Friday, June 21, 2024

ಸತ್ಯ | ನ್ಯಾಯ |ಧರ್ಮ

ಇದು ಯಾವ ರೀತಿಯ ಪ್ರಜಾಪ್ರಭುತ್ವ ಸರ್ಕಾರ ? : ಯು.ಟಿ. ಖಾದರ್‌

ಮಂಗಳೂರು : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸರ್ಕಾರ ಹತ್ಯೆಯಾದ ಪ್ರವೀಣ್‌ ಕುಟುಂಬಕ್ಕೆ ಪರಿಹಾರ ನೀಡಿದ್ದು, ಇದೇ ವೇಳೆ ಹತ್ಯೆಯಾಗಿರುವ ಮಸೂಧ್‌ ಮತ್ತು ಫಾಝಿಲ್‌ ಕುಟುಂಬಕ್ಕೆ ಪರಿಹಾರ ನೀಡದಿರುವುದನ್ನ ಖಂಡಿಸಿ ವಿಧಾನಸಭೆಯ ಕಾಂಗ್ರೆಸ್ ಉಪನಾಯಕ ಯು.ಟಿ. ಖಾದರ್,  ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಪ್ರವೀಣ್‌ ಹತ್ಯೆಯಾದ ಬಳಿಕ ಬಸವರಾಜ್‌ ಬೊಮ್ಮಾಯಿ ಮನೆಗೆ ತೆರಳಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಕುಟುಂಬಕ್ಕೆ  25 ಲಕ್ಷ ಹಣ ಪರಿಹಾರ ನೀಡಿದ್ದಾರೆ. ಈ ವಿಚಾರವಾಗಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ʼಖಾದರ್‌ʼ ಒಬ್ಬ ರಾಜ್ಯದ ಮುಖ್ಯಮಂತ್ರಿ,  ಈ ರೀತಿಯ ಘಟನೆಗಳಾದಾಗ ಒಂದು ಕುಟುಂಬಕ್ಕೆ ಮಾತ್ರ ಸಮಾಧಾನ ಹೇಳುವುದು ಪರಿಹಾರ ಘೋಷಿಸುವುದು, ಇನ್ನೊಬ್ಬರಿಗೆ ಪರಿಹಾರ ಘೋಷಿಸದೆ ಇರುವಂತದ್ದು ಎಷ್ಟರಮಟ್ಟಿಗೆ ಸರಿ, ಇದು ಯಾವ ರೀತಿಯ ಪ್ರಜಾಪ್ರಭುತ್ವ ಸರ್ಕಾರ ಎಂದು  ಕಿಡಿಕಾರಿದ್ದಾರೆ. ಪ್ರತಿಯೊಬ್ಬ ತಾಯಿಗೂ ತನ್ನ ಮಕ್ಕಳನ್ನ ಕಳೆದುಕೊಂಡಾಗ ನೋವಾಗುತ್ತದೆ. ಅದರ ಬದಲು ಪ್ರವೀಣ್‌ ತಾಯಿಗೆ ಬೇರೆ ಮಸೂಧ್‌ ಮತ್ತು ಫಾಝಿಲ್‌ ತಾಯಂದಿರಿಗೆ ಬೇರೆ ನೋವು ಇರುವುದಿಲ್ಲ. ಎಲ್ಲಾ ತಾಯಂದಿರಿಗೂ ಸಮಾನ ನೋವಿರುತ್ತದೆ, ಆದರೆ ಬೊಮ್ಮಾಯಿ ಅವರು ಒಂದು ಕುಟುಂಬಕ್ಕೆ ಮಾತ್ರ ಸಮಾಧಾನ ಹಾಗೂ ಪರಿಹಾರ ನೀಡಿ ಉಳಿದ ಕುಟುಂಬಗಳಿಗೆ ಏನೂ ಹೇಳದೆ ಹೋಗಿರುವುದು ಸಮಂಜಸವಲ್ಲ. ಹಾಗಾಗಿ ಉಳಿದ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

Related Articles

ಇತ್ತೀಚಿನ ಸುದ್ದಿಗಳು