Saturday, June 15, 2024

ಸತ್ಯ | ನ್ಯಾಯ |ಧರ್ಮ

ಹಾಸನದ ಪಾಳೆಗಾರಿಕೆ ಅಂತ್ಯ ಮಾಡಲು ನ್ಯಾಯಾಂಗ ಹೋರಾಟವನ್ನು ಯಶಸ್ವಿ ಮಾಡೋಣ ; ಎಸ್‌.ಆರ್‌ ಹಿರೇಮಠ್‌

ಹೋರಾಟದ ನಡಿಗೆ ಹಾಸನದ ಕಡೆಗೆ ಎಂಬುದರ ಜತೆಗೆ ಸಮಾನತೆಯ ಕಡೆಗೆ ಆಗಬೇಕು. ಈ ದೇಶದಲ್ಲಿ ಮೂರು ಐತಿಹಾಸಿಕ ಹೋರಾಟಗಳು ನಡೆದಿವೆ. ಮಹಾಡ್ ಸತ್ಯಾಗ್ರಹವನ್ನು ಅಂಬೇಡ್ಕರ್ ನಡೆಸಿದ್ದರು. ಸೂರ್ಯ ಮುಳುಗದ ಸಾಮ್ರಾಜ್ಯ ನಮ್ಮದು ಅಂತ ಕೊಚ್ಚಿಕೊಳ್ಳುತ್ತಿದ್ದ ಬ್ರಿಟಿಷರಿಗೆ ವಾಪಸ್ ಕಳಿಸಲು ನಡೆದ ಸತ್ಯಾಗ್ರಹ ಹೋರಾಟ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ದೆಹಲಿ ಗಡಿಗಳಲ್ಲಿ ನಡೆದ ರೈತ ಹೋರಾಟ ವದಲ್ಲಿ ಲಕ್ಷಗಟ್ಟಲೆ ಜನ ಅಹಂಕಾರಿ, ಅಸಹಿಷ್ಣುತೆಯ ಪ್ರತೀಕವಾಗಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಬಗ್ಗಿಸಿದ ಹೋರಾಟದಂತೆ ಇಂದು ಹಾಸನದಲ್ಲಿ ಮಹಿಳೆಯರ ಸಮಾನತೆಯ ಕಡೆಗೆ ಕೊಂಡೊಯ್ಯಲು ಹೋರಾಟ ನಡೆಯುತ್ತಿದೆ.ಹಾಸನದಲ್ಲಿ ಸುದೀರ್ಘಕಾಲ ನಡೆದು ಬಂದಿರುವ ಪಾಳಿಗಾರಿಕೆ ದರ್ಪದಿಂದ ನಡೆದಿರುವ ದೌರ್ಜನ್ಯಕ್ಕೆ ಕೊನೆ ಹಾಡೋಣ. ಸಮಗ್ರ ನ್ಯಾಯ ಪಡೆಯಲು ಅನುಸರಣೆಯಾಗಿ ಐತಿಹಾಸಿಕ ಹೋರಾಟ ನಡೆಸಬೇಕಿದೆ. ನ್ಯಾಯಾಂಗ ಹೋರಾ ಹೋರಾಟ ಹೇಗೆ ಬಳ್ಳಾರಿಯ ಗಣಿ ಧಣಿಗಳ ಪಾಳೆಗಾರಿಕೆಯನ್ನು ಅಂತ್ಯ ಕಾಣಿಸಿದಂತೆ, ಹಾಸನದ ಪಾಳೆಗಾರಿಕೆಯನ್ನು ಅಂತ್ಯ ಮಾಡಲು ನ್ಯಾಯಾಂಗ ಹೋರಾಟವನ್ನು ಯಶಸ್ವಿಯಾಗಿ ನಡೆಸಲು ನನ್ನ ಕೊನೆ ಉಸಿರು ಇರುವವರೆಗೂ ಸಹಕಾರ ನೀಡುತ್ತೇನೆ.

ಈ ರಾಜ್ಯದ ಗೃಹಮಂತ್ರಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ಈಗಾಲಾದರೂ ಹಾಸನಕ್ಕೆ ಬನ್ನಿ ನೊಂದ ಮಹಿಳೆಯರ ದನಿ ಕೇಳಿ ನ್ಯಾಯ ನೀಡಿ. ಇಂದು ಪ್ರಜಾಪ್ರಭುತ್ವದ, ಸಂವಿಧಾನದ ಪ್ರತೀಕವಾಗಿ ನಡೆದಿರುವ ಈ
ಹೋರಾಟವನ್ನು ಮುಂದುವರೆಸೋಣ.

Related Articles

ಇತ್ತೀಚಿನ ಸುದ್ದಿಗಳು