Thursday, July 11, 2024

ಸತ್ಯ | ನ್ಯಾಯ |ಧರ್ಮ

ತಮಿಳುನಾಡು ಡಿಎಂಕೆ ಸರ್ಕಾರಕ್ಕೆ ಅಂಬೇಡ್ಕರ್ವಾದಿ ನಿರ್ದೇಶಕ ಪಾ.ರಂಜಿತ್ ಕೇಳಿರುವ ಏಳು ಪ್ರಶ್ನೆಗಳು.!

ಹೇಡಿಗಳು ಕ್ರೂರವಾಗಿ ಬರ್ಬರವಾಗಿ ಕೊಂದುಹಾಕಿದ ಬಹುಜನ ಸಮಾಜ ಪಕ್ಷದ ರಾಜ್ಯ ನಾಯಕರಾದ ಬ್ರದರ್ ಆರ್ಮ್ ಸ್ಟ್ರಾಂಗ್ ರವರ ಒಡಲನ್ನು ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಯಿಲ್ಲದೆ ಉದ್ವೇಗವಿಲ್ಲದೆ ಸಮಾಧಿ ಮಾಡಿದ್ದೇವೆ…!

ಈಗ ಆರ್ಮ್ ಸ್ಟ್ರಾಂಗ್ ಅಣ್ಣನಿಲ್ಲದ ತಮಿಳುನಾಡಿನಲ್ಲಿ ಅವರ ಮಾರ್ಗದರ್ಶನದಂತೆ ಅವರ ನಂತರದ ಈ ಜೀವನದ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರ ಆಶಯದ ರಾಜಕೀಯದ ಬಗ್ಗೆ ಹೆಚ್ಚು ಹೆಚ್ಚು ದೃಢಸಂಕಲ್ಪ ಮಾಡಿ ಕಟ್ಟೋಣ ಮತ್ತು ಹೋರಾಡೋಣ. ಅದು ಸಹೋದರ ಆರ್ಮ್‌ಸ್ಟ್ರಾಂಗ್ ಅಣ್ಣನಿಗೆ ನಾವು ಕೊಡುವ ಗೌರವ ಮತ್ತು ಮಾತು. ಇದಕ್ಕಾಗಿ ಆರ್ಮ್‌ಸ್ಟ್ರಾಂಗ್‌ಗೆ ನಾವೆಲ್ಲರೂ ಕೃತಜ್ಞರಾಗಿರುತ್ತೇವೆ. ಜೈಭೀಮ್.

ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಾಡು ಹರಡುತ್ತಿರುವವರಿಗೆ ನನ್ನ ಕೆಲವು ಪ್ರಶ್ನೆಗಳು:

  1. ಚೆನ್ನೈ ನಗರದ ಸೆಂಬಿಯಂ ಪೊಲೀಸ್ ಠಾಣೆ ಬಳಿ ಹತ್ಯಾಕಾಂಡ ನಡೆದಿದೆ. ಇದರೊಂದಿಗೆ ತಮಿಳುನಾಡಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಕೊಲೆಗಡುಕರಿಗೆ ಎಷ್ಟು ಭಯವಿದೆ ಎಂಬುದು ಅರ್ಥವಾಗುತ್ತದೆ..! ಹಾಗಾದರೆ, ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಗೆ ತಿದ್ದುಪಡಿ ತರಲು ನೀವು ಯಾವ ಯೋಜನೆ ಹಾಕಿದ್ದೀರಿ?
  2. ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ದುರುಳರೇ ನೀಡಿದ ತಪ್ಪೊಪ್ಪಿಗೆಯನ್ನು ಆಧರಿಸಿ ‘ರೌಡಿ ಅರ್ಚಾಡು ಸುರೇಶ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿರುವುದಾಗಿಯೂ’ ಪೊಲೀಸರು ಘೋಷಿಸಿದ್ದಾರೆ..! ಶರಣಾಗತರನ್ನು ಒಳಗೆ ತಳ್ಳಿ ಈ ಪ್ರಕರಣವನ್ನು ಅಂತ್ಯಗೊಳಿಸಲು ಪೊಲೀಸರು ಆಸಕ್ತಿ ವಹಿಸಿದ್ದಾರೆ. ಆದರೆ ಈ ಕೊಲೆಯನ್ನು ಮಾಡಿಸಿದವರು ಯಾರು.? ಯಾರು ಯೋಜಿಸಿದರು ಮತ್ತು ಹೇಗೆ ಪ್ರಾರಂಭಿಸಿದರು? ಅವರೆಲ್ಲರ ಇದರೆಲ್ಲರ ಹಿಂದೆ ನಿಂತು ನಿರ್ದೇಶಿಸಿದವರು ಯಾರು? ಇದಕ್ಕೆ ಬೇರೆ ಹಿನ್ನೆಲೆ ಇಲ್ಲವೇ? ಇದರ ಹಿಂದಿರುವ ಆರುದ್ರ ವಿಚಾರದಲ್ಲಿ ಪೊಲೀಸ್ ಇಲಾಖೆಯ ನಿಲುವೇನು? ಯಾವುದು ಸತ್ಯ ಯಾವುದು ಸುಳ್ಳೆಂದು ತಿಳಿಯುವ ಪ್ರಯತ್ನವನ್ನೂ ಮಾಡದೆ ಸರ್ಕಾರ ಯಾಕೆ ಅಸಡ್ಡೆ ತೋರುತ್ತಿದೆ.? ಮಾಧ್ಯಮಗಳೂ ಇದನ್ನು ಪ್ರಶ್ನಿಸಲು ಏಕೆ ನಿರಾಕರಿಸುತ್ತಿವೆ‌…?
  3. ಇತ್ತೀಚೆಗೆ ದಲಿತ ಜನರಿಗೆ ಮತ್ತು ದಲಿತ ನಾಯಕರಿಗೆ ಅತಿ ಹೆಚ್ಚು ಬೆದರಿಕೆ ಹಾಕುತ್ತಿರುವುದನ್ನು ಸರ್ಕಾರ ಗಮನಿಸುವುದು ಯಾವಾಗ? ಅವರ ಸುರಕ್ಷತೆಯನ್ನು ಹೇಗೆ ಖಚಿತಪಡಿಸಿಕೊಳ್ಳುವುದು? ರಾಜಧಾನಿಯಲ್ಲಿ ದಲಿತರ ಭದ್ರತೆಯ ಕೋಟೆಯಾಗಿರುವ ಮಹಾನ್ ನಾಯಕನ ಗತಿಯೇ ಹೀಗಾದರೆ ತಮಿಳುನಾಡಿನ ಇತರ ಜಿಲ್ಲೆಗಳ ಗ್ರಾಮ ನಗರಗಳ ಜನರ ಹಾಗು ಅಲ್ಲಿನ ದಲಿತ ನಾಯಕರ ಬಗ್ಗೆ ಯೋಚಿಸುವಾಗ ಭಯವಾಗುತ್ತದೆ..! ಈ ಉದ್ವಿಗ್ನತೆ ಮತ್ತು ಬೆದರಿಕೆಯನ್ನು ನಿವಾರಿಸಲು ತಮಿಳುನಾಡು ಸರ್ಕಾರವು ಯಾವ ಯೋಜನೆಗಳನ್ನು ಹೊಂದಿದೆ ಎಂಬುದನ್ನು ನಾವು ತಿಳಿಯಬೇಕು.!
  4. ಸಹೋದರ ಆರ್ಮ್‌ಸ್ಟ್ರಾಂಗ್ ರವರ ಶವವನ್ನು ಅವರ ಹುಟ್ಟೂರು ಚೆನ್ನೈನಗರದ ಪೆರಂಬೂರಿನಲ್ಲಿ ಸಮಾಧಿ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಸರ್ಕಾರವು ಇದನ್ನು ಇಲ್ಲಿ ಮಾಡಿಸದಿರಲು ಮೊದಲೇ ಯೋಜಿಸಲಾಗಿತ್ತು ಎಂದು ತೋರುತ್ತದೆ. ಸರ್ಕಾರದ ಸುಮಾರು ಎರಡು ದಿನಗಳ ನಾಟಕದ ಕೊನೆಯಲ್ಲಿ, ಚೆನ್ನೈನ ಹೊರವಲಯದ ಉಪನಗರದ ಹಳ್ಳಿಯ ಪೊಥೂರ್ ಪ್ರದೇಶದಲ್ಲಿ ಇಷ್ಟವಿಲ್ಲದೆ ನಮ್ಮಿಂದ ಅಲ್ಲಿ ಬಲವಂತವಾಗಿ ಅವರನ್ನು ಸಮಾಧಿ ಮಾಡಿಸಲಾಯಿತು. ಡಿಎಂಕೆ ಸರ್ಕಾರಕ್ಕೆ ಅಧಿಕಾರವಿದ್ದರೂ ಕಾನೂನು ಸುವ್ಯವಸ್ಥೆಯ ವ್ಯಾಪ್ತಿಯಲ್ಲಿ ಈ ಪ್ರದೇಶವನ್ನು ಹೊಂದಿರದ ಪೆರಂಪುರದಲ್ಲಿ ಸಮಾಧಿ ಮಾಡಿಸುವ ಮೂಲಕ ಈ ಸರ್ಕಾರ ದೊಡ್ಡ ಮೋಸ ಮಾಡಿದೆ, ಅವರ ಶವವನ್ನು ಚೆನ್ನೈ ಸಿಟಿಯಲ್ಲಿ ಹೂಳಲು ಬಿಡದೆ ಹೊರವಲಯದಲ್ಲಿ ಊಳುವಂತೆ ಮಾಡಿ ಈ ಸರ್ಕಾರ ದಲಿತರಿಗೆ ದೊಡ್ಡ ವಂಚನೆ ಮಾಡಿದೆ. ದಲಿತರ ಮತ್ತು ದಲಿತ ನಾಯಕರ ಬಗ್ಗೆ ನಿಮಗೆ ನಿಜವಾಗಿಯೂ ಕಾಳಜಿ ಇದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ..!
  5. ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬರಲು ಸಾಕಷ್ಟು ದಲಿತರ ಮತಗಳು ಪ್ರಮುಖ ಕಾರಣವಾಯಿತು ಎಂಬುದು ಇತಿಹಾಸ. ದಲಿತರು ನಿಮ್ಮ ಸರ್ಕಾರಕ್ಕೆ ಅಪಾರ ಬೆಂಬಲ ನೀಡಿದ್ದಾರೆ ಎಂಬುದು ನಿಮಗೆ ತಿಳಿದಿಲ್ಲವೇ? ಅಥವಾ ಗೊತ್ತಿದ್ದೂ ಅಸಡ್ಡೆಯೇ.? ನಿಮ್ಮನ್ನು ಅಧಿಕಾರಕ್ಕೆ ತರಲು ನಾನೂ ಮತ ಹಾಕಿದ್ದೇನೆ. ಆ ಹಕ್ಕಿನ ಆತಂಕದಲ್ಲಿಯೇ ಈ ಪ್ರಶ್ನೆಗಳನ್ನು ಮುಂದಿಡುತ್ತಿದ್ದೇನೆ. ಸಾಮಾಜಿಕ ನ್ಯಾಯದ ಮಾತು ಕೇವಲ ನಮ್ಮ ಮತಕ್ಕಾಗಿ ಮಾತ್ರವೇ..?
  6. ಸೋದರ ಆರ್ಮ್‌ಸ್ಟ್ರಾಂಗ್ ಹತ್ಯೆಯಿಂದ ಎದ್ದ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಪೊಲೀಸರು ಮತ್ತು ಕೆಲವು ಮಾಧ್ಯಮಗಳು ವೆಬ್‌ಸೈಟ್‌ಗಳಲ್ಲಿ ಘಟನೆಯ ದಿಕ್ಕನ್ನೇ ಬದಲಾಯಿಸಲು ಬೇರೊಂದು ಮಾದರಿಯ ಕಥೆಯನ್ನು ಎಣೆಯುತ್ತಿವೆ.!. ‘ಅವನು ರೌಡಿ’, ‘ರೌಡಿಯನ್ನು ಕೊಲ್ಲುವುದನ್ನು ಕಾನೂನು ಸಮಸ್ಯೆಯಾಗಿ ಹೇಗೆ ನೋಡಬಹುದು’, ‘ಪಂಚಾಯತ್’, ‘ಬಹು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ’, ಮನುಷ್ಯ ಎಂದೆಲ್ಲಾ ತೀರ್ಪು ಬರೆದುಬಿಡುತ್ತಿದ್ದಾರೆ….! ಕೊಲೆಯ ನಡುಕ ಇನ್ನೂ ಕಡಿಮೆಯಾಗುವ ಮುನ್ನವೇ ಈ ರೀತಿ ಹೇಳಿಕೆ ನೀಡುವುದರ ಹಿಂದೆ ಯಾರಿದ್ದಾರೆ? ಏನು‌ ಕೆಲಸ ಮಾಡುತ್ತಿದೆ..!?
  7. ನಮ್ಮನ್ನಾಳುವವರೇ ಕೇಳಿ,,.,..! ನಮ್ಮ ಸ್ವಾಭಿಮಾನಕ್ಕಾಗಿ ನಾವು ಎಚ್ಚೆತ್ತುಕೊಳ್ಳುತ್ತೇವೆ ಎಚ್ಚೆತ್ತು ದಬ್ಬಾಳಿಕೆಯ ವಿರುದ್ಧ ಹೋರಾಡುವವರನ್ನು ನೀವು ಅದನ್ನು ರೌಡಿ ರೌಡಿಸಂ ಎಂದು ಕರೆಯುತ್ತೀರಿ..! ಬಾಬಾಸಾಹೇಬರ ಮಾರ್ಗದಲ್ಲಿ ಬೌದ್ಧ ಧಮ್ಮವನ್ನು ತಮಿಳುನಾಡಿನಲ್ಲಿ ಹುಟ್ಟುಹಾಕಿದ ಪರಂಪರೆಯವರ ವಿರುದ್ಧ, ಮತ್ತು ಯಾರೇ ಬಂದರೂ ಲಕ್ಷಾಂತರ ಪುಸ್ತಕಗಳನ್ನು ಜನರಿಗೆ ಹಂಚುತ್ತಿದ್ದವರ ವಿರುದ್ಧ ನೀವು ಇಂತಹ ಕಥೆಗಳನ್ನು ಕಟ್ಟುವ ಮೂಲಕ ನೀವು ನಿಮ್ಮನ್ನು ತೃಪ್ತಿಪಡಿಸಿಕೊಳ್ಳಬಹುದು.! ಆದರೆ ನಮಗೆ ಪ್ರತಿಯೊಬ್ಬರಿಗೂ ತಿಳಿದಿದೆ, ಸಹೋದರ ಆರ್ಮ್‌ಸ್ಟ್ರಾಂಗ್‌ನಂತಹ ‘ದಬ್ಬಾಳಿಕೆಯ ವಿರುದ್ಧ’ ಹೋರಾಡುವವರಿಂದ ನಾವು ಪಡೆದ ಉನ್ನತಿಯನ್ನು ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಅಂತಿಮವಾಗಿ, ನಾನು ಬಾಲ್ಯದಿಂದಲೂ ಸಹೋದರನ ಪ್ರೀತಿಯಿಂದ ಆಕರ್ಷಿತನಾಗಿದ್ದೆ. ನಾನು ಸಿನಿಮಾ ಕ್ಷೇತ್ರಕ್ಕೆ (ಪರದೆಯ ಮೇಲೆ) ಬಂದ ನಂತರ ನನ್ನ ಬೆಳವಣಿಗೆ ಮತ್ತು ಸುರಕ್ಷತೆಯ ಬಗ್ಗೆ ಯಾವಾಗಲೂ ಕಾಳಜಿ ವಹಿಸುವ ನನ್ನನ್ನು ಯಾವಾಗಲೂ ರಕ್ಷಣಾ ರಿಂಗ್‌ನಲ್ಲಿ ಇರಿಸಿದ್ದವರು ಅಣ್ಣಾ ಆರ್ಮ್‌ಸ್ಟ್ರಾಂಗ್. ಬಾಬಾಸಾಹೇಬರ ರಾಜಕೀಯ ಮಾರ್ಗದಲ್ಲಿ ರಾಜಿಯಿಲ್ಲದೆ ತನ್ನನ್ನು ತಾನು ಒಪ್ಪಿಸಿಕೊಂಡವರು
ಅಣ್ಣಾ ಆರ್ಮ್‌ಸ್ಟ್ರಾಂಗ್. ಇಂಥ ನನ್ನ ಸಹೋದರನನ್ನು ಕಳೆದುಕೊಂಡದ್ದು ನನ್ನ ಜೀವನದಲ್ಲಿ ಬಹುದೊಡ್ಡ ಹಿನ್ನಡೆ. ಇದನ್ನು ಸರಿಪಡಿಸಲು ಅವರ ಮಾತುಗಳು ಮತ್ತು ಆಲೋಚನೆಗಳು ಮಾರ್ಗಗಳು ನನಗೆ (ನಮಗೆ) ಮಾರ್ಗದರ್ಶನ ನೀಡುತ್ತವೆ. ನಾವು ಕಟ್ಟುತ್ತೇವೆ.

ಜೈಭೀಮ್.

ಮೂಲ: ಪಾ.ರಂಜಿತ್
ಕನ್ನಡಕ್ಕೆ: ಹ.ರಾ.ಮಹೇಶ್

Related Articles

ಇತ್ತೀಚಿನ ಸುದ್ದಿಗಳು