ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ದಲಿತ ಸಮಾಜವೂ ಪುರುಷ ಪ್ರಾಬಲ್ಯದಿಂದ ಕೂಡಿದೆ: ರಮಾಬಾಯಿ ಅಂಬೇಡ್ಕರ್‌ ಆನಂದ್‌ ತೇಲ್ತುಂಬ್ಡೆ

PPeepal Media

Peepal Media ರಾಜ್ಯ

• 1 ನಿಮಿಷದ ಓದು

ದಲಿತ ಸಮಾಜವೂ ಪುರುಷ ಪ್ರಾಬಲ್ಯದಿಂದ ಕೂಡಿದೆ: ರಮಾಬಾಯಿ ಅಂಬೇಡ್ಕರ್‌ ಆನಂದ್‌ ತೇಲ್ತುಂಬ್ಡೆ

ಬೆಂಗಳೂರು: ʼನಮ್ಮ ದಲಿತ ಸಮಾಜವೂ ಪುರುಷ ಪ್ರಾಬಲ್ಯದಿಂದ ಕೂಡಿದೆ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಇದನ್ನು ಅರಿತಿದ್ದರಿಂದಲೇ ದಲಿತ ಮಹಿಳೆಯರಲ್ಲಿ ಬದಲಾವಣೆ ತರುವ ಪ್ರಯತ್ನ ನಡೆಸಿದ್ದರುʼ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮೊಗಳಾದ ರಮಾಬಾಯಿ ಆನಂದ್‌ ತೇಲ್ತುಂಬ್ಡೆ ಅವರು ಹೇಳಿದರು. ಅವರು ಇಂದು ನಗರದ ಗಾಂಧಿ ಭವನದಲ್ಲಿ “ನಾವೂ ಇತಿಹಾಸ ಕಟ್ಟಿದೆವು” ಕೃತಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ʼ1989ರಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟವಾಗಿದ್ದ ಪುಸ್ತಕವನ್ನು 2022ರಲ್ಲಿ ದು.ಸರಸ್ವತಿಯವರು ಅನುವಾದಿಸುವ ಮೂಲಕ ಈ ಕೃತಿ  ಕನ್ನಡಕ್ಕೆ ಬರುತ್ತಿರುವುದು ಸಂತೋಷದ ಸಂಗತಿ. ಬಾಬಾಸಾಹೇಬರು ದಮನಿತ ವರ್ಗಗಳ ಚಳವಳಿಯಲ್ಲಿ ಮಹಿಳಾ ಸುಧಾರಣೆಗೆ ಬಹಳ ಒತ್ತು ನೀಡಿದ್ದರು. ಈ ಪುಸ್ತಕ ಮಹಿಳೆಯರನ್ನು ಚಳವಳಿಯ ಭಾಗವಾಗಿ ಮಾಡಲು ಬಾಬಾಸಾಹೇಬರು ಪಟ್ಟ ಪಾಡಿನ ಬಗ್ಗೆ ತಿಳಿಸುತ್ತದೆ. ಅದೇ ರೀತಿಯಲ್ಲಿ ಬಾಬಾಸಾಹೇಬರು ಮುನ್ನಡೆಸಿದ ಚಳವಳಿಯಲ್ಲಿ ಭಾಗವಹಿಸಿದ್ದ ಮಹಿಳೆಯರ ಅನುಭವ ಕಥನಗಳನ್ನೂ ಒಳಗೊಂಡಿದೆʼ ಎಂದರು. ʼಶೋಷಿತ ಸಮುದಾಯಗಳ ಮಹಿಳೆಯರು ಚಳವಳಿಯಲ್ಲಿ ಭಾಗವಹಿಸುವಾಗ ಅವರ ಉಡುಗೆ ತೊಡುಗೆಗಳು ಜಾತಿ ಸೂಚಕವಾಗದ ರೀತಿಯಲ್ಲಿ ಅವರನ್ನು ಮಾನಸಿಕವಾಗಿ ಸ್ವಾಭಿಮಾನಿಗಳಾಗಿ ಮಾಡುವಲ್ಲಿ ಬಾಬಾಸಾಹೇಬರು ಪ್ರೇರೇಪಣೆ ನೀಡುತ್ತಿದ್ದರುʼ ಎಂದು ತಿಳಿಸಿದ ಅವರು ʼಮಹಿಳೆಯರು ಶಿಕ್ಷಣ ಹೊಂದಬೇಕು ಎಂದು ಪ್ರಯತ್ನಿಸಿದ್ದ ಅಂಬೇಡ್ಕರ್‌ ಅವರ ದಾರಿ ನಮ್ಮದಾಗಲಿ, ಇಂತಹ ಪುಸ್ತಕ ಹೆಚ್ಚಿನ ಅರಿವು ಮೂಡಿಸಲಿʼ ಎಂದು ಹೇಳಿದರು.

ಪುಸ್ತಕದ ಕುರಿತು ಮಾತನಾಡಿದ ವಿಶ್ರಾಂತ ಉಪಕುಲಪತಿಗಳಾದ ಡಾ.ಸಬಿಹಾ ಭೂಮಿಗೌಡ ಅವರು, ʼಈ ಪುಸ್ತಕವು 1920-1956ರ ನಡುವಿನ ಅವಧಿಯ ಘಟನಾವಳಿಗಳನ್ನು ಒಳಗೊಂಡಿದ್ದು, ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕುರಿತು ಬಂದಿರುವ ಎಲ್ಲ ಪುಸ್ತಕಗಳ ಸಾಲಿನಲ್ಲಿ ಇದಕ್ಕೆ ಒಂದು ವಿಶೇಷ ಸ್ಥಾನವಿದೆʼ ಎಂದರು. ʼಈ ಕೃತಿಯು ಅಕಡೆಮಿಕ್‌ ಶಿಸ್ತಿನಿಂದ ಬರೆದಿದ್ದ ಕೃತಿಯಾಗಿರದೇ ಸ್ತ್ರೀವಾದಿಗಳು ಅಂಬೇಡ್ಕರ್‌ ಅವರ ಚಳವಳಿಯಲ್ಲಿ ಮಹಿಳೆಯರ ಪಾತ್ರದ ಕುರಿತು ನಡೆಸಿದ ಅಧ್ಯಯನದ ಪರಿಣಾಮವಾಗಿ ಬಂದಂತಹದು. ಕೃತಿಯ ಲೇಖಕಿಯರಾದ ಊರ್ಮಿಳಾ ಪವಾರ್‌ ಮತ್ತು ಮೀನಾಕ್ಷಿ ಮೂನ್‌ ಹಲವು ವರ್ಷಗಳ ಕಾಲ ನಡೆಸಿದ ಶೋಧನೆಯ ಫಲʼ ಎಂದರು. ಕೃತಿ ಕುರಿತು ಮಾತನಾಡಿದ ಕವಿ, ಚಿಂತಕ ಪೀರ್‌ ಭಾಷಾ ಅವರು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಲ್ಲಿದ್ದ ಸೈದ್ದಾಂತಿಕ ಸ್ಪಷ್ಟತೆಯನ್ನು ನೋಡಿದಾಗ ಅವರು ಗಾಂಧೀಜಿಯವರಿಗಿಂತಲೂ ಎಷ್ಟೋ ಪಾಲು ದೊಡ್ಡವರಾಗಿ ಕಾಣಿಸುತ್ತಾರೆʼ ಎಂದರು.

ಕೃತಿಯ ಅನುವಾದಕಿ ಡಾ.ದು ಸರಸ್ವತಿ ಮಾತನಾಡಿ, ʼಕೃತಿಯಲ್ಲಿರುವ ವಿಷಯಗಳನ್ನು ಜನರಿಗೆ ತಿಳಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ, ಮಹಿಳೆಯರಿಗೆ ಒಮ್ಮೆ ಯೋಚಿಸುವ ಶಕ್ತಿಯನ್ನು ನೀಡಿದರೆ ಯಾವುದೇ ಗುಂಪಿರಲಿ ಅಲ್ಲಿ ಅವರು ಭಿನ್ನವಾಗಿಯೇ ಯೋಚಿಸಿ ಇಡೀ ಚಳವಳಿಗೆ ಹೊಸ ಗತಿಯನ್ನು ಒದಗಿಸುತ್ತಾರೆ, 1932ರಲ್ಲಿ ಬಾಬಾಸಾಹೇಬರು ಜನತಾ ಪತ್ರಿಕೆ ಆರಂಭಿಸಿದಾಗ ಅದರಲ್ಲಿ  ಹೆಣ್ಣುಮಕ್ಕಳಿಗೆ ಉಸ್ತುವಾರಿ ನೀಡಿದ್ದರುʼ ಎಂದು ತಿಳಿಸಿದರು.

ಹಿರಿಯ ದಲಿತ ಮುಖಂಡರಾದ ಎನ್‌ ವೆಂಕಟೇಶ್‌, ಬಾಬು ಜಗಜೀವನರಾಮ್‌ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವೆಂಕಮ್ಮ, ಪುಸ್ತಕದ ಪ್ರಕಾಶಕರಾದ ಡಾ.ಎಚ್.‌ ಎಸ್‌ ಅನುಪಮಾ ಅವರು ಉಪಸ್ಥಿತರಾಗಿದ್ದರು.

ಕಾರ್ಯಕ್ರಮದಲ್ಲಿ ಯುವಸ್ಪಂದನೆಯ ಭಾಗವಾಗಿ, ಡಾ.ನೇತ್ರಾವತಿ, ಅಶ್ವಿನಿ ಬೋಧ್‌, ಭರತ್‌, ಮಲ್ಲಮ್ಮ ಕಂಬಾರ್‌, ರೂಮಿ ಹರೀಶ್‌, ಕೆಸ್ತಾರ, ವಿ ಎಲ್‌ ನರಸಿಂಹಮೂರ್ತಿ, ಮಾತನಾಡಿದರು.

ಡಾ.ಹುಲಿಕುಂಟೆ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು