Sunday, September 22, 2024

ಸತ್ಯ | ನ್ಯಾಯ |ಧರ್ಮ

ಎಸ್‌ಬಿಐ ಮತ್ತು ಪಿಎನ್‌ಬಿ ಜೊತೆಗಿನ ವ್ಯವಹಾರ ನಿಲುಗಡೆಗೆ ಆರ್‌ ಅಶೋಕ್‌ ವಿರೋಧ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್ ಗಳಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸಲು ಎಲ್ಲ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮ-ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರದ ನಡೆ ಅತ್ಯಂತ ಅಸಂಬದ್ಧವಾಗಿದ್ದು, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಹೇಳಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಯೂನಿಯನ್ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು 187 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಈಗ ಜಗಜ್ಜಾಹೀರಾಗಿದೆ. ಅವ್ಯವಹಾರ ನಡೆದಿದೆ ಎನ್ನುವುದೇ ಮಾನದಂಡವಾದರೆ, ಯ್ಯುನಿಯನ್ ಬ್ಯಾಂಕ್ ಖಾತೆಗಳಿಗೆ ಈ ಆದೇಶ ಯಾಕೆ ಅನ್ವಯಿಸುವುದಿಲ್ಲ? ಎಸ್ ಬಿಐ ಮತ್ತು ಪಿಎನ್ ಬಿ ಬ್ಯಾಂಕ್ ಗಳಿಗೆ ಮಾತ್ರ ಏಕೆ ನಿಷೇಧ? ಎಂದು ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್ ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳು ಆರ್ ಬಿಐ ನಿಯಂತ್ರಣದಲ್ಲಿರುತ್ತವೆ. ರಾಜ್ಯ ಸರ್ಕಾರಕ್ಕೆ ಏನಾದರೂ ತಕಾರರಿದ್ದಾರೆ ಆರ್ ಬಿಐಗೆ ದೂರು ಸಲ್ಲಿಸಬೇಕೆ ಹೊರತು ಈ ರೀತಿ ರಾಷ್ಟೀಯ ಬ್ಯಾಂಕ್ ಗಳನ್ನ ಏಕಾಏಕಿ ನಿಷೇಧ ಮಾಡುವುದು ಎಷ್ಟು ಸರಿ? ಇದು ಆರ್ ಬಿಐ ಅಂತಹ ಸ್ವಾಯತ್ತ ಸಂಸ್ಥೆಗೆ ಮಾಡಿದ ಅಪಮಾನವಲ್ಲವೇ?

ತಮ್ಮ ಸರ್ಕಾರದಲ್ಲಿ ನಡೆಯುತ್ತಿರುವ ಸರಣಿ ಹಗರಣಗಳ ನಡುವೆ ಏಕಾಏಕಿ ಈ ರೀತಿ ಸುತ್ತೋಲೆ ಹೊರಡಿಸಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನ ಮೂಡಿಸಿದೆ. ಈ ನಿಗೂಢ ನಡೆಯ ಹಿಂದಿರುವ ನಿಜವಾದ ಉದ್ದೇಶವೇನು ಎಂದು ತಾವು ಸ್ಪಷ್ಟನೆ ನೀಡಬೇಕು. ಅಲ್ಲಿವರೆಗೂ ಈ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಆರ್‌ ಅಶೋಕ್ ಆಗ್ರಹಿಸಿದ್ದಾರೆ.‌

ನಿನ್ನೆಯಷ್ಟೇ ರಾಜ್ಯ ಸರ್ಕಾರವು ಈ ಎರಡೂ ಬ್ಯಾಂಕುಗಳೊಂದಿಗಿನ ವ್ಯವಹಾರವನ್ನು ನಿಲ್ಲಿಸುವಂತೆ ಆದೇಶ ನೀಡಿತ್ತು. ಈ ಕುರಿತು ಇನ್ನಷ್ಟು ತಿಳಿಯಲು ಈ ವರದಿಯನ್ನು ಓದಿ:

ಎಸ್’ಬಿಐ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗಿನ ವ್ಯವಹಾರ ಅಂತ್ಯಗೊಳಿಸಿದ ರಾಜ್ಯ ಸರ್ಕಾರ

https://peepalmedia.com/state-govt-terminated-business-with-bank/

Related Articles

ಇತ್ತೀಚಿನ ಸುದ್ದಿಗಳು

You cannot copy content of this page