ಹೈದರಾಬಾದ್: ಖ್ಯಾತ ಚಿತ್ರನಟ ಪ್ರಕಾಶ್ ರಾಜ್ ಎಕ್ಸ್ ವೇದಿಕೆಯಲ್ಲಿ ಇನ್ನೊಂದು ಪೋಸ್ಟ್ ಹಾಕಿ ನಟ ಪವನ್ ಕಲ್ಯಾಣ್ ಅವರನ್ನು ತಿವಿದಿದ್ದಾರೆ. ತಿರುಮಲ ಲಡ್ಡು ಪ್ರಸಾದ ಅಪವಿತ್ರಗೊಂಡಿರುವ ವಿಚಾರವಾಗಿ ಪವನ್ ಕಲ್ಯಾಣ್ ಮತ್ತು ಪ್ರಕಾಶ್ ರಾಜ್ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.
ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಪವನ್ ಕಲ್ಯಾಣ್ ಅವರ ಪೋಸ್ಟ್ ಕುರಿತು ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಪೋಸ್ಟಿನಲ್ಲಿ ಪವನ್ ಕಲ್ಯಾಣ್ ಅವರ ಹೆಸರು ಹೇಳದೆ. ‘ಗೆಲ್ಲುವ ಮುನ್ನ ಒಂದು ಅವತಾರ… ಗೆದ್ದ ನಂತರ ಇನ್ನೊಂದು ಅವತಾರ… ಏನಿದು ಅವಾಂತರ…ʼ ಎಂದು ಕೇಳಿದ್ದಾರೆ
ಇದರಲ್ಲಿ ಯಾವ ಅವತಾರ ನಿಜವಾದದ್ದು? ನಮಗೆ ಗೊಂದಲವಾಗಿದೆ, ಜಸ್ಟ್ ಆಸ್ಕಿಂಗ್ ಎಂದು ತಮ್ಮ ಪೋಸ್ಟಿನಲ್ಲಿ ಅವರು ಬರೆದುಕೊಂಡಿದ್ದಾರೆ.
ತಿರುಪತಿ ಲಾಡು ಪ್ರಕರಣದ ನಂತರ ಪವನ್ ಕಲ್ಯಾಣ್ ಫುಲ್ ಆಕ್ಟಿವ್ ಆಗಿದ್ದು ಆಫ್ ಲೈನ್ ಮತ್ತು ಆನ್ ಲೈನ್ ಎರಡೂ ಕಡೆ ಅದ್ಭುತ ಪ್ರದರ್ಶನ ತೋರಿಸುತ್ತಿದ್ದಾರೆ. ಇದಕ್ಕೆ ಅವರ ಬೆಂಬಲಿಗರು ಶಹಬ್ಬಾಸ್ ಎನ್ನುತ್ತಿದ್ದರೆ, ಅವರ ಟೀಕಾಕಾರರು, ಅವರ ಎಡಪಂಥೀಯ, ಅಂಬೇಡ್ಕರೈಟ್, ಕ್ರಿಶ್ಚಿಯನ್ ಹೀಗೆ ಹತ್ತು ಹಲವು ವೇಷಗಳ ನಂತರ ಈಗ ಹಿಂದುತ್ವವಾದಿಯ ವೇಷ ಹಾಕಿದ್ದಾರೆ ಎಂದು ಗೇಲಿ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಸಿನೆಮಾ ನಟನಾಗಿ ತೆರೆಯ ಮೇಲೆ ಮನರಂಜನೆ ನೀಡುತ್ತಿದ್ದ ಪವನ್ ಕಲ್ಯಾಣ್ ಈಗ ರಾಜಕೀಯ ರಂಗದಲ್ಲೂ ಜನರಿಗೆ ಭರಪೂರ ಮನರಂಜನೆ ಕೊಡುತ್ತಿದ್ದಾರೆ.