Thursday, June 20, 2024

ಸತ್ಯ | ನ್ಯಾಯ |ಧರ್ಮ

ದೇವೇಗೌಡ್ರೆ.., ಮಹಿಳಾ ಮೀಸಲಾತಿ ಘೋಷಿಸಿದಾಗ ಇದ್ದ ಮಹಿಳಾ ಕಾಳಜಿ ಈಗ್ಯಾಕ್ಕಿಲ್ಲ ; ವರಲಕ್ಷ್ಮಿ

ಈ ಸಮಾಜದ ಸ್ವಾಸ್ಥ್ಯವನ್ನು ಕಡೆಸಿ ಹೆಣ್ಣಿನ ಘನತೆಯನ್ನು ಕುಗ್ಗಿಸಿರುವ ವ್ಯಕ್ತಿಗೆ ನೀಡುವ ಶಿಕ್ಷೆ ಇಂತಹ ಕೆಲಸ ಮಾಡುವ ಯಾರಿಗೇ ಆದರೂ ಎಚ್ಚರಿಕೆಯ ಗಂಟೆ ಆಗಬೇಕು. ಯಾವ ಮಹಿಳೆಯ ಮೇಲೆ, ಯಾವ ಪುರುಷ ಬಲಾತ್ಕಾರ ಮಾಡಿ ಆಕೆ ಇರೋದೆ ನಮ್ಮ ಅನುಭೋಗಕ್ಕೆ ಎಂಬ ಮನಸ್ಥಿತಿಯ ಪ್ರಜ್ವಲನಂತಹ ವ್ಯಕ್ತಿಗೆ ತಕ್ಕ ಪಾಠ ಕಲಿಸಲು ಈ ಹೋರಾಟ ನಡಿತಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷರಾದ ವರಲಕ್ಷ್ಮಿ ಹೇಳಿದ್ದಾರೆ.


ಹುಬ್ಬಳ್ಳಿಯ ನೇಹಾ ಹತ್ಯೆಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಅವರ ಚಮಚ ಸಂಘಟನೆಗಳು, ಬಿಜೆಪಿ ನಾಯಕರು ಸಾಲು ಸಾಲು ಪ್ರತಿಭಟನೆ ಮಾಡಿ ಆ ಕುಟುಂಭವನ್ನು ಭೇಟಿ ಮಾಡಿದವು. ಆದರೆ, ಇಂದು ಹಾಸನದ ಯಾವ ಹೆಣ್ಣುಮಕ್ಕಳನ್ನು ಸಾಂತ್ವಾನ ಮಾಡಲು ಯಾಕೆ ಬಂದಿಲ್ಲ. ಈ ರಾಜಕೀಯ ದೊಂದರಾಟವನ್ನು ನೋಡಿಕೊಂಡು ಯಾಕೆ ಸುಮ್ಮನಿದ್ದಾರೆ.

ಮಹಿಳಾ ಮೀಸಲಾತಿ ಪರಿಚಯಿಸಿದಾಗ ಮಹಿಳೆಯರ ಬಗ್ಗೆ ನಮಗೆ ಕಾಳಜಿ ಇದೆ ಅಂತ ದೇವೇಗೌಡರು ಹೇಳಿದರು. ಆದರೆ, ಹಾಸನದ ಹೆಣ್ಣುಮಕ್ಕಳ ಬಗ್ಗೆ ಯಾಕೆ ಆ ಕಾಳಜಿ ಮಾಜಿ ಪ್ರಧಾನಿ ಹಾಗೂ ಹಾಲಿ ಪ್ರಧಾನಿಯಲ್ಲಿ ಕಾಣ್ತಿಲ್ಲ. ಹಾಸನದ ಅಕ್ಕತಂಗಿಯರೇ ನಮ್ಮ ಹಕ್ಕುಗಳು ಯಾರ ಬಿಕ್ಷೆಯೂ ಅಲ್ಲ, ಹೋರಾಟದ ಫಲವಾಗಿ ನಮಗೆ ಸಿಕ್ಕಂತವು. ಈ ಸಂದರ್ಭದಲ್ಲಿ ಕೇರಳದ ವೀರ ಮಹಿಳೆ ನಂಗೇಲಿಯನ್ನು ನೆನೆಯಬೇಕು. ಸ್ತನ ತೆರಿಗೆ ವಿರುದ್ಧ ಒಬ್ಬಂಟಿಯಾಗಿ ಹೋರಾಡಿ ಸ್ತನವನ್ನೇ ಕತ್ತರಿಸಿ ಕೊಟ್ಟ ನಂಗೇಲಿ, ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಶತ್ರುಗಳ ರುಂಢ ಚಂಡಾಡಿದ ಜಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ನಮಗೆ ನೆನಪಾಗಲಿಬೇಕು. ಈ ದೌರ್ಜನ್ಯದ ಸಂಧರ್ಭದಲ್ಲೂ ನಾವೆಲ್ಲರೂ ಗಟ್ಟಿಯಾದ ಹೋರಾಟ ಮಾಡಬೇಕು ಎಂದು ಅವರು ಹೇಳಿದು.

Related Articles

ಇತ್ತೀಚಿನ ಸುದ್ದಿಗಳು