Monday, June 17, 2024

ಸತ್ಯ | ನ್ಯಾಯ |ಧರ್ಮ

ಸಂತ್ರಸ್ತೆಯ ವಿವಾಹಕ್ಕೆ ಒಪ್ಪಿಗೆ : ಪೋಕ್ಸೋ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಕೋಲಾರದ ಚಿಂತಾಮಣಿ ಟೌನ್ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣವೊಂದನ್ನು ಮಹತ್ವದ ಬೆಳವಣಿಗೆಯಡಿಯಲ್ಲಿ ಹೈಕೋರ್ಟ್ ರದ್ದುಗೊಳಿಸಿದೆ. ಸಂತ್ರಸ್ತ ಯುವತಿಯ ಮನವಿಯ ಮೇರೆಗೆ ಷರತ್ತಿನ ಅಡಿಯಲ್ಲಿ ಹೈಕೋರ್ಟ್ ರದ್ದು ಮಾಡಿದೆ ಎಂದು ತಿಳಿದು ಬಂದಿದೆ.

ಅತ್ಯಾಚಾರ, ಪೋಕ್ಸೋ ಪ್ರಕರಣದ ಸಂತ್ರಸ್ತ ಯುವತಿ, ಹೈಕೋರ್ಟ್ ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಆರೋಪಿಯೊಂದಿಗೆ ವಿವಾಹವಾಗುವುದಾಗಿ ಹೇಳಿಕೆ ನೀಡಿದ್ದಾರೆ. ಅಷ್ಟೆ ಅಲ್ಲದೆ ಜೈಲಿನಲ್ಲಿರುವ ಆರೋಪಿಯೂ ತನ್ನನ್ನು ವಿವಾಹವಾಗಲು ಒಪ್ಪಿದ್ದಾಗಿ ತಿಳಿಸಿದ್ದಾರೆ.

ಸಂತ್ರಸ್ತ ಯುವತಿ ಈಗ ವಯಸ್ಕಳಾಗಿದ್ದು, ಆರೋಪಿಯೊಂದಿಗೆ ವಿವಾಹದ ಬೇಡಿಕೆ ಇಟ್ಟಿದ್ದರು. ಜೈಲಿನಲ್ಲಿದ್ದ ಆರೋಪಿಗೆ ವಿವಾಹದ ಬಗ್ಗೆ ಮನವರಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯೂ ಮದುವೆಗೆ ಒಪ್ಪಿದ್ದಾನೆ. ಹಾಗಾಗಿ ಪ್ರಕರಣ ರದ್ದುಪಡಿಸುವಂತೆ ಅತ್ಯಾಚಾರ ಸಂತ್ರಸ್ತೆ ಮನವಿ ಮಾಡಿದ್ದರು.

ಇನ್ನು ಜೈಲಿನಿಂದ ಕೋರ್ಟ್ ಗೆ ಹಾಜರು ಪಡಿಸಿದ್ದ ಆರೋಪಿಯೂ ಸಂತ್ರಸ್ತೆಯನ್ನು ವಿವಾಹವಾಗಲು ಒಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಅತ್ಯಾಚಾರ, ಪೋಕ್ಸೋ ಕೇಸ್ ರದ್ದುಗೊಳಿಸಿ, ಒಂದು ತಿಂಗಳೊಳಗಾಗಿ ವಿವಾಹವಾಗುವಂತೆ ಷರತ್ತು ವಿಧಿಸಿ ಮಹತ್ವದ ಆದೇಶ ನೀಡಿದೆ.

ಈ ಮೂಲಕ ಚಿಂತಾಮಣಿ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ, ಪೋಕ್ಸೋ ಕೇಸ್ ನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು