Saturday, July 27, 2024

ಸತ್ಯ | ನ್ಯಾಯ |ಧರ್ಮ

ಯುವ ಸಂಸದರ ಕೊರತೆ ಹೋಗಲಾಡಿಸಲು 35 ವರ್ಷದೊಳಗಿನವರಿಗೆ ಶೇ.10 ಸ್ಥಾನ ಮೀಸಲಿಡಬೇಕು: ಸಂಸದ ಶಶಿ ತರೂರ್

ಹೊಸದೆಹಲಿ: ಲೋಕಸಭೆಯಲ್ಲಿ ಶೇ.10ರಷ್ಟು ಸೀಟುಗಳನ್ನು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೀಸಲಿಡುವ ಖಾಸಗಿ ಮಸೂದೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಸಂಸತ್ತಿನಲ್ಲಿ ಯುವಕರ ತೀವ್ರವಾಗಿ ಕಡಿಮೆಯಾಗಿದ್ದು, ಇದರಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವದ ಕುರಿತು ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.

ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ.65ಕ್ಕೂ ಹೆಚ್ಚು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ ಎಂದು ಅವರು ಹೇಳಿದರು. ಆದರೆ ಅವರ ಸಂಖ್ಯೆಗೆ ಅನುಗುಣವಾಗಿ ಯುವ ಸಂಸದರು ಇಲ್ಲ. ಲೋಕಸಭೆಯಲ್ಲಿ ಯುವಕರಿಗೆ ಕೆಲವು ಸ್ಥಾನಗಳನ್ನು ಮೀಸಲಿಡುವುದರಿಂದ ರಾಜಕೀಯದಲ್ಲಿ ಅವರಿಗೂ ಸ್ಥಾನವಿದೆ ಎಂಬ ಸಂದೇಶವನ್ನು ಯುವಕರಿಗೆ ರವಾನಿಸಿದಂತಾಗುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು