ದೆಹಲಿ: ದೇಶದ ಎಲ್ಲೆಡೆ ಚರ್ಚೆಯಲ್ಲಿರುವ ಒಳಮೀಸಲಾತಿ ಕುರಿತಾದ ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ಬಿಜೆಪಿಯ ನೂರು ಸಂಸದರು ಪ್ರಧಾನಿ ಮೋದಿಯವರ ಎದುರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಉಭಯ ಸದನಗಳ 100 ಸಂಸದರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಎಸ್ಸಿ/ಎಸ್ಟಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಸುತ್ತ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಸಂಸದ ಪ್ರೊಫೆಸರ್ ಸಿಕಂದರ್ ಕುಮಾರ್ ಶುಕ್ರವಾರ ಹೇಳಿದ್ದಾರೆ.
“ಪ್ರಧಾನಿ ನಮ್ಮೆಲ್ಲರ ಮಾತುಗಳನ್ನು ಆಲಿ ನಮಗೆ ನ್ಯಾಯ ಸಿಗುವಂತೆ ಮಾಡುವುದಾಗಿ ಮಾತು ಕೊಟ್ಟಿದ್ದಾರೆ” ಎಂದೂ ಅವರು ಹೇಳಿದರು.
ಏಳು ಸದಸ್ಯರ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ತಂದರೆ ತೀರಾ ಹಿಂದುಳಿದಿರುವ ಜಾತಿಗಳಿಗೂ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.
ಸುಪ್ರೀಂ ಕೋರ್ಟ್ ಕೆನೆಪದರ ನೀತಿಯ ಕುರಿತಾಗಿಯೂ ಮಾತನಾಡಿದ್ದು, ನಾವು ಅದನ್ನು ವಿರೋಧಿಸಿ ಮನವಿ ಸಲ್ಲಿಸಿದ್ದೇವೆ ಎಂದು ಸಂಸದರು ಹೇಳಿದ್ದಾರೆ.