Friday, July 12, 2024

ಸತ್ಯ | ನ್ಯಾಯ |ಧರ್ಮ

ಮುಂಬೈ ಹಿಟ್ ಅಂಡ್ ರನ್ ಪ್ರಕರಣ : ಆರೋಪಿ ಮಿಹಿರ್ ಶಾ 7 ದಿನಗಳ ಪೊಲೀಸ್ ಕಸ್ಟಡಿಗೆ

ಮುಂಬೈ: ಮುಂಬೈ ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಅವರನ್ನು ಜುಲೈ 16 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. 72 ಗಂಟೆಗಳ ಕಾಲ ಪರಾರಿಯಾಗಿದ್ದ ಆರೋಪಿ ಮಿಹಿರ್ ಷಾನನ್ನು ಮಂಗಳವಾರ ಸಂಜೆ ಬಂಧಿಸಲಾಗಿದೆ.

ಭಾನುವಾರ ಮುಂಜಾನೆ 5.30ಕ್ಕೆ ಮುಂಬೈ ನ ವರ್ಲಿಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು 45 ವರ್ಷದ ಮಹಿಳೆಯ ಸಾವಿಗೆ ಕಾರಣವಾದ ಹಾಗೂ ಆಕೆಯ ಪತಿಯನ್ನು ಗಾಯಗೊಳಿಸಿದ ಸಂದರ್ಭದಲ್ಲಿ ಶಿವಸೇನಾ ನಾಯಕ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ಐಷಾರಾಮಿ ಸೆಡಾನ್ ಕಾರನ್ನು ಚಾಲನೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ . ಆದರೆ, ಅಪಘಾತ ಸಂದರ್ಭದಲ್ಲಿ ಕುಡಿದಿದ್ದರು ಎಂಬ ವರದಿಗಳನ್ನು ನಿರಾಕರಿಸಿದ್ದಾರೆ.

ಅಪಘಾತದ ನಂತರ ಸಾಕ್ಷ್ಯವನ್ನು ನಾಶಪಡಿಸಲು ಮತ್ತು ಪ್ರಕರಣದ ದಿಕ್ಕನ್ನು ಬದಲಾಯಿಸುವ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ವಾದಿಸಿ, ಪೊಲೀಸರು ಮಿಹಿರ್ ಷಾ ಅವರ “ಸುದೀರ್ಘ ಕಸ್ಟಡಿಗೆ” ಕೋರಿದ್ದರು. ಅಪಘಾತದ ನಂತರ ಷಾ ತನ್ನ ತಂದೆ ಮತ್ತು ತಂದೆಯ ಸ್ನೇಹಿತರ ಕಡೆಯಿಂದ ಅನೇಕ ಫೋನ್ ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

72 ಗಂಟೆಗಳಿಗೂ ಹೆಚ್ಚು ಕಾಲ ಬಂಧನದಿಂದ ತಪ್ಪಿಸಿಕೊಳ್ಳಲು ಮತ್ತು ಅವರಿಗೆ ಸಹಾಯ ಮಾಡಿದ ಕುಟುಂಬ ಸದಸ್ಯರು ಸೇರಿದಂತೆ ಎಲ್ಲರನ್ನೂ ಪತ್ತೆ ಹಚ್ಚಲು ಮಿಹಿರ್ ಶಾ ಅವರ ಕಸ್ಟಡಿ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಆ ಹಿನ್ನೆಲೆಯಲ್ಲಿ ಮಿಹಿರ್ ಶಾಗೆ ಅವರ ತಾಯಿ ಮತ್ತು ಇಬ್ಬರು ಸಹೋದರಿಯರು ಸಹಾಯ ಮಾಡಿದ ಕಾರಣಕ್ಕಾಗಿ ಅವರಿಬ್ಬರನ್ನೂ ಸಹ ಬಂಧಿಸಲಾಗಿದೆ. ಷಾ ಅವರ ಸ್ನೇಹಿತರನ್ನೂ ಸಹ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು