Monday, June 17, 2024

ಸತ್ಯ | ನ್ಯಾಯ |ಧರ್ಮ

ಇಸ್ರೇಲ್-ಪ್ಯಾಲೆಸ್ತೈನ್‌ ಸಂಘರ್ಷ: ಮುಸ್ಲೀಂ ಬಾಲಕನನ್ನು 26 ಬಾರಿ ಇರಿದುಕೊಂದ ಅಮೇರಿಕಾದ ವ್ಯಕ್ತಿ!

ಬೆಂಗಳೂರು,ಅಕ್ಟೋಬರ್.‌16: ಅಮೇರಿಕಾದ ಇಲಿನಾಯ್ಸ್‌ನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘೆರ್ಷದಿಂದ ಪ್ರಭಾವಿತನಾದ ವ್ಯಕ್ತಿಯೋರ್ವ  ಆರು ವರ್ಷದ ಮುಸ್ಲಿಂ ಬಾಲಕನನ್ನು 26 ಬಾರಿ ಇರಿದು ಕೊಲೆ ಮಾಡಿದ್ದಾನೆ. ಮಗುವಿನ 32 ವರ್ಷದ ತಾಯಿ ಕೂಡ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ ಆದರೆ ಬದುಕುಳಿಯುವ ನಿರೀಕ್ಷೆಯಿದೆ ಎಂದು ವಿಲ್ ಕೌಂಟಿ ಶೆರಿಫ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಇದನ್ನು ಭಯಾನಕ ಕೃತ್ಯ ಎಂದು ಖಂಡಿಸಿದ್ದಾರೆ.

ಈ ಘಟನೆ ನಡೆದ ತಕ್ಷಣ ಅಧಿಕಾರಿಗಳು ತಾಯಿ ಹಾಗೂ ಮಗನ ಹೆಸರನ್ನು ತಿಳಿಸದೇ ಇದ್ದರೂ, ಬಾಲಕನ ತಂದೆಯ ಚಿಕ್ಕಪ್ಪ ಯೂಸೆಫ್ ಹ್ಯಾನನ್ Chicago chapter Council on American-Islamic Relations ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ್ದು, ಕೊಲೆಯಾದ ಪ್ಯಾಲೆಸ್ಟೀನಿಯನ್ ಅಮೇರಿಕನ್ ಬಾಲಕನನ್ನು ವಡೆಯಾ ಅಲ್-ಫಾಯೂಮ್ ಎಂದೂ, ಅವನ ತಾಯಿಯನ್ನು ಹನಾನ್ ಶಾಹಿನ್ ಎಂದು ಗುರುತಿಸಲಾಗಿದೆ.

ಆರೋಪಿ ಜೋಸೆಫ್ ಕ್ಜುಬಾ,71

71 ವರ್ಷದ ಜೋಸೆಫ್ ಕ್ಜುಬಾ ಎಂಬಾತ ಕೊಲೆಯ ಆರೋಪಿಯಾಗಿದ್ದು,  ಬಾಲಕನನ್ನು 7-ಇಂಚಿನ (18-ಸೆಂ) ಬ್ಲೇಡ್‌ ಇರುವ  ಮಿಲಿಟರಿ ಶೈಲಿಯ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ವಿಲ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. ಶವಪರೀಕ್ಷೆಯ ಸಂದರ್ಭದಲ್ಲಿ ಬಾಲಕನ ಹೊಟ್ಟೆಯಿಂದ ಈ ಚಾಕುವನ್ನು ಹೊರಗೆ ತೆಗೆಯಲಾಗಿದೆ. ಈ ತಾಯಿ ಹಾಗೂ ಮಗನ ಲ್ಯಾಂಡ್‌ಲಾರ್ಡ್‌ (ಮಾಲೀಕ)ನಾಗಿರುವ ಕೊಲೆಯ ಆರೋಪಿಯ ಜೊತಗೆ ಮಹಿಳೆ ಕಾದಾಡಿ, ಕೊನೆಗೆ  911 ಗೆ ಕರೆ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಮಾಡುವಾಗ ಕೊಲೆಗಾರ ಮಗು ಹಾಗೂ ತಾಯಿಗೆ “ನೀವು ಮುಸ್ಲೀಮರು ಸಾಯಬೇಕು ಎಂದು ಹೇಳಿರುವುದು ವರದಿಯಾಗಿದೆ. ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ನಡುವಿನ ಸಂಘರ್ಷದ ಹಿನ್ನಲೆಯಲ್ಲಿ ಹಬ್ಬಲಾಗುತ್ತಿರುವ ಇಸ್ಲಮೋಫೋಭಿಕ್‌ ನರೇಟಿವ್‌ಗಳಿಂದ ಪ್ರಭಾವಿತನಾಗಿ ಇಂತಹ ಹೇಐ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು