Thursday, June 13, 2024

ಸತ್ಯ | ನ್ಯಾಯ |ಧರ್ಮ

Whatsapp ಪ್ರತಿ ರಾತ್ರಿ ತನ್ನ ಬಳಕೆದಾರರ ಮಾಹಿತಿಯನ್ನು ಕದ್ದು ಸಾಗಿಸುತ್ತದೆ: ಎಲಾನ್‌ ಮಸ್ಕ್‌ ಗಂಭೀರ ಆರೋಪ

ವಾಟ್ಸಾಪ್‌ ಮಾಹಿತಿ ನಿಯಮ ಉಲ್ಲಂಘನೆ ಮಾಡುತ್ತಿದೆ ಎನ್ನುವ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಎಲೋನ್ ಮಸ್ಕ್ ಬಳಕೆದಾರರ ಸುರಕ್ಷತೆ ಮತ್ತು ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದ್ದಾರೆ.

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಮೆಟಾ-ಮಾಲೀಕತ್ವದ WhatsApp ಮೆಸೇಂಜರ್‌ ಸೇವೆಯನ್ನು ಟೀಕಿಸುತ್ತಾ, “ಇದು ಪ್ರತಿ ರಾತ್ರಿ ಬಳಕೆದಾರರ ಡೇಟಾವನ್ನು ರಫ್ತು ಮಾಡುತ್ತದೆ. ಆದರೂ ಕೆಲವು ಜನರು ಇದನ್ನು ಈಗಲೂ ಸುರಕ್ಷಿತ ಅಪ್ಲಿಕೇಷನ್‌ ಎಂದು ಭಾವಿಸುತ್ತಾರೆ” ಎಂದು ಹೇಳಿದ್ದಾರೆ.

Whatsapp ತಾನು ಕದ್ದ ಮಾಹಿತಿಯನ್ನು ಉದ್ದೇಶಿತ ಜಾಹೀರಾತಿಗಾಗಿ ಬಳಸುತ್ತದೆ ಎಂದಿರುವ ಮಸ್ಕ್‌, “ವಾಟ್ಸಾಪ್‌ ತನ್ನ ಬಳಕೆದಾರರನ್ನು ಮನುಷ್ಯರಂತೆ ನಡೆಸಿಕೊಳ್ಳುವ ಬದಲು ಉತ್ಪನ್ನದಂತೆ ಬಳಸಿಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.

“WhatsApp ಪ್ರತಿ ರಾತ್ರಿ ನಿಮ್ಮ ಯೂಸರ್ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡುತ್ತದೆ” ಎಂದು ಮಸ್ಕ್ ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಾದ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಸ್ಕ್ ಮುಂದುವರೆದು, “ಇಷ್ಟೆಲ್ಲ ನಡೆಯುತ್ತಿದ್ದರೂ ಕೆಲವರು ಇನ್ನೂ ಇದನ್ನು ಸುರಕ್ಷಿತವೆಂದು ಭಾವಿಸುತ್ತಾರೆ” ಎಂದು ಹೇಳಿದ್ದಾರೆ.

ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ವೀಡಿಯೋ ಗೇಮ್ ಡೆವಲಪರ್ ಜಾನ್ ಕಾರ್ಮ್ಯಾಕ್ ಅವರು ಮಸ್ಕ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ಸಂದೇಶಗಳಲ್ಲಿನ ವಿಷಯವನ್ನು ಸ್ಕ್ಯಾನ್ ಮಾಡಲಾಗುತ್ತದೆ ಅಥವಾ ರವಾನಿಸಲಾಗುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿವೆಯೇ ಎಂದು ಕೇಳಿದ್ದಾರೆ. ಜೊತೆಗೆ “ಸಂದೇಶಗಳು ಸಂಪೂರ್ಣ ಸುರಕ್ಷಿತ ಯಾರೂ ಓದಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಮಸ್ಕ್‌ ಅವರ ಈ ಆರೋಪದ ಬಗ್ಗೆ ಮೆಟಾ ಅಥವಾ ವಾಟ್ಸಾಪ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Related Articles

ಇತ್ತೀಚಿನ ಸುದ್ದಿಗಳು