Monday, June 17, 2024

ಸತ್ಯ | ನ್ಯಾಯ |ಧರ್ಮ

ವಿಶ್ವಸಂಸ್ಥೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮತ್ತೆ ಕುಸಿದ ಭಾರತ

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2021ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 191 ರಾಷ್ಟ್ರಗಳ ಪೈಕಿ ಭಾರತ 132ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಭಾರತದ ವಿಷಯದಲ್ಲಿ 2019ರ ವರದಿಯಲ್ಲಿ ಭಾರತದ HDI ಮೌಲ್ಯ 0.645 ಇತ್ತು. 2020ರ ವರದಿಯಲ್ಲಿ ಭಾರತದ ಮೌಲ್ಯ 0.645ರಷ್ಟಿತ್ತು. 2021ರಲ್ಲಿ 0.633 ರಷ್ಟಿದ್ದು, 69.7 ರಿಂದ 67.2 ವರ್ಷಕ್ಕೆ ಜೀವಿತಾವಧಿ ಕುಸಿತ ಕಂಡಿದೆ.

ಮಾನವ ಅಭಿವೃದ್ಧಿಯನ್ನು ಒಂದು ರಾಷ್ಟ್ರದ ಆರೋಗ್ಯ, ಶಿಕ್ಷಣ ಮತ್ತು ಸರಾಸರಿ ಆದಾಯದ ಮೇಲೆ ಅಳೆಯಲಾಗುತ್ತದೆ. ಇಂತಹ ಒಂದು ಸಮೀಕ್ಷೆಯಲ್ಲೇ ಭಾರತ ಕುಸಿದಿರುವುದು ದೇಶದ ಜನರು ಯಾವ ಪರಿಸ್ಥಿತಿಯಲ್ಲಿದ್ದಾರೆ ಮತ್ತು ದೇಶ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತೋರಿಸುತ್ತದೆ.

ಸ್ವಿಟ್ಜರ್‌ಲ್ಯಾಂಡ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ನಾರ್ವೆ ಮತ್ತು ಐಲ್ಯಾಂಡ್ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ದಕ್ಷಿಣ ಸುಡಾನ್, ಚಾಡ್ ಮತ್ತು ನೈಜರ್ ದೇಶಗಳು ಪಟ್ಟಿಯಲ್ಲಿ ಕೆಳಗಿನಿಂದ ಮೂರನೇ ಸ್ಥಾನಪಡೆದ ದೇಶಗಳಾಗಿವೆ.

ಇನ್ನು ನರೆಯ ದೇಶಗಳ ಪೈಕಿ ಶ್ರೀಲಂಕಾ (73), ಚೀನಾ (79), ಬಾಂಗ್ಲಾದೇಶ (129) ಮತ್ತು ಭೂತಾನ (127) ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿದ್ದರೆ, ಪಾಕಿಸ್ತಾನ (161), ನೇಪಾಳ (143) ಮತ್ತು ಮ್ಯಾನ್ಮಾರ್ (149) ಕೆಳಗಿನ ಸ್ಥಾನಗಳಲ್ಲಿವೆ.

Related Articles

ಇತ್ತೀಚಿನ ಸುದ್ದಿಗಳು