Friday, June 14, 2024

ಸತ್ಯ | ನ್ಯಾಯ |ಧರ್ಮ

ಅರಣ್ಯ ವ್ಯಾಪ್ತಿಯಲ್ಲಿ ಮನೆ, ರೆಸಾರ್ಟ್‌ ನಿರ್ಮಾಣಕ್ಕೆ ಅವಕಾಶ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಅರಣ್ಯ ಪ್ರದೇಶದಿಂದ ಒಂದು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಮನೆ, ಕಟ್ಟಡಗಳನ್ನು ನಿರ್ಮಿಸಲು ಇದ್ದಿದ್ದ ನಿರ್ಬಂಧಗಳನ್ನು ಸಡಿಲಿಸಲು ಸರ್ಕಾರ ನಿರ್ಧರಿಸಿರುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ʼಇದುವರೆಗೆ ಕಾಡಿನಿಂದ ಒಂದು ಕಿಲೋಮೀಟರ್‌ ಸುತ್ತಳತೆಯಲ್ಲಿ ಮನೆ, ಕಟ್ಟಡಗಳಂತಹ ನಿರ್ಮಾಣಗಳನ್ನು ರಚಿಸುವಂತಿರಲಿಲ್ಲ. ಈ ಕುರಿತು ಸರ್ಕಾರದ ನಿರ್ಬಂಧವಿತ್ತು.

ಇನ್ನು ಮುಂದೆ ಇಂತಹ ಖಾಸಗಿ ಮಾಲಿಕತ್ವದ ಭೂಮಿಯಲ್ಲಿ ಫಾರಂ ಹೌಸ್‌, ರೆಸಾರ್ಟ್‌, ಸಾ ಮಿಲ್‌, ಪವನ ವಿದ್ಯುತ್‌ ಘಟಕಗಳನ್ನು ನಿರ್ಮಾಣ ಮಾಡಬಹುದು. ಇದಕ್ಕೆ ಅನುಮತಿಯೂ ಸಿಗಲಿದೆʼ ಎಂದು ಸಂಪುಟ ಉಪಸಮಿತಿ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಾ ಮಾಹಿತಿ ನೀಡಿದರು.

ರಾಜ್ಯದಲ್ಲಿ ಸುಮಾರು ಈ ಮಾದರಿಯ 35 ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 29 ಪ್ರದೇಶಗಳಲ್ಲಿ ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡಲು ಸಹಮತ ವ್ಯಕ್ತವಾಗಿತ್ತು. ನಾಗರಹೊಳೆ ಸೇರಿ ಇನ್ನೂ 6 ಪ್ರದೇಶಗಳಲ್ಲಿ ಈ ನಿರ್ಬಂಧವನ್ನು ಸಡಿಲಿಸುವ ಕುರಿತು ಸಹಮತ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು