Monday, June 17, 2024

ಸತ್ಯ | ನ್ಯಾಯ |ಧರ್ಮ

ರಾಘವೇಂದ್ರ ಕಣದಿಂದ ಹಿಂದೆ ಸರಿಯಲಿ, ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿ – ಈಶ್ವರಪ್ಪ

ಶಿವಮೊಗ್ಗ: ಲೋಕಸಭಾ ಕಣಕ್ಕೆ ಇಳಿಯದಂತೆ ನಿಮ್ಮಣ್ಣ ರಾಘವೇಂದ್ರಗೆ ಹೇಳು. ನೀನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು. ಆಗ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಈಶ್ವರಪ್ಪ ಖಡಕ್‌ ಆಗಿ ಹೇಳಿದ್ದಾರೆ.

ʼಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಿʼ ಎನ್ನುವ ವಿಜಯೇಂದ್ರ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಈಶ್ವರಪ್ಪ ಮೇಲಿನಂತೆ ಹೇಳಿಕೆ ನೀಡಿದ್ದಾರೆ.

“ಕೇಂದ್ರದ ನಾಯಕರು ಈಶ್ವರಪ್ಪನವರ ಜೊತೆ ಮಾತಾಡುತ್ತಾರೆ ಎಂದು ಹೇಳಲು ನಿನಗೆ ಅಧಿಕಾರ ಕೊಟ್ಟವನು ಯಾರು? ಎಲ್ಲಾ ಅಧಿಕಾರ ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿ ಇರಬೇಕಾ? ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀನು ಬಿಟ್ಟು‌ಕೊಡು. ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡ. ಎಲ್ಲರ ನೋವು ಪರಿಹಾರ ಆಗುತ್ತದೆ” ಎಂದು ಈಶ್ವರಪ್ಪ ತನ್ನ ಎಂದಿನ ಶೈಲಿಯಲ್ಲಿ ಏಕವಚನದಲ್ಲೇ ವಿಜಯೇಂದ್ರ ವಿರುದ್ಧ ಹರಿಹಾಯ್ದರು.

“ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ, ಅವರ ಮಗ ರಾಘವೇಂದ್ರ ಸಂಸದ, ಸ್ವತಃ ಶಾಸಕರಾಗಿರುವ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ತಮ್ಮ ಕುಟುಂಬದ ಒಬ್ಬರಿಗೆ ನೀಡಬೇಕೆಂದು ಆರು ತಿಂಗಳ ಕಾಲ ಆ ಸ್ಥಾನ ಖಾಲಿ ಇರಿಸಲಾಗಿತ್ತು. ಯಡಿಯೂರಪ್ಪ ಮತ್ತು ಅವರ ಮಕ್ಕಳ ಕೈಯಲ್ಲಿ ಎಲ್ಲಾ ಅಧಿಕಾರ ಇರಬೇಕೇ?” ಅವರು ಪ್ರಶ್ನಿಸಿದರು.

ಸ್ಪರ್ಧಿಸಬೇಡಿ ಎಂದು ಹೇಳಲು ವಿಜಯೇಂದ್ರ ಯಾರು? ನಾನು ಈ ಬಾರಿ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ಹೆಚ್ಚೆಂದರೆ ಬಿಜೆಪಿ ಏನು ಮಾಡಬಲ್ಲದು? ನನ್ನನ್ನು ಪಕ್ಷದಿಂದ ತೆಗೆದು ಹಾಕಬಹುದು. ಆದರೆ ನಾನು ಗೆದ್ದ ನಂತರ ಬಿಜೆಪಿ ಸೇರುತ್ತೇನೆ. ಎಂದಿಗೂ ನಾನು ಬಿಜೆಪಿಯವನೇ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ನನಗಾಗಲೀ, ಅಥವಾ ಸಿಟಿ ರವಿ, ಯತ್ನಾಳ್‌ ಅಥವಾ ಇನ್ಯಾರಾದರೂ ಒಬಿಸಿ ನಾಯಕರಿಗೆ ನೀಡುವಂತೆ ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿಯಲ್ಲ; ಮೋದಿ ಮತ್ತು ಅವರ ಚೇಲಾಗಳು: ಸುಬ್ರಮಣಿಯನ್‌ ಸ್ವಾಮಿ

Related Articles

ಇತ್ತೀಚಿನ ಸುದ್ದಿಗಳು