Friday, July 12, 2024

ಸತ್ಯ | ನ್ಯಾಯ |ಧರ್ಮ

ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು l ಬಿಜೆಪಿ ಸಂಚಿಗೆ ಸೋಲು: ಆತಿಶಿ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದನ್ನು ಸ್ವಾಗತಿಸಿರುವ ಎಎಪಿ ನಾಯಕಿ ಆತಿಶಿ, ಇದು ಸತ್ಯಕ್ಕೆ ಸಂದ ಜಯ. ಬಿಜೆಪಿ ಕುತಂತ್ರದ ಸೋಲು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼನಮ್ಮ ನಾಯಕರಾದ ಕೇಜ್ರಿವಾಲ್‌ ಅವರ ಬಂಧನದ ಹಿಂದೆ ಬಿಜೆಪಿಯ ಕುಂತಂತ್ರ ಕೆಲಸ ಮಾಡಿದೆ. ಬಿಜೆಪಿ ಹೈಕಮಾಂಡ್‌ ತನಗೆ ಆಗದವರನ್ನು ಮುಗಿಸಲು ಏನು ಮಾಡಲು ಹೇಸುವುದಿಲ್ಲ. ಈಗ ಮಧ್ಯಂತರ ಜಾಮೀನು ಸಿಕ್ಕಿದೆ ಎಂದರೆ, ಕೇಜ್ರಿವಾಲ್‌ ಬಂಧನದ ಹಿಂದೆ ಬಿಜೆಪಿ ಸಂಚು ಅಡಗಿರುವುದು ಸಾಬೀತುಗೊಂಡಂತಾಗಿದೆ’ ಎಂದರು.

‘ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಸಿಗಲಿದೆ ಎಂದು ಬಿಜೆಪಿಗೆ ತಿಳಿದಿತ್ತು. ಅದಕ್ಕಾಗಿ ಅವರನ್ನು ಸಿಬಿಐ ಮೂಲಕ ಮತ್ತೆ ಬಂಧಿಸಿದೆ. ಕೇಜ್ರಿವಾಲ್‌ ಹೊರಗೆ ಇರಬಾರದು ಎಂಬುದು ಬಿಜೆಪಿಯ ಕುತಂತ್ರವಾಗಿದೆʼ ಎಂದು ಆತಿಶಿ ಕಿಡಿ ಕಾರಿದರು.

‘ಕೇಜ್ರಿವಾಲ್ ಪ್ರಾಮಾಣಿಕ ವ್ಯಕ್ತಿವಾಗಿದ್ದು, ಪ್ರಾಮಾಣಿಕವಾಗಿಯೇ ಇರುತ್ತಾರೆ’ ಅವರನ್ನು ಎಷ್ಟೇ ದಿನ ಒಳಗಡೆ ಇಟ್ಟರೂ ಏನು ಬದಲಾಗಲ್ಲ ಎಂದು ಆತಿಶಿ ಭರವಸೆ ವ್ಯಕ್ತಪಡಿಸಿದರು.

ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ಲಭಿಸಿದರೂ, ಜೈಲಿನಿಂದ ಹೊರಬರುವಂತಿಲ್ಲ. ಇದೇ ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರನ್ನು ಸಿಬಿಐ ಬಂಧಿಸಿದೆ.

Related Articles

ಇತ್ತೀಚಿನ ಸುದ್ದಿಗಳು