Wednesday, June 26, 2024

ಸತ್ಯ | ನ್ಯಾಯ |ಧರ್ಮ

ಸೋಲಿನ ಭೀತಿಯಲ್ಲಿ ನಂಗಾನಾಚ್‌ ಏರ್ಪಡಿಸುತ್ತಿರುವ ಬಿಜೆಪಿ

ಉತ್ತರಭಾರತದಲ್ಲಿ ಈಗ ಚುನಾವಣೆಗಳ ಸರಣಿ. ಆದರೆ ಬಿಜೆಪಿಯಲ್ಲಿ ಯಾಕೋ ಎಲ್ಲವೂ ಸರಿಯಿಲ್ಲ. ಅಲ್ಲಿನ ನಾಯಕರು ಮನಸಿಲ್ಲದ ಮನಸ್ಸಿನಿಂದ ಗದ್ದೆಗಿಳಿಯುವ ಕೋಣಗಳಂತಾಗಿದ್ದಾರೆ. ತಾವು ಹರಕೆಯ ಕುರಿಗಳಾಗಲಿದ್ದೇವೆ ಎನ್ನುವುದು ಬಹುತೇಕ ಅವರಿಗೆ ಚುನಾವಣೆಗೂ ಮೊದಲೇ ಅರಿವಿಗೆ ಬಂದಂತಿದೆ.

ಈ ಬಾರಿ ದಕ್ಷಿಣ ಮಾತ್ರವಲ್ಲದೆ ಉತ್ತರದಲ್ಲೂ ಬಿಜೆಪಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಪಕ್ಷದ ವಿರುದ್ಧ ಗಾಳಿ ಬೀಸುತ್ತಿದೆ ಎಂದು ವರದಿಯಾಗಿದೆ. ಉತ್ತರದಲ್ಲಿ ಸೋಲುವುದಿಲ್ಲ ಎನ್ನುವ ಬಿಜೆಪಿ ನಾಯಕರ ಮಾತು ಗಂಭೀರವಾಗಿ ಕೇಳಿಸಿದರೂ ವಾಸ್ತವ ಸ್ಥಿತಿ ಅದಕ್ಕಿಂತ ಭಿನ್ನವಾಗಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ 72 ಅಭ್ಯರ್ಥಿಗಳನ್ನು ಘೋಷಿಸಿದೆ… ಆದರೆ ಅಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಟಿಕೆಟ್ ಸಿಗದಿರುವುದು ಚರ್ಚೆಗೆ ಗ್ರಾಸವಾಗಿದೆ.

ಸತತ 18 ವರ್ಷಕ್ಕೂ ಹೆಚ್ಚು ಕಾಲ ಸಿಎಂ ಆಗಿರುವ ಚೌಹಾಣ್ ಅವರಿಗೆ ಟಿಕೆಟ್ ಘೋಷಣೆ ಮಾಡದಿರಲು ಸೋಲುವ ಭೀತಿಯೇ ಕಾರಣ ಎಂಬುದು ರಾಜಕೀಯ ವೀಕ್ಷಕರ ಭವಿಷ್ಯ. ಸೋಲಿನ ಭೀತಿಯಿಂದ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರನ್ನು ವಿಧಾನಸಭೆ ಚುನಾವಣೆ ಕಣಕ್ಕೆ ಇಳಿಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಕೇಂದ್ರ ಸಚಿವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕತ್ವ ನಿರ್ಧರಿಸಿದೆ ಎಂದು ವರದಿಯಾಗಿದೆ.

ಮಧ್ಯಪ್ರದೇಶವು ಮೂವರು ಕೇಂದ್ರ ಸಚಿವರು ಮತ್ತು ಏಳು ಸಂಸದರನ್ನು ಹೊಂದಿದೆ

ಮಧ್ಯಪ್ರದೇಶದಲ್ಲಿ ಬಿಜೆಪಿ ಏಳು ಸಂಸದರನ್ನು ಕಣಕ್ಕಿಳಿಸಿದೆ. ಅವರಲ್ಲಿ ಮೂವರು ಕೇಂದ್ರ ಸಚಿವರು ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸೇರಿದ್ದಾರೆ. ಮೂವರು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಫಗನ್ ಸಿಂಗ್ ಕುಲಸ್ತೆ ಆ ಮೂವರು ಸಚಿವರು. ದಶಕದ ನಂತರ ಇಂದೋರ್‌ನಿಂದ ಕೈಲಾಶ್ ವಿಜಯ್ ವರ್ಗೀಯ ಅವರನ್ನು ಕಣಕ್ಕಿಳಿಸಲಾಗಿದೆ. ತೋಮರ್ ಎರಡು ದಶಕಗಳ ನಂತರ ಗ್ವಾಲಿಯರ್‌ನಿಂದ ಕಣಕ್ಕಿಳಿಯುತ್ತಿದ್ದಾರೆ. ಹಿರಿಯ ನಾಯಕರನ್ನು ಕಣಕ್ಕಿಳಿಸಿಯಾದರೂ ಗೆಲ್ಲುವ ಕನಸು ಕಾಣುತ್ತಿದೆ ಬಿಜೆಪಿ. ಏಳು ಸಂಸದರನ್ನು ಕಣಕ್ಕಿಳಿಸಿರುವುದು ಬಿಜೆಪಿಯ ಸೋಲಿನ ಭೀತಿಯ ಸಂಕೇತ ಎಂದು ರಾಜಕೀಯ ವಿರೋಧಿಗಳು ಟೀಕಿಸುತ್ತಿದ್ದಾರೆ.

ಬಿಜೆಪಿ ತನ್ನ ಸೋಲನ್ನು ಈಗಾಗಲೇ ಒಪ್ಪಿಕೊಂಡಿದೆ ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಹೇಳಿದ್ದಾರೆ. ರಾಜ್ಯದಲ್ಲಿ ಮುಳುಗುತ್ತಿರುವ ದೋಣಿಯನ್ನು ಉಳಿಸಲು ಕೇಂದ್ರ ಸಚಿವರು ಮತ್ತು ಸಂಸದರನ್ನು ಕಣಕ್ಕೆ ಇಳಿಸಲಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದ್ದಾರೆ.

ರಾಜಸ್ಥಾನದಲ್ಲೂ ಅದೇ ಪರಿಸ್ಥಿತಿ

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಕೇಂದ್ರ ಸಚಿವರನ್ನು ಕಣಕ್ಕಿಳಿಸುತ್ತಿದೆ. ಕೇಂದ್ರ ಜಲವಿದ್ಯುತ್ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರೊಂದಿಗೆ ಸಂಸದರಾದ ದಿಯಾ ಕುಮಾರಿ ಮತ್ತು ರಾಜ್ಯವರ್ಧನ್ ರಾಥೋಡ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಗಜೇಂದ್ರ ಸಿಂಗ್ ಪ್ರಬಲ ಆಕಾಂಕ್ಷಿಯಾಗಲಿದ್ದಾರೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸಿದರೆ ಮಾಜಿ ಸಿಎಂ ವಸುಂಧರಾ ರಾಜೇ ಅವರಿಂದ ಅಸಹಕಾರ ಎದುರಾಗುವ ಸಾಧ್ಯತೆ ಇದೆ ಎನ್ನುವುದು ಬಿಜೆಪಿ ಲೆಕ್ಕಾಚಾರ. ಈ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಗೆದ್ದಿರುವ ಶಾಸಕರೇ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂಬ ಸೂಚನೆಯನ್ನು ಬಿಜೆಪಿ ನೀಡುತ್ತಿದೆ.

ತೆಲಂಗಾಣ ಕ್ಷೇತ್ರದಲ್ಲಿಯೂ ಸಂಸದರು

ತೆಲಂಗಾಣದಲ್ಲೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಜತೆಗೆ ಮೂವರು ಸಂಸದರು ವಿಧಾನಸಭೆಗೆ ಕಣಕ್ಕಿಳಿಯಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ಭವಿಷ್ಯ ನುಡಿಯುತ್ತಿವೆ. ಈ ಮೂಲಗಳ ಪ್ರಕಾರ ರಾಜ್ಯದಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಭಾಗಶಃ ಬಗೆಹರಿಯಲಿದ್ದು, ಸಂಸದರನ್ನು ಮುನ್ನೆಲೆಗೆ ತಂದು ಪಕ್ಷಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂಬ ನಿರೀಕ್ಷೆ ಬಿಜೆಪಿಗಿದೆ.

ಅಶ್ಲೀಲ ನೃತ್ಯಗಳಿಂದ ಪ್ರೇಕ್ಷಕರನ್ನು ಆಕರ್ಷಿಸುವ ಯತ್ನ

ಬಿಜೆಪಿ ಜನರನ್ನು ಸೆಳೆಯಲು ಅಗ್ಗದ ರಾಜಕಾರಣ ಮಾಡುತ್ತಿದೆ. ಪರಿವರ್ತನ್ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಆಯೋಜಿಸಿದ್ದ ಸಭೆಗಳಿಗೆ ಜನ ಬರದ ಕಾರಣ ಮಹಿಳೆಯರಿಂದ ಅಶ್ಲೀಲ ನೃತ್ಯ ಪ್ರದರ್ಶಿಸಿ ಜನರ ಮನಸೂರೆಗೊಳ್ಳಲು ಬಿಜೆಪಿ ಯತ್ನಿಸಿಸುತ್ತಿದೆ. ಬಿಜೆಪಿ ಕೈಗೊಂಡಿರುವ ಪರಿವರ್ತನ ಸಂಕಲ್ಪ ಯಾತ್ರೆ ಇದೇ ತಿಂಗಳ 25ಕ್ಕೆ ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ಮರುದಿನ ರಾಜಸ್ಥಾನದ ಜೈಪುರದಲ್ಲಿ ಪ್ರಧಾನಿ ಮೋದಿ ಸಭೆ ನಡೆಸಿದರೂ ಯಾರೂ ಬರಲಿಲ್ಲ. ಇದರಿಂದ ವಿಧಾನಸಭಾ ಸ್ಥಾನಗಳಿಗೆ ಕಣದಲ್ಲಿ ನಿಂತಿದ್ದ ಅಭ್ಯರ್ಥಿಗಳು ಮಹಿಳೆಯರಿಂದ ವೇದಿಕೆ ಕಾರ್ಯಕ್ರಮ ಏರ್ಪಡಿಸಿ ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಆಳ್ವಾರ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪರ್ಸಾ ಗ್ರಾಮದಲ್ಲಿ ಕಂಡು ಬಂದಿರುವ ಈ ದೃಶ್ಯ ಬಿಜೆಪಿಯ ಅವನತಿ ರಾಜಕಾರಣದ ಪ್ರತಿಬಿಂಬವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು