Saturday, June 22, 2024

ಸತ್ಯ | ನ್ಯಾಯ |ಧರ್ಮ

ಜೀರಿಗೆ ನೀರು ಕುಡಿಯುವುದರಿಂದ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತಾ..? ಕಡಿಮೆಯಾಗುತ್ತಾ..?

ಜೀರಿಗೆ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದ್ದು ಎಂದೇ ಎಲ್ಲರು ಹೇಳುತ್ತಾರೆ. ಅದನ್ನು ಉಪಯೋಗಿಸುವವರಿಗೆ ಈಗಾಗಲೇ ಲಾಭ ಕೂಡ ಸಿಕ್ಕಿದೆ. ಪಿತ್ತ ಹೆಚ್ಚಾದವರು, ಪದೇ ಪದೇ ತಲೆನೋವು ಬರುತ್ತಿರುವವರು, ನೆಗಡಿ, ಗಂಟಲು ಕೆರೆತ ಇರುವವರು ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವವರು ಬಾಯಲ್ಲಿ ಸ್ವಲ್ಪ ಜೀರಿಗೆಯನ್ನು ಹಾಕಿಕೊಂಡು ಜಗಿದು ತಿನ್ನುತ್ತಾರೆ. ಆಗಾಗ ಜೀರಿಗೆ ಬೆರೆಸಿದ ನೀರನ್ನು ಕುಡಿದಾಗಲೂ ಇದರ ಅನುಕೂಲ ದೊಡ್ಡಮಟ್ಟದ್ದೆ ಆಗಿರುತ್ತದೆ. ಅದರಲ್ಲೂ ಜೀರಿಗೆ ನೀರು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಎಂದೇ ಎಲ್ಲರೂ ನಂಬುತ್ತಾರೆ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಆರೋಗ್ಯದ ಲಾಭಗಳೇನು ಕಡಿಮೆ ಇಲ್ಲ. ಇದನ್ನ ಸಂಶೋಧನೆಯಲ್ಲಿಯೇ ತಿಳಿಸಲಾಗಿದೆ.

ಇತ್ತೀಚಿನ ಅಧ್ಯಯನಗಳು ಹೇಳುವ ಪ್ರಕಾರ ಯಾರು ಖಾಲಿ ಹೊಟ್ಟೆಯಲ್ಲಿ ಜೀರಾ ವಾಟರ್ ಕುಡಿಯುವ ಅಭ್ಯಾಸ ಮಾಡಿ ಕೊಂಡಿರುತ್ತಾರೆ ಮತ್ತು ಇದೇ ಅಭ್ಯಾಸ ವನ್ನು ಎಂಟು ವಾರಗ ಳವರೆಗೆ ಮುಂದುವರೆಸುತ್ತಾರೆ ಅಂತಹವರಿಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಸಾಕಷ್ಟು ಕಡಿಮೆಯಾದ ಬಗ್ಗೆ ಮಾಹಿತಿ ನೀಡಲಾಗಿದೆ. ಒಂದು ಟೀ ಚಮಚ ಜೀರಿಗೆ ಕಾಳುಗಳನ್ನು ಒಂದು ಲೋಟ ನೀರಿನಲ್ಲಿ ಇಡೀ ರಾತ್ರಿ ನೆನೆಹಾಕಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೋಸಿಕೊಂಡು ಕುಡಿಯಿರಿ.

ಇದರಿಂದ ಆರೋಗ್ಯ ಪ್ರಯೋಜನಗಳು ಸುಮಾರಿದೆ. ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ನೀವು ಜೀರಾ ವಾಟರ್ ಕುಡಿ ಯುವ ಅಭ್ಯಾಸ ಇಟ್ಟುಕೊಂಡರೆ ನೀವು ಸೇವಿಸಿದ ಆಹಾರ ಕ್ರಮೇಣವಾಗಿ ಚೆನ್ನಾಗಿ ಜೀರ್ಣವಾಗಲು ಪ್ರಾರಂಭಿಸುತ್ತದೆ. ಅಂದರೆ ನಿಮ್ಮ ಜೀರ್ಣ ಶಕ್ತಿ ಹೆಚ್ಚಾಗುತ್ತದೆ ಮತ್ತು ಮಲಬದ್ಧತೆ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ದೂರವಾಗುತ್ತದೆ. ತೂಕ ಇಳಿಕೆಗೂ ಜೀರಾ ನೀರು ಬಹಳ ಉಪಯೋಗಕಾರಿಯಾಗಿದೆ. ಜೀರಿಗೆಯಲ್ಲಿ ಮಧು ಮೇಹವನ್ನು ನಿರ್ವಹಣೆ ಮಾಡುವ ಗುಣವಿದೆ. ಹೀಗಾಗಿ ಪ್ರತಿದಿನ ಆದಷ್ಟು ಇದರ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿಯಲ್ಲಿ ಜೀರಿಗೆ ನೀರನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಇದು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಜೀರಿಗೆ ಕಬ್ಬಿಣ ಮತ್ತು ಖನಿಜಗಳ ಉತ್ತಮ ಮೂಲವಾಗಿದೆ, ಇದು ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಜೀರಿಗೆ ನೀರನ್ನು ಕುಡಿಯುವುದರಿಂದ ದೇಹವು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

https://fb.watch/nkFT5gybaE/?mibextid=Nif5oz

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಜೀರಿಗೆ ನೀರು ತುಂಬಾ ಪ್ರಯೋಜನಕಾರಿಯಾಗಿದೆ. ರಾತ್ರಿಯಲ್ಲಿ ಜೀರಿಗೆ ನೀರನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತದೊತ್ತಡ ನಿಯಂತ್ರದದಲ್ಲಿರುತ್ತದೆ. ಅಷ್ಟೇ ಅಲ್ಲ, ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಜೀರಿಗೆ ನೀರು ಸೇವಿಸುವುದರಿಂದ ದೇಹಕ್ಕೆ ಅಡ್ಡಪರಿಣಾಮವೇನು ಆಗುವುದಿಲ್ಲ ಎಂದೇ ಹಲವರು ಹೇಳುತ್ತಾರೆ. ಹಾಗಂತ ಎಲ್ಲಾ ಪದಾರ್ಥಗಳು ಎಲ್ಲರ ದೇಹಕ್ಕೂ ಸೇರುವುದಿಲ್ಲ. ಜೀರಿಗೆ ನೀರು ಸೇವನೆ ಹಲವರು ಅಭ್ಯಾಸ ಮಾಡಿಕೊಂಡಿದ್ದಾರೆ, ಲಾಭವನ್ನು ಪಡೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು