Thursday, June 13, 2024

ಸತ್ಯ | ನ್ಯಾಯ |ಧರ್ಮ

ಮೋದಿ ಚೀನಾ ಹೆಸರು ಹೇಳುವುದಕ್ಕೂ ಹೆದರುತ್ತಾರೆ: ಕಾಂಗ್ರೆಸ್‌ ಟೀಕೆ

ಹೊಸದೆಹಲಿ. ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರನ್ನು ಬದಲಾಯಿಸುವ ಚೀನಾದ ಹೇಳಿಕೆಗಳ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಮನೀಶ್ ತಿವಾರಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮನೀಶ್ ತಿವಾರಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ದುರ್ಬಲ ಮತ್ತು ಶರಣಾಗತಿಯ ಪ್ರತಿಕ್ರಿಯೆಯು ಭಾರತ ಸರ್ಕಾರ ಮತ್ತು ಅದರ ವಿದೇಶಾಂಗ ಸಚಿವರಿಗೆ ಸರಿಹೊಂದುವುದಿಲ್ಲ ಎಂದು ಹೇಳಿದರು.

ʼನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ ಆ ಮನೆ ನನ್ನದಾಗುತ್ತದೆಯೇ?’ ಎಂದು ವಿದೇಶಾಂಗ ಸಚಿವರು ಹೇಳಿದ್ದರು. ಕೇಂದ್ರ ಸರ್ಕಾರದ ಧೋರಣೆಯನ್ನು ಗುರಿಯಾಗಿಟ್ಟುಕೊಂಡ ತಿವಾರಿ, “ಕಚ್ಚತೀವು ದ್ವೀಪದ ಬಗ್ಗೆ ಜೋರಾಗಿ ಮಾತನಾಡುವವರು ಚೀನಾದ ಹೆಸರನ್ನು ತೆಗೆದುಕೊಳ್ಳಲು ಹೆದರುತ್ತಾರೆ” ಎಂದು ಹೇಳಿದರು.

ಕಚ್ಚತೀವು ಬಗ್ಗೆ ಮಾತನಾಡುವವರು ಇಂದಿರಾಗಾಂಧಿ ಅವರು 1971ರಲ್ಲಿ ವಿಶ್ವದ ಭೌಗೋಳಿಕತೆಯನ್ನು ಬದಲಾಯಿಸಿದ್ದರು ಎಂಬುದನ್ನು ಮರೆತುಬಿಡುತ್ತಾರೆ ಎಂದು ಕಾಂಗ್ರೆಸ್ ಸಂಸದರು ಹೇಳಿದರು. ಅವರು ಅಮೆರಿಕ, ಅದರ ಜಗತ್ತಿನ ಏಳನೇ ಅತಿದೊಡ್ಡ ನೌಕಾಪಡೆ ಅಥವಾ ಪಾಶ್ಚಿಮಾತ್ಯ ದೇಶಗಳ ಬಗ್ಗೆಯೂ ಹೆದರುತ್ತಿರಲಿಲ್ಲ.

ಪ್ರಧಾನಿ ಇಂದಿರಾಗಾಂಧಿ ಅವರು ಪೂರ್ವ ಪಾಕಿಸ್ತಾನದ ಜನರು ಎದುರಿಸುತ್ತಿರುವ ಚಿತ್ರಹಿಂಸೆಯಿಂದ ಜನರನ್ನು ಕಾಪಾಡಿದ್ದರು. ನಿಮ್ಮ ಚಿಲ್ಲರೆ ರಾಜಕೀಯ ಲಾಭಕ್ಕಾಗಿ ದೇಶದ ಹೆಸರನ್ನು ಹಾಳು ಮಾಡುವ ಇಂತಹ ವಿಷಯಗಳನ್ನು ಮುನ್ನೆಲೆಗೆ ತರಬೇಡಿ ಎಂದು ಬಿಜೆಪಿಗೆ ಆಗ್ರಹಿಸುತ್ತೇನೆ” ಎಂದು ಅವರು ಹೇಳಿದರು.

“ನಾವು ಅವರಿಗೆ ಎರಡು ಪ್ರಶ್ನೆಗಳನ್ನುಕೇಳುತ್ತೇವೆ:

  1. ಮೇ 2020ರಿಂದ ಭಾರತದ ಎಷ್ಟು ಭೂಮಿ ಚೀನಾ ನಿಯಂತ್ರಣದಲ್ಲಿದೆ?
  2. ಮೋದಿ ಸರಕಾರ ಆ ಭೂಮಿಯನ್ನು ಏಕೆ ವಶಪಡಿಸಿಕೊಂಡಿಲ್ಲ?”

ಕಾಂಗ್ರೆಸ್ ನಾಯಕ ಮುಂದುವರೆದು, “ಇವತ್ತಿಗೆ ಸುಮಾರು 4 ವರ್ಷಗಳು ಕಳೆದಿವೆ – ಚೀನಾದ ಸೇನೆಯು ಭಾರತದ ಗಡಿಯೊಳಗೆ ನುಸುಳಿದೆ, ಆದರೆ ಮೋದಿ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜನವರಿ 2023ರಲ್ಲಿ, ಅಂದಿನ ಹಂಗಾಮಿ ಎಸ್‌ಎಸ್‌ಪಿ ತಮ್ಮ ಸಂಶೋಧನಾ ಪ್ರಬಂಧದಲ್ಲಿ “ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ 65 ಗಸ್ತು ಕೇಂದ್ರಗಳಲ್ಲಿ 26 ಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮೋದಿ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ” ಎಂದು ಬರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು