Thursday, July 25, 2024

ಸತ್ಯ | ನ್ಯಾಯ |ಧರ್ಮ

ಕಂಗನಾ ರಣಾವತ್‌ ಆಯ್ಕೆ ಪ್ರಶ್ನಿಸಿ ದೂರು: ಕಂಗನಾಗೆ ಹೈಕೋರ್ಟ್‌ ನೊಟೀಸ್‌

ಹಿಮಾಚಲಪ್ರದೇಶ:‌ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಆಯ್ಕೆ ಪ್ರಶ್ನಿಸಿ ಸರ್ಕಾರಿ ನೌಕರ ಲಾಯಕ್‌ ರಾಮ್‌ ನೇಗಿ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿರುವ ಹಿಮಾಚಲ ಪ್ರದೇಶ ಹೈಕೋರ್ಟ್, ಕಂಗನಾ ಅವರಿಗೆ 21 ದಿನಗಳಲ್ಲಿ ಉತ್ತರಿಸುವಂತೆ ನ್ಯಾಯಮೂರ್ತಿ ಜೋತ್ಸ್ನಾ ರೆವಾಲ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ಲೋಕಸಭೆ ಚುನಾವಣೆ ವೇಳೆ ಮಂಡಿಯ ಚುನಾವಣಾಧಿಕಾರಿ ತನ್ನ ನಾಮಪತ್ರವನ್ನು ಅನ್ಯಾಯವಾಗಿ ತಿರಸ್ಕರಿಸಿದ್ದರು ಎಂದು ಆರೋಪಿಸಿ ಕಿನ್ನೂರು ನಿವಾಸಿ ಲಾಯಕ್ ರಾಮ್ ನೇಗಿ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯನ್ನು ಪ್ರಕರಣದ ಪಕ್ಷಗಾರನ್ನಾಗಿ ಮಾಡಿದ್ದಾರೆ.

ಅರಣ್ಯ ಇಲಾಖೆಯ ಮಾಜಿ ನೌಕರ ನೇಗಿ ಅವರು ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ಅವಧಿಪೂರ್ವ ನಿವೃತ್ತಿ ಪಡೆದಿದ್ದರು. ಇಲಾಖೆಯಿಂದ ಯಾವುದೇ ಬಾಕಿಯಿಲ್ಲ ಪ್ರಮಾಣಪತ್ ಎಂಬ ಎನ್‌ಓಸಿಯೊಂದಿಗೆ ಲೋಕಸಭೆ ಚುನಾವಣೆಗೆ ಮಂಡಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಆದರೆ, ಚುನಾವಣಾಧಿಕಾರಿ ವಿದ್ಯುತ್, ನೀರು ಮತ್ತು ದೂರವಾಣಿ ಇಲಾಖೆಗಳಲ್ಲಿ ಯಾವುದೇ ಬಾಕಿ ಇಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಲು ಒಂದು ದಿನದ ಗಡುವು ನೀಡಿದ್ದರು. ಈ ಕುರಿತು ಪ್ರಮಾಣಪತ್ರ ಸಲ್ಲಿಸಿದರೂ, ಅವರು ನಾಮಪತ್ರವನ್ನು ಸ್ವೀಕರಿಸಲಿಲ್ಲ ಎಂದು ನೇಗಿ ಆರೋಪಿಸಿದ್ದಾರೆ.ಒಂದು ವೇಳೆ ನಾಮಪತ್ರ ತಿರಸ್ಕೃತವಾಗದಿದ್ದರೆ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದೆ. ಹೀಗಾಗಿ ಮಂಡಿ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಬೇಕು ಎಂದು ನೇಗಿ ಕೋರಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮಂಡಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟಿ ಕಂಗನಾ ರಣಾವತ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರ ವಿರುದ್ದ 74,755 ಮತಗಳಿಂದ ಗೆಲುವು ಪಡೆದಿದ್ದರು.

Related Articles

ಇತ್ತೀಚಿನ ಸುದ್ದಿಗಳು