Wednesday, July 31, 2024

ಸತ್ಯ | ನ್ಯಾಯ |ಧರ್ಮ

ಮೈಸೂರು ಚಲೋ | ನಮ್ಮ ಕುಟುಂಬಕ್ಕೆ ವಿಷವಿಕ್ಕಿದ ವ್ಯಕ್ತಿಯ ಜೊತೆ ಹೆಜ್ಜೆ ಹಾಕಲು ಸಾಧ್ಯವಿಲ್ಲ: ಸಚಿವ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್‌ ಪಕ್ಷವನ್ನು ಬಳಸಿಕೊಂಡು ಬೆಂಗಳೂರು ಮೈಸೂರು ಭಾಗಗಳ ಒಕ್ಕಲಿಗ ಮತಗಳನ್ನು ತನ್ನತ್ತ ಸೆಳೆಯುವ ಯೋಚನೆಯಲ್ಲಿದ್ದ ಬಿಜೆಪಿಗೆ ಕುಮಾರಸ್ವಾಮಿ ಸರಿಯಾದ ಸರಿಯಾದ ಹೊಡೆತವನ್ನೇ ನೀಡಿದ್ದಾರೆ.

ಇತ್ತ ಸ್ವಪಕ್ಷೀಯರೇ ಮೈಸೂರು ಚಲೋ ಕುರಿತು ಅಪಸ್ವರ ಎತ್ತುತ್ತಿರುವಾಗ ಅತ್ತ ಪಕ್ಷದ ದೋಸ್ತಿ ಜೆಡಿಎಸ್‌ ಕೂಡಾ ತಾನು ಭಾಗವಹಿಸಲಾರೆ ಎನ್ನುತ್ತಿದೆ. ದೇವೇಗೌಡರ ಕುಟುಂಬಕ್ಕೆ ವಿಷವಿಕ್ಕಿದವನ ಜೊತೆಯಲ್ಲಿ ನಾವು ಹೆಜ್ಜೆ ಹಾಕಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ಮೈಸೂರು ಚಲೋ ಕುರಿತು ಪ್ರತಿಕ್ರಿಯಿಸಿದ ಅವರು “ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ಜೆ‌.ಟಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಜೆಪಿ ನಿಲುವಿನಲ್ಲಿ ತಿರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಸೂಕ್ತವಾದ ಸಂದರ್ಭವಲ್ಲ ಅನ್ನೋ ಕಾರಣಕ್ಕೆ ನಾವು ಹಿಂದೆ ಸರಿದಿದ್ದೇವೆ” ಎಂದು ಹೇಳಿದ್ದಾರೆ.

ಮೈಸೂರು ಚಲೋ ವಿಷಯದಲ್ಲಿ ತಮ್ಮನ್ನು ಪರಿಗಣಿಸದಿರುವ ಬಗ್ಗೆಯೂ ಕುಮಾರಸ್ವಾಮಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ಕುರಿತು ಮಾತನಾಡಿದ ಅವರು “ಜನರಿಂದ ಟೀಕೆ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಹಿನ್ನಲೆ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ. ಪಾದಯಾತ್ರೆಯಿಂದ ಆಗುವ ಲಾಭ ಏನು ? ಕಾನೂನು ಹೋರಾಟವು ಮುಖ್ಯ. ರಾಜಕೀಯವೇ ನಮಗೆ ಪ್ರಾಮುಖ್ಯವಲ್ಲ. ನಾವು ನೈತಿಕ ಬೆಂಬಲವೂ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು. ಬೆಂಗಳೂರಿನಿಂದ ಮೈಸೂರುವರೆಗೂ ನಮ್ಮ ಶಕ್ತಿ ಇದೆ. ನಮ್ಮನ್ನು ಪರಿಗಣಿಸಿದಿದ್ದರೆ ಹೇಗೆ?” ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು ಹಾಸನದ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಪ್ರತೀಂ ಗೌಡ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಮನಸ್ಸಿಗೆ ನೋವಾಗಿದೆ. ಯಾವ ಕಾರಣಕ್ಕಾಗಿ ನಾವು ಬೆಂಬಲ ಕೊಡಬೇಕು? ಪ್ರೀತಂಗೌಡ ಯಾರು? ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ ಅನ್ನೋದು ಗೊತ್ತಿದೆ. ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನು ಆತ. ಅಂತಹ ವ್ಯಕ್ತಿಯ ಜೊತೆಗೆ ವೇದಿಕೆ ಮೇಲೆ ಕೂರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಚಿವ ಕುಮಾರಸ್ವಾಮಿ ಬಿಜೆಪಿ ಪಾದಯಾತ್ರೆಗೆ ಕೆಂಪು ಬಾವುಟ ತೋರಿಸಿದ್ದಾರೆ.

ನಮ್ಮ ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆ ವಿರುದ್ಧ ತೀರ್ಮಾನವಾಗಿದೆ. ಕೇರಳದಲ್ಲಿ ಜೀವ ಹಾನಿಯಾಗಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ರೆಡ್ ಅರ್ಲಟ್ ಘೋಷಿಸಲಾಗಿದೆ. ಕೊಡಗು ಕೂಡ ಜಲಾವೃತವಾಗಿದೆ. ಮಂಡ್ಯ ಭಾಗದಲ್ಲಿ ನದಿ ನೀರು ಬಿಟ್ಟಿದ್ದಾರೆ. ರೈತರು ಕೃಷಿ ಕೆಲಸ ಶುರು ಮಾಡಲಿದ್ದಾರೆ. ಹೀಗಿರುವಾಗ ಇಂತಹ ಸಮಯದಲ್ಲಿ ಪಾದಯಾತ್ರೆ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ಯಾತ್ರೆಯ ನಿರ್ಧಾರ ನನಗೆ ನೋವು ತಂದಿದೆ. ಹೀಗಾಗಿ ಈ ಮೆರವಣಿಗೆಗೆ ನೈತಿಕ ಬೆಂಬಲವನ್ನು ಸಹ ನಮ್ಮ ಕಡೆಯಿಂದ ಕೊಡಲಾಗದು ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು