Wednesday, June 26, 2024

ಸತ್ಯ | ನ್ಯಾಯ |ಧರ್ಮ

Maharashtra Vs Karnataka : ಗಡಿ ವಿಚಾರದಲ್ಲಿ ಮತ್ತೆ ಖ್ಯಾತೆ ತಗೆಯುತ್ತಿರುವ ಮಹಾರಾಷ್ಟ್ರ

ಬೆಳಗಾವಿ : ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಬೆಳಗಾವಿ ಗಡಿ ವಿಚಾರದಲ್ಲಿ ಮತ್ತೆ ಮಹಾರಾಷ್ಟ್ರ ಖ್ಯಾತೆ ತೆಗೆಯಲು ಮುಂದಾಗಿದೆ. ಮುಂಬೈನಲ್ಲಿ MES ಸದಸ್ಯರ ಜೊತೆ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಸಭೆ ನಡೆಸಿ, ಕೆಲವು ಅಗತ್ಯ ಭರವಸೆ ಬಗ್ಗೆ ಮಾತನಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಗಡಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆಯವರು MES ಸದಸ್ಯರ ಜೊತೆ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ್ದಾರೆ. ಅದರಂತೆ MES ನ ಬಹು ದಿನಗಳ ಬೇಡಿಕೆಯಂತೆ, ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದ 865 ಹಳ್ಳಿಗಳ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಯೋಜನೆ ವಿಚಾರವಾಗಿ ಚರ್ಚೆ ನಡೆಸಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇಷ್ಟೆ ಅಲ್ಲದೇ ಗಡಿ ಪ್ರದೇಶದ ಮರಾಠಿ ಭಾಷಿಕರಿಗಾಗಿ ಗಡಿಭಾಗದಲ್ಲಿ ಪ್ರತ್ಯೇಕ ಕಚೇರಿ ಸ್ಥಾಪನೆ ಮಾಡುವುದರ ಬಗ್ಗೆ ಕೂಡ ಚರ್ಚೆ ನಡೆದಿದೆ. ಇದರ ಮುಂದುವರಿದ ಭಾಗವಾಗಿ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಚಂದಗಡ್‌ನಲ್ಲಿ ಕಚೇರಿ ಸ್ಥಾಪನೆ ಮಾಡುವುದಕ್ಕೆ ಮಹಾರಾಷ್ಟ್ರ ಸರ್ಕಾರ MES ನೇತೃತ್ವದಲ್ಲಿ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು