Tuesday, June 18, 2024

ಸತ್ಯ | ನ್ಯಾಯ |ಧರ್ಮ

ಇಂಧನ ಸಚಿವರ ವಿರುದ್ಧ ಪೋಸ್ಟ್:‌ ಬಿಎಸ್‌ಆರ್‌ ಪಕ್ಷದ ಐಟಿ ಸೆಲ್‌ ಸಿಬ್ಬಂದಿ ಬಂಧನ

ಬೆಂಗಳೂರು: ಕರ್ನಾಟಕದ ಇಂಧನ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಪೋಸ್ಟ್ ಮಾಡಿದ ಆರೋಪದ ಮೇಲೆ ಶನಿವಾರ ತೆಲಂಗಾಣದ ಸೈಬರ್ ಕ್ರೈಮ್ ಪೊಲೀಸರು ಬಿಎಸ್‌ಆರ್ ಪಕ್ಷದ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು 33 ವರ್ಷದ ರವಿಕಾಂತ್ ಶರ್ಮಾ ಎಂದು ಗುರುತಿಸಲಾಗಿದ್ದು, ತೆಲಂಗಾಣದ ಕರೀಂನಗರದ ನಿವಾಸಿ ಮಾಜಿ ಕಾರ್ಪೊರೇಟರ್ ಪುತ್ರ.

ರವಿಕಾಂತ್ ಸಚಿವ ಜಾರ್ಜ್ ವಿರುದ್ಧ ಪೋಸ್ಟ್ ಹಾಕಿ ಅದರಲ್ಲಿ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹ ಜ್ಯೋತಿ, ಉಚಿತ ವಿದ್ಯುತ್ ಯೋಜನೆ ಕುರಿತು ಚರ್ಚಿಸುವ ನಕಲಿ ಆಡಿಯೊ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದ.

ನಂತರ ಪೋಸ್ಟ್ ಮತ್ತು ಆಡಿಯೊ ಕ್ಲಿಪ್ಪನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಯಿತು.

ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೂರ್ವ ವಿಭಾಗದಲ್ಲಿ ದೂರು ದಾಖಲಾಗಿತ್ತು.

ಆರೋಪಿಯ ತಂದೆ ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷದೊಂದಿಗೆ ಸಂಬಂಧ ಹೊಂದಿದ್ದು, ಅವರ ತಂದೆ-ತಾಯಿ ಇಬ್ಬರೂ ಕಾರ್ಪೊರೇಟರ್‌ಗಳಾಗಿದ್ದರು.

Related Articles

ಇತ್ತೀಚಿನ ಸುದ್ದಿಗಳು