Friday, September 6, 2024

ಸತ್ಯ | ನ್ಯಾಯ |ಧರ್ಮ

ಛತ್ತೀಸ್‌ಗಢ: ಹಸುವಿನ ಮೇಲೆ ಅತ್ಯಾಚಾರ ಎಸಗಿದ ವಕೀಲ! ವಿಡಿಯೋ ವೈರಲ್‌ ಆದ ನಂತರ ಪೊಲೀಸರಿಂದ ಬಂಧನ

ಆಗಸ್ಟ್ 31ರಂದು ಛತ್ತೀಸ್‌ಗಢದ ರಾಯ್‌ಪುರದಲ್ಲಿ 50 ವರ್ಷದ ಆಶಿಶ್ ಮಿಶ್ರಾ ಎನ್ನುವ ವಕೀಲನೊಬ್ಬ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನ್ನು ತೋರಿಸುವ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಪ್ರಸ್ತುತ ವೀಡಿಯೊದಲ್ಲಿ, ಮಿಶ್ರಾ ಮುಂಜಾನೆ 4 ಗಂಟೆಗೆ ಹಸುವಿನ ಮೇಲೆ ಅತ್ಯಾಚಾರ ಮಾಡುವುದನ್ನು ಕಾಣಬಹುದಾಗಿದೆ. ಬೆಳಗಿನ ಜಾವವಾದ ಕಾರಣ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣವಾಗಿ ನಿರ್ಜನವಾಗಿತ್ತು. ದನದ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ನಂತರ, ಅವನು ಸ್ಥಳದಿಂದ ಪರಾರಿಯಾಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ವರದಿಗಳ ಪ್ರಕಾರ, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ರಾಯ್‌ಪುರ ಪೊಲೀಸರು ವ್ಯಕ್ತಿಯನ್ನು ಗುರುತಿಸಿ, ಅವನನ್ನು ಬಂಧಿಸಿ ಪ್ರಾಣಿ ಹಿಂಸೆ ಕಾಯ್ದೆಯಡಿಯಲ್ಲಿ ಆರೋಪ ಹೊರಿಸಿದ್ದಾರೆ ಎಂದು ‍ಫ್ರೀ ಪ್ರೆಸ್‌ ಜರ್ನಲ್‌ ವರದಿ ಮಾಡಿದೆ.

ಭಿಲಾಯಿ ಮೂಲದ ಮಿಶ್ರಾ, ಭಂತಗಾಂವ್ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದಾನೆ. ಆಗಸ್ಟ್ 31 ರಂದು ಮುಂಜಾನೆ 4 ಗಂಟೆ ಸುಮಾರಿಗೆ ತನ್ನ ಸ್ಕೂಟರ್‌ ಮೇಲೆ ಹೋಗಿ ಮನೆಯೊಂದರ ಮುಂದೆ ಹಸುವನ್ನು ಕಟ್ಟಿದ್ದ ಸ್ಥಳಕ್ಕೆ ಹೋಗಿ ಅತ್ಯಾಚಾರ ಎಸಗಿದ್ದ.

ಈ ಕ್ರೂರ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಪ್ರದೇಶದ ಸ್ಥಳೀಯ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿದವು ಮತ್ತು ಮಿಶ್ರಾ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದವು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page