Monday, June 24, 2024

ಸತ್ಯ | ನ್ಯಾಯ |ಧರ್ಮ

ರಾಜ್ಯಸಭಾಧ್ಯಕ್ಷರ ಅಣಕು : ನಾಚಿಕೆಗೇಡು ಎಂದ ಜಗದೀಪ್ ಧನ್ಕರ್

ರಾಜ್ಯಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ರಾಜ್ಯಸಭೆಯಲ್ಲಿ ನಡೆದುಕೊಂಡ ರೀತಿಯನ್ನು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅಣುಕಿಸಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿದ ಜಗದೀಪ್ ಧನ್ಕರ್ ಇದೊಂದು ನಾಚಿಕೆಗೇಡಿನ ಕೃತ್ಯ ಎಂದು ಕಿಡಿಕಾರಿದ್ದಾರೆ.

ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯವನ್ನು ಪ್ರಸ್ತಾಪಿಸಿ, ಸಂಸದ ಪ್ರತಾಪ್ ಸಿಂಹ ಮತ್ತು ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಗೆ ಪಟ್ಟು ಹಿಡಿದ ವಿರೋಧ ಪಕ್ಷದ ಸಂಸದರನ್ನು ಇಂದು ಸದನ ಮುಗಿಯುವ ವರೆಗೂ ಅಮಾನತಿನಲ್ಲಿ ಇಡಲಾಗಿದೆ. ಇದೇ ಕಾರಣಕ್ಕೆ ಇಂದು ದಾಖಲೆ ಮಟ್ಟದ 49 ಸಂಸದರನ್ನು ಇಂದು ಒಂದೇ ದಿನ ಅಮಾನತು ಮಾಡಲಾಗಿದೆ.

ಇದೇ ಕಾರಣಕ್ಕೆ ಸಂಸತ್ತಿನ ಮೆಟ್ಟಿಲುಗಳ ಮೇಲೆ ಅಮಾನತುಗೊಂಡ ಸಂಸದರು ಪ್ರತಿಭಟಿಸುವಾಗ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್ ರನ್ನು ಅಣಕಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ವಿಡಿಯೋ ಚಿತ್ರೀಕರಣ ನಡೆಸಸಿದ್ದಾರೆ.

ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯವನ್ನು ಎತ್ತುವಾಗ ವಿರೋಧ ಪಕ್ಷದ ಸದಸ್ಯರು ಸದನದಲ್ಲಿ ಕೋಲಾಹಲವನ್ನ ಸೃಷ್ಟಿಸುವುದನ್ನ ಮುಂದುವರಿಸಿದ ನಂತರ ರಾಜ್ಯಸಭೆಯನ್ನ ಊಟದ ಪೂರ್ವ ಅವಧಿಯಲ್ಲಿ ಎರಡು ಬಾರಿ ಮುಂದೂಡಲಾಯಿತು. ಸಂಸದರು ಸ್ಪೀಕರ್ ಮತ್ತು ಅಧ್ಯಕ್ಷರನ್ನು ಅಣುಕಿಸುವ ಮತ್ತು ಕೃತ್ಯದ ವೀಡಿಯೊಗ್ರಫಿಯ ವಿಷಯವನ್ನ ಪ್ರಸ್ತಾಪಿಸಿದ ಅಧ್ಯಕ್ಷರು, ಇದು ನಾಚಿಕೆಗೇಡಿನ ಸಂಗತಿ ಮತ್ತು ಇದಕ್ಕೂ ಮಿತಿ ಇರಬೇಕು ಎಂದು ಕಿಡಿಕಾರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು