ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

ರಾಜ್ಯಸಭಾಧ್ಯಕ್ಷರ ವರ್ಣಭೇದ ನೀತಿಯೂ, ಖರ್ಗೆಯವರ ವಿರೋಧಪಕ್ಷದ ನಾಯಕನ ಸ್ಥಾನವೂ..!

PPeepal Media Desk

Peepal Media Desk ರಾಜಕೀಯ

• 1 ನಿಮಿಷದ ಓದು

ರಾಜ್ಯಸಭಾಧ್ಯಕ್ಷರ ವರ್ಣಭೇದ ನೀತಿಯೂ, ಖರ್ಗೆಯವರ ವಿರೋಧಪಕ್ಷದ ನಾಯಕನ ಸ್ಥಾನವೂ..!

ಹೊಸ ಸರ್ಕಾರ ರಚನೆಯ ಮೊದಲ ಅಧಿವೇಶನದಲ್ಲಿ ಈಗ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ವಾಕ್ಸಮರದ ಮೇಲಾಟ ಒಂದು ಕಡೆಯಾದರೆ, ಇತ್ತ ರಾಜ್ಯಸಭೆ ಅಧಿವೇಶನದಲ್ಲಿ ರಾಜ್ಯಸಭಾಪತಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ರಾಜ್ಯಸಭೆ ಪ್ರತಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ನಡುವಿನ ನೇರ ಜಟಾಪಟಿ ಈಗ ಬಹು ಚರ್ಚಿತ ವಿಷಯವಾಗಿ ಮಾರ್ಪಟ್ಟಿದೆ.

ರಾಜ್ಯಸಭೆ ಸಭಾಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರೊಳಗಿನ ವರ್ಣಭೇದ ನೀತಿಯನ್ನು ಗುರುತಿಸಿದ ಮಲ್ಲಿಕಾರ್ಜುನ ಖರ್ಗೆಯವರು, ರಾಜ್ಯಸಭೆ ಸಭಾಪತಿ ಮೇಲೆಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಸಭೆ ಮಂಗಳವಾರ ಸಭಾಪತಿ ಜಗದೀಪ್‌ ಧನಕರ್‌ ಮತ್ತು ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಯಿತು.

‘ಕಾಂಗ್ರೆಸ್‌ ಸಂಸದರು ಶಿಸ್ತಿನಿಂದ ವರ್ತಿಸಲು ಜೈರಾಂ ರಮೇಶ್‌ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಜಾಗವನ್ನು ತುಂಬಬೇಕು’ ಎಂದು ಸಭಾಪತಿ ಜಗದೀಪ್ ಧನಕರ್ ವ್ಯಂಗ್ಯವಾಡಿದ್ದು ಖರ್ಗೆಯವರ ನೇರ ಜಟಾಪಟಿಗೆ ಕಾರಣವಾಗಿದೆ.

ರಾಷ್ಟ್ರಪತಿ ಭಾಷಣದ ಬಗ್ಗೆ ಕಾಂಗ್ರೆಸ್‌ನ ಪ್ರಮೋದ್‌ ತಿವಾರಿ ಮಾತನಾಡುವಾಗ, ‘ಖಚಿತಪಡದ ವಿಷಯಗಳ ಬಗ್ಗೆ ಪ್ರಸ್ತಾಪಿಸಬೇಡಿ’ ಎಂದು ಧನಕರ್‌ ಹೇಳಿದರು. ಆಗ ಜೈರಾಂ ರಮೇಶ್‌ ಅವರು ‘ಪರೀಶಿಲಿಸಲಾಗುವುದು’ ಎಂದರು. ಆಗ ಧನಕರ್‌ ಅವರು, ‘ನೀವು ಜಾಣ, ಪ್ರತಿಭಾವಂತ ಹಾಗೂ ದೈವದತ್ತ ವ್ಯಕ್ತಿ. ಖರ್ಗೆ ಅವರ ಜಾಗವನ್ನು ತಕ್ಷಣವೇ ನೀವು ತುಂಬಬೇಕು. ಏಕೆಂದರೆ ಅವರು ಮಾಡುವ ಕೆಲಸ ನೀವು ಮಾಡತ್ತಿದ್ದೀರಿ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು, ‘ವರ್ಣ ವ್ಯವಸ್ಥೆ ತರಬೇಡಿ. ಅದಕ್ಕಾಗಿಯೇ ಜೈರಾಂ ರಮೇಶ್‌ ಅವರನ್ನು ತುಂಬಾ ಬುದ್ಧಿವಂತ. ನಾನು ದಡ್ಡ ಎನ್ನುತ್ತಿದ್ದೀರಿ, ಇದು ನಿಮ್ಮೊಳಗಿನ ಜಾತಿಭೇದ ಹಾಗೂ ವರ್ಣಭೇದ ನೀತಿಯನ್ನುಹೊರಹಾಕಿದೆ” ಎಂದು ಕಿಡಿಕಾರಿದ್ದಾರೆ.

ಖರ್ಗೆಯವರ ನೇರ ಆರೋಪದಿಂದ ಒಂದು ಕ್ಷಣ ವಿಚಲಿತರಾದ ಸಭಾಪತಿ ಜಗದೀಪ್ ಧನಕರ್ ತನ್ನ ಮೇಲಿನ ಆರೋಪ ಅಲ್ಲಗಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದು ಸ್ಪಷ್ಟವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿಗಳು ಖರ್ಗೆ ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಸಂಸತ್‌ನಲ್ಲಿ ಎಂದೂ ಇಲ್ಲಿಯವರೆಗೆ ಸಭಾಪತಿ ಪೀಠ ಇಷ್ಟು ಅವಮಾನಕ್ಕೆ ಗುರಿ ಆಗಿಲ್ಲ’ ಎಂದು ವಿಷಯವನ್ನು ಬೇರೆ ರೀತಿಗೆ ಕೊಂಡೊಯ್ಯುವ ಪ್ರಯತ್ನ ನಡೆಸಿದ್ದಾರೆ.

PPeepal Media Desk

Peepal Media Desk

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು