Wednesday, July 17, 2024

ಸತ್ಯ | ನ್ಯಾಯ |ಧರ್ಮ

ಕೇದಾರನಾಥ ದೇವಸ್ಥಾನ 228 ಕೆಜಿ ಚಿನ್ನ ನಾಪತ್ತೆ ವಿವಾದ: ಟ್ರಸ್ಟ್ ಪ್ರತಿಕ್ರಿಯೆ

ಕೇದಾರನಾಥ ದೇಗುಲದಲ್ಲಿ ನೂರಾರು ಕೆಜಿ ಚಿನ್ನ ನಾಪತ್ತೆಯಾಗಿದೆ ಎಂಬ ಆರೋಪಕ್ಕೆ ದೇವಸ್ಥಾನ ಸಮಿತಿ ಬುಧವಾರ ಪ್ರತಿಕ್ರಿಯೆ ನೀಡಿದೆ. ಬದರಿನಾಥ್-ಕೇದಾರನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ದೇವಳದ ಪರವಾಗಿ ಹೇಳಿಕೆ ನೀಡಿದರು.

ಸ್ವಾಮಿ ಅವಿಮುಕ್ತೇಶ್ವರಾನಂದರ ಹೇಳಿಕೆ ದುರದೃಷ್ಟಕರ. ವಾಸ್ತವ ಸಂಗತಿಗಳನ್ನು ಜನರ ಮುಂದಿಡುವಂತೆ ಸ್ವಾಮೀಜಿಗೆ ತಿಳಿಸಿದರು.

“ಕೇದಾರನಾಥ ದೇವಸ್ಥಾನದಲ್ಲಿ 228 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಘೋಷಿಸಿರುವುದು ಅತ್ಯಂತ ದುರದೃಷ್ಟಕರ. ಆದರೂ ನಾನು ಅವರಲ್ಲಿ ವಿನಂತಿಸುತ್ತಿದ್ದೇನೆ.. ನಾನೂ ಅವರಿಗೆ ಸವಾಲು ಹಾಕುತ್ತಿದ್ದೇನೆ. ಸ್ವಾಮೀಜಿ ಸುಮ್ಮನೆ ಹೇಳಿಕೆ ನೀಡುವುದಕ್ಕಿಂತಲೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿ ತನಿಖೆಗೆ ಆಗ್ರಹಿಸಬೇಕು. ಇದಲ್ಲದೆ, ಅವರು ಸಾಕ್ಷ್ಯವನ್ನು ಹೊಂದಿದ್ದರೆ, ಅವರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟನ್ನು ಸಹ ಸಂಪರ್ಕಿಸಬಹುದು” ಎಂದು ಅಜೇಂದ್ರ ಹೇಳಿದರು.

ಶಂಕರಾಚಾರ್ಯರಿಗೆ (ಸ್ವಾಮಿ ಅವಿಮುಕ್ತೇಶ್ವರಾನಂದ) ಕೇದಾರನಾಥ ದೇವಸ್ಥಾನದ ಪ್ರತಿಷ್ಠೆಗೆ ಭಂಗ ತರುವ ಹಕ್ಕು ಇಲ್ಲ ಎಂದು ಅಜೇಂದ್ರ ಪ್ರತಿಕ್ರಿಯಿಸಿದ್ದಾರೆ. ರಾಜಕೀಯ ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಅದು ದುರದೃಷ್ಟಕರ. ಕೇವಲ ವಿವಾದಗಳನ್ನು ಹುಟ್ಟುಹಾಕಲು ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಅಜೆಂಡಾ ಮುಂದಿಡುವ ಕೆಲಸವನ್ನು ಸ್ವಾಮಿ ಮಾಡುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು