Friday, June 14, 2024

ಸತ್ಯ | ನ್ಯಾಯ |ಧರ್ಮ

ಐಟಿ ಕಂಪನಿಗಳಿಗೆ ಶಾಶ್ವತ ಪರಿಹಾರ ನೀಡುವ ಭರವಸೆ: ಸಚಿವ ಅಶ್ವತ್ಥ ನಾರಾಯಣ್

ಬೆಂಗಳೂರು: ನಗರದಲ್ಲಿ ಐಟಿ ಕಂಪನಿಗಳನ್ನು ಹೊಂದಿರುವ ಮಹದೇವಪುರ ವಲಯದಲ್ಲಿ ಆಗುತ್ತಿರುವ ಅನಾನುಕೂಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವ ಅಶ್ವತ್ಥ ನಾರಾಯಣ್‌ ತಿಳಿಸಿದರು.

ಮಹದೇವಪುರ ವಲಯದ ಐಟಿ ಕಂಪನಿಗಳ ಮುಖ್ಯಸ್ಥರ ಜತೆ ಸಭೆ ನಡೆಸಿದ ಅವರು, ಈ ಬಾರಿಯ ಮಳೆಯಿಂದ ನಗರದಲ್ಲಿನ ಐಟಿ ಕಂಪನಿಗಳಿಗೆ ಬಹಳಷ್ಟು ಸಮಸ್ಯೆ ಎದುರಾಗಿದ್ದು, ಕೆಲಸಕ್ಕೆ ಬರುವ ಉದ್ಯೋಗಿಗಳು ಸಹ ನೀರಿನಲ್ಲಿ ಬರುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಮುಂದಿನ ವರ್ಷದ ಮಳೆಗಾಲದೊಳಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಐಟಿ ಕಂಪನಿಯ ಕುಂದುಕೊರತೆಗಳನ್ನು ಆಲಿಸಿದ ಸಚಿವರು ,ಬೆಂಗಳೂರಿನ ಬ್ರಾಂಡ್‌ ಉಳಿಸಿಕೊಳ್ಳಲು ಉದ್ಯಮಿಗಳಿಗೆ ಸಹಕಾರ ಕೋರಿದರು. ಇನ್ನು ಮುಂದೆ ಪ್ರತಿ ತಿಂಗಳು ವರ್ಚುವಲ್‌ ಸಭೆಗಳನ್ನು ನಡೆಸುವ ಮೂಲಕ ಐಟಿ ಕಂಪನಿಗಳ ಸಮಸ್ಯೆಗಳನ್ನು ಆಲಿಸಲಾಗುವುದು ಎಂದರು.

Related Articles

ಇತ್ತೀಚಿನ ಸುದ್ದಿಗಳು