Monday, June 17, 2024

ಸತ್ಯ | ನ್ಯಾಯ |ಧರ್ಮ

ಪರಿಹಾರ ಸಮಿತಿಯೇ ದೊಡ್ಡ ಸಮಸ್ಯೆ: ಜಾತಿ ತಾರತಮ್ಯದ ವಿಷಯದಲ್ಲಿ ಕುರುಡಾದ ಯುಜಿಸಿ

ಮುಂಬಯಿ: ವಿಶ್ವವಿದ್ಯಾನಿಲಯ ಆವರಣದಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಮುಂದಾಗಿರುವ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.

ಜಾತಿ ತಾರತಮ್ಯಕ್ಕೆ ತಮ್ಮ ಮಕ್ಕಳನ್ನು ಕಳೆದುಕೊಂಡ ಇಬ್ಬರು ತಾಯಂದಿರು ನ್ಯಾಯ ಕೋರಿ ಅರ್ಜಿ ಸಲ್ಲಿಸಿ ಐದು ವರ್ಷ ಕಳೆದರೂ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ನೇಮಿಸಿದ ಒಂಬತ್ತು ಸದಸ್ಯರ ಸಮಿತಿ ಇದುವರೆಗೆ ಯಾವುದೇ ಪರಿಹಾರವನ್ನು ಸೂಚಿಸಿಲ್ಲ.

ಬದಲಿಗೆ ಈ ಸಮಿತಿಯೇ ಈಗ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಲು ಉತ್ತರದಾಯಿತ್ವ ಮತ್ತು ಸೂಕ್ತ ಕಾರ್ಯವಿಧಾನವನ್ನು ಕೋರಿ ಅಬೇದ ತಾದ್ವಿ ಮತ್ತು ರಾಧಿಕಾ ವೇಮುಲಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ‘ಗಂಭೀರ’ ಮತ್ತು ‘ಸೂಕ್ಷ್ಮ’ ಎಂದು ಬಣ್ಣಿಸಿದೆ.

ಈ ಹಿನ್ನೆಲೆಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಲಭ್ಯವಿರುವ ನಿಯಮಗಳು ಮತ್ತು ಯೋಜನೆಗಳನ್ನು ಪರಿಶೀಲಿಸಲು ಯುಜಿಸಿ 9 ಸದಸ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ನೇಮಿಸಿದೆ. ಅಂದಿನಿಂದ ಈ ಸಮಿತಿ ಕೇವಲ ಮೂರು ಬಾರಿ ಸಭೆ ನಡೆಸಿದೆ.

ತಮಾಷೆಯೆಂದರೆ ಈ ಸಮಿತಿಯ ಸದಸ್ಯರ ಮೇಲೆಯೇ ಜಾತಿ ತಾರತಮ್ಯದ ಆರೋಪಗಳಿವೆ. ಸಮಿತಿಯ ನೇತೃತ್ವ ವಹಿಸಿರುವ ಮಹಾರಾಜ ಕೃಷ್ಣಕುಮಾರ್ ಸಿಂಗ್‌ಜಿ ಭಾವನಗರ ವಿಶ್ವವಿದ್ಯಾಲಯದ ಮಾಜಿ ವಿಸಿ ಶೈಲೇಶ್ ಎನ್ ಜಲಾ ಅವರು ಈ ಹಿಂದೆ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಎವಿಬಿಪಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಈ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಸತ್ಯವತಿ ಕಾಲೇಜಿನ (ದೆಹಲಿ) ಹಂಗಾಮಿ ಪ್ರಾಂಶುಪಾಲರಾದ ಡಾ.ವಿಜರು ಶಂಕರ್ ಮಿಶ್ರಾ ಅವರು ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಅನುಸರಿಸದ ಟೀಕೆ ಎದುರಿಸುತ್ತಿದ್ದಾರೆ. ಇಂತಹ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಏತನ್ಮಧ್ಯೆ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ರೋಹಿತ್ ವೇಮುಲಾ ಮತ್ತು ಪಾಯಲ್ ತದ್ಮಿ ಅವರ ಆತ್ಮಹತ್ಯೆಗಳಲ್ಲದೆ, ಕಳೆದ ಎರಡು ದಶಕಗಳಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಅನೇಕ ಆತ್ಮಹತ್ಯೆಗಳನ್ನು ಉಲ್ಲೇಖಿಸಲಾಗಿದೆ. ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಎಚ್ಚರಿಕೆ ನೀಡಿ ಸುಮ್ಮನಾಗಿದ್ದಾರೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು