Thursday, August 15, 2024

ಸತ್ಯ | ನ್ಯಾಯ |ಧರ್ಮ

ವಿನೇಶಾ ಪೋಗಟ್‌ ಅನರ್ಹತೆ l ಇದು ಭಾರತದ ವಿರುದ್ಧದ ಪಿತೂರಿ: ಬಾಕ್ಸರ್‌ ವಿಜೇಂದರ್‌ ಸಿಂಗ್‌

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟು ವಿನೇಶ್ ಫೋಗಟ್ ಅವರು 50 ಕೆ.ಜಿಗಿಂತಲೂ 150 ಗ್ರಾಂ ತೂಕ ಹೆಚ್ಚಿದ್ದರು ಎಂಬ ಕಾರಣಕ್ಕೆ ಅವರನ್ನು 50 ಕೆಜಿ ವಿಭಾಗದ ಕುಸ್ತಿಯಿಂದ ಅನರ್ಹಗೊಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ 2008ರ ಬೀಜಿಂಗ್ ಒಲಿಂಪಿಕ್ಸ್‌ನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್, “ಇದು ಭಾರತದ ವಿರುದ್ದದ ದೊಡ್ಡ ಪಿತೂರಿ” ಎಂದು ದೂರಿದ್ದಾರೆ.

“ಈ ವಿನೇಶ್‌ ಪೋಗಟ್‌ ಅವರ ಅನರ್ಹತೆಯು ಭಾರತೀಯ ಕ್ರೀಡಾಪಟುಗಳನ್ನು ದುರ್ಬಲಗೊಳಿಸುವ ಪಿತೂರಿಯ ಭಾಗವಾಗಿದೆ. ಒಂದು ರಾತ್ರಿಯಲ್ಲಿ ಐದರಿಂದ ಆರು ಕೆ.ಜಿ. ತೂಕ ಇಳಿಸಿಕೊಳ್ಳಬಹುದು. ಹೀಗಿರುವಾಗ 100 ಗ್ರಾಂನ ಸಮಸ್ಯೆ ಅಲ್ಲವೇ ಅಲ್ಲ. ವಿನೇಶ್ ಗೆದ್ದರೆ ಯಾರಿಗಾದ್ರೂ ಸಮಸ್ಯೆ ಆಗುತ್ತಿತ್ತೇನೋ, ಹಾಗಾಗಿ ಆಕೆಯನ್ನು ಸೋಲಿಸಲಾಗಿದೆ. 100 ಗ್ರಾಂ ತೂಕ ಇಳಿಸಿಕೊಳ್ಳಲು ಆಕೆಗೆ ಅವಕಾಶ ನೀಡಬೇಕಿತ್ತು” ಎಂದು ವಿಜೇಂದರ್ ಸಿಂಗ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

“ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುವಾಗಿ ನಾನೆಂದೂ ಇಂತಹ ಘಟನೆಯನ್ನು ಕಂಡಿರಲಿಲ್ಲ ಎಂದು ವಿಜೇಂದರ್ ಸಿಂಗ್ ಹೇಳಿದ್ದು, ವಿನೇಶ್ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯ. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯು ಮೇಲ್ಮನವಿ ಸಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.

ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರಿಂದ ಭಾರತಕ್ಕೆ ಮತ್ತೊಂದು ಪದಕ ಖಚಿತಗೊಂಡಿತ್ತು. ಗೆದ್ದರೆ ಚಿನ್ನ, ಸೋತರೆ ಬೆಳ್ಳಿ ಒಟ್ಟಿನಲ್ಲಿ ಪದಕವಂತೂ ಗ್ಯಾರಂಟಿ ಎಂದು ಇಡೀ ದೇಶ ಖುಷಿ ಪಟ್ಟಿತ್ತು. ಈ ನಡುವೆ ವಿನೇಶ್ ಅವರ ಅನರ್ಹತೆಯ ಆಘಾತಕಾರಿ ಸುದ್ದಿ ಬಂದಿದೆ. ಇದರಿಂದ ವಿನೇಶ್ ಬರಿಗೈಯಲ್ಲಿ ಮರಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅವರು ಬೇಸರವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page