Sunday, June 23, 2024

ಸತ್ಯ | ನ್ಯಾಯ |ಧರ್ಮ

ರಾಮನಗರಕ್ಕೆ ನೀರು ಹರಿಸಿದರೆ ರಕ್ತಪಾತವಾಗುತ್ತದೆ: ಶಾಸಕ ಬಿ.ಸುರೇಶ ಗೌಡ

ತುಮಕೂರು: ಶಾಸಕ ಬಿ. ಎಕ್ಸ್ ಪ್ರೆಸ್ ಕಾಲುವೆ ಮೂಲಕ ರಾಮನಗರ ಮತ್ತು ಮಾಗಡಿಗೆ ಹೇಮಾವತಿ ನೀರು ಹರಿಸಿದರೆ ಜಿಲ್ಲೆಯಲ್ಲಿ ರಕ್ತಪಾತವಾಗಲಿದೆ ಎಂದು ಸುರೇಶ್ ಗೌಡ ಎಚ್ಚರಿಸಿದರು.

ತಾಲೂಕಿನ ಹೆಬ್ಬೂರಿನಲ್ಲಿ ಶುಕ್ರವಾರ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಹೆಸರು ಹೇಳದೆ, ‘ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಲ್ಲಾ ಪಕ್ಷಗಳಲ್ಲಿನ ಕೆಲವು ದುರುಳರು, ಅಪ್ಪಾಜಿ ಅಪ್ಪಾಜಿ ಎಂದು ಹೇಳಿಕೊಂಡೇ ದೇವೇಗೌಡರನ್ನು ಸೋಲಿಸಿದರು’ ಎಂದು ವ್ಯಂಗ್ಯವಾಡಿದರು.

ದೇಶದ ಭದ್ರತೆ ಮತ್ತು ಉಳಿವಿಗಾಗಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಕೂಡ ಬಿಜೆಪಿಯತ್ತ ವಾಲುತ್ತಿದ್ದಾರೆ. ಮುಂದಿನ 5 ವರ್ಷಗಳ ಕಾಲ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಮತ್ತಷ್ಟು ಪ್ರಗತಿಯತ್ತ ಸಾಗಲಿದೆ. ಮೈತ್ರಿಕೂಟದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ‘ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನನಗೆ ಅಧಿಕಾರ ಸಿಕ್ಕಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಇಲ್ಲಿನ ಜನರು ಹೆಚ್ಚು ಮತ ಹಾಕಬೇಕುʼ ಎಂದು ವಿನಂತಿಸಿದರು.

ಶಾಸಕ ಕೆ.ಗೋಪಾಲಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಮುಖಂಡರಾದ ನೆ.ಲ.ನರೇಂದ್ರಬಾಬು, ವೈ.ಎಚ್.ಹುಚ್ಚಯ್ಯ, ಗೂಳೂರು ಶಿವಕುಮಾರ್‌, ಶಂಕರ್‌, ನಾಗವಲ್ಲಿ ರಾಮಣ್ಣ, ಸಿದ್ದೇಗೌಡ, ಬೆಳಗುಂಬ ಪ್ರಭಾಕರ, ಕೆ.ಬಿ.ರಾಜಣ್ಣ ಇತರರು ಸಭೆಯಲ್ಲಿ ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು