಿಸಿದ ಬಿಜೆಪಿ

ರಮೇಶ್ ಬಿಧುರಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಮೇಲೆ ವಿಷ ಉಗುಳಿದ್ದ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರಿಗೆ ಬಡ್ತಿ ಸಿಕ್ಕಿದೆ.

ಬಿಜೆಪಿ ನಾಯಕತ್ವದಿಂದ ಅವರನ್ನು ರಾಜಸ್ಥಾನದ ಟೋಂಕ್ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ನೇಮಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನದಲ್ಲಿರುವ ರಮೇಶ್ ಬಿಧುರಿ ಅವರು ಬಿಜೆಪಿಯ ಅಲ್ಲಿನ ವ್ಯವಹಾರಗಳನ್ನು ನಿರ್ಣಾಯಕ ಸ್ಥಾನದಲ್ಲಿದ್ದು ನೋಡಿಕೊಳ್ಳಲಿದ್ದಾರೆ.

ಇದೇ ತಿಂಗಳ 22ರಂದು ಲೋಕಸಭೆಯಲ್ಲಿ ಮಾತನಾಡಿದ ಬಿಜೆಪಿ ಸಂಸದ ರಮೇಶ್ ಬಿದುರಿ, ಬಿಎಸ್ ಪಿ ಸಂಸದ ಡ್ಯಾನಿಶ್ ಅಲಿ ಅವರನ್ನು ಭಯೋತ್ಪಾದಕ ಎಂದು ಸಂಬೋಧಿಸಿದ್ದರು. ಇದು ಕೋಲಾಹಲಕ್ಕೆ ಕಾರಣವಾಯಿತು. ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಲೋಕಸಭೆಯ ದಾಖಲೆಗಳಿಂದ ವಿಡಿಯೋ ಅಳಿಸಿ ಹಾಕಿದೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ರಮೇಶ್ ಬಿದುರಿ ಮಾಡಿದ ಆರೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಹ ನೀಡಿದರು.

ಚಂದ್ರಯಾನ 3 ಮಿಷನ್‌ನ ಯಶಸ್ಸಿನ ಬಗ್ಗೆ ಮಾತನಾಡುವಾಗ ರಮೇಶ್ ಬಿಧುರಿ ಅಸಹ್ಯವಾಗಿ ನಾಲಗೆ ಹರಿಬಿಟ್ಟಿದ್ದರು. ಮತ್ತೊಮ್ಮೆ ಇಂತಹ ಹೇಳಿಕೆ ನೀಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಓಂ ಬಿರ್ಲಾ ಎಚ್ಚರಿಸಿದ್ದಾರೆ.

ಮುಸ್ಲಿಂ ಸಂಸದರ ವಿರುದ್ಧ ಪದೇ ಪದೇ ಅನುಚಿತ ಭಾಷೆ ಬಳಸುವುದನ್ನು ಲೋಕಸಭೆಯ ಸ್ಪೀಕರ್ ಖಂಡಿಸಿದರು. ಈ ಹಳಿಕೆಗಳ ಬಗ್ಗೆ ಡ್ಯಾನಿಶ್ ಅಲಿ ನೋವು ವ್ಯಕ್ತಪಡಿಸಿದ್ದಾರೆ. ಹೊಸ ಸಂಸತ್ತಿನ ಸಾಕ್ಷಿಯಾಗಿ ತಮ್ಮನ್ನು ಅವಮಾನಿಸಲಾಗಿದೆ ಎಂದು ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು