Friday, July 5, 2024

ಸತ್ಯ | ನ್ಯಾಯ |ಧರ್ಮ

ಬ್ರಿಟನ್ ಚುನಾವಣೆ : ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ ಸುಧಾ ಮೂರ್ತಿ ಅಳಿಯ

ಬ್ರಿಟನ್ ಚುನಾವಣೆಯಲ್ಲಿ ರಿಷಿ ಸುನಕ್ ನಾಯಕತ್ವದ ಕನ್ಸರ್ವೇಟಿವ್ ಪಕ್ಷವು ಹೀನಾಯ ಸೋಲನ್ನು ಎದುರಿಸುವತ್ತ ಸಾಗಿದೆ. ಈ ಕಾರಣದಿಂದ ಫಲಿತಾಂಶ ಘೋಷಣೆಗೂ ಮುನ್ನವೇ ಬ್ರಿಟನ್ ಹಾಲಿ ಪ್ರಧಾನಿ, ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಸೋಲಪ್ಪಿಕೊಂಡಿದ್ದಾರೆ.

ಸದ್ಯದ ಟ್ರೆಂಡ್‌ ಪ್ರಕಾರ (ಬೆಳಗ್ಗೆ 9.30ರ ಸುಮಾರಿಗೆ), ವಿರೋಧ ಪಕ್ಷವಾದ ಲೇಬರ್ ಪಾರ್ಟಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂದು ತಿಳಿದು ಬಂದಿದೆ. ಆದರೆ ರಿಷಿ ಸುನಕ್ ಅವರ ಆಡಳಿತ ಪಕ್ಷ ಕನ್ಸರ್ವೇಟಿವ್ ಪಾರ್ಟಿ ಕೇವಲ 61 ಸ್ಥಾನಗಳಲ್ಲಿ ಮಾತ್ರ ತೃಪ್ತಿ ಕಂಡುಕೊಳ್ಳುತ್ತಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷವು ಹೀನಾಯ ಸೋಲಿನತ್ತ ಮುಖ ಮಾಡಿರುವ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ಯುಕೆಯಲ್ಲಿ ಲೇಬರ್ ಪಾರ್ಟಿ ಭಾರಿ ಬಹುಮತದತ್ತ ಸಾಗಿದ್ದು, ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿದೆ.

ಕಳೆದ 14 ವರ್ಷಗಳಿಂದ ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷವೇ ಬ್ರಿಟನ್ ನಲ್ಲಿ ಅಧಿಕಾರದಲ್ಲಿದೆ. ಕಳೆದ 5 ವರ್ಷಗಳಲ್ಲಿ ಕನ್ಸರ್ವೇಟಿವ್ ಪಕ್ಷವು 4 ಬಾರಿ ಪ್ರಧಾನಿಯನ್ನು ಬದಲಾಯಿಸಿದೆ ಎಂಬುದು ಗಮನಾರ್ಹ. ಈಗ ಅವರು ಮತ್ತು ಅವರ ಪಕ್ಷ ಚುನಾವಣೆಯಲ್ಲಿ ಸೋಲುವುದು ಎಕ್ಸಿಟ್ ಪೋಲ್‌ಗಳ ಪ್ರಕಾರ ಬಹುತೇಕ ಖಚಿತವಾಗಿತ್ತು.

ವಿಶೇಷ ಎಂದರೆ ಬ್ರಿಟನ್ ಚುನಾವಣಾ ಇತಿಹಾಸದಲ್ಲೇ ಹಾಲಿ ಪ್ರಧಾನಿ ಸೋತಿರುವ ಉದಾಹರಣೆ ಇಲ್ಲ. ಆದರೆ ಬ್ರಿಟನ್ ನಲ್ಲಿ ಸ್ವತಃ ರಿಷಿ ಸುನಕ್ ಅವರ ಸೋಲು ಕನ್ಸರ್ವೇಟಿವ್ ಪಕ್ಷದ ಇನ್ನೊಂದು ದೊಡ್ಡ ಹಿನ್ನಡೆ ಎಂಬುದಾಗಿದೆ. ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿಯವರು ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಅವರ ಗೆಲುವಿಗೆ ಪಾದಯಾತ್ರೆಯ ಹರಕೆ ಹೊತ್ತವರು, ತಮ್ಮ ಅಳಿಯನ ಗೆಲುವಿಗೆ ಯಾವ ದೇವರ ಮೊರೆ ಹೋಗಲಿಲ್ಲ ಯಾಕೆ ಎಂಬುದು ಸಧ್ಯಕ್ಕೆ ಭಾರತೀಯ ಸೋಷಿಯಲ್ ಮೀಡಿಯಾ ಟ್ರೆಂಡ್ ಆಗಿದೆ.

Related Articles

ಇತ್ತೀಚಿನ ಸುದ್ದಿಗಳು