Wednesday, October 2, 2024

ಸತ್ಯ | ನ್ಯಾಯ |ಧರ್ಮ

ವಾರಣಾಸಿ: ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ಹೊರಹಾಕಿದ ಸನಾತನ ರಕ್ಷಕ ದಳ

ಲಕ್ನೋ: ಉತ್ತರ ಪ್ರದೇಶದ ಆಧ್ಯಾತ್ಮಿಕ ನಗರವಾದ ವಾರಣಾಸಿಯ ಹಲವು ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆಗೆಸಿರುವುದು ಉದ್ವಿಗ್ನತೆಗೆ ಕಾರಣವಾಗಿದೆ. ಕೆಲವು ಹಿಂದೂ ಸ್ವಾಮಿಗಳು ಹಿಂದುತ್ವ ಹೋರಾಟಗಾರರೊಂದಿಗೆ ಸೇರಿ ಸುಮಾರು 10 ದೇವಾಲಯಗಳಲ್ಲಿದ್ದ ಸಾಯಿಬಾಬಾ ವಿಗ್ರಹಗಳನ್ನು ತೆಗೆದುಹಾಕಿದರು.

ವಾರಣಾಸಿಯ ದೇವಾಲಯಗಳಿಂದ ಸಾಯಿಬಾಬಾರವರ ವಿಗ್ರಹಗಳನ್ನು ತೆಗೆಯುವಂತೆ ಸನಾತನ ರಕ್ಷಕ ದಳ (ಎಸ್‌ಆರ್‌ಡಿ) ಮತ್ತು ಬ್ರಾಹ್ಮಣ ಸಭೆ ಕೆಲವು ದಿನಗಳಿಂದ ಒಟ್ಟಾಗಿ ಪ್ರಚಾರ ನಡೆಸುತ್ತಿದೆ. ಅದರ ಭಾಗವಾಗಿ ಮೂರ್ತಿಗಳನ್ನು ತೆಗೆಯಲಾಗುತ್ತಿದೆ.

ಈ ಕುರಿತು ಮಾತನಾಡಿದ ಎಸ್‌ಆರ್‌ಡಿ ಅಧ್ಯಕ್ಷ ಅಜಯ್ ಶರ್ಮಾ ತಾನು ಸಾಯಿಬಾಬಾನನ್ನು ವಿರೋಧಿಸುವುದಿಲ್ಲ, ಆದರೆ ಅವರಿಗೆ ಆದರೆ ಅವರ ವಿಗ್ರಹಗಳಿಗೆ ದೇವಾಲಯಗಳಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

ಸಾಯಿಬಾಬಾ ಭಕ್ತರು ಬೇಕಿದ್ದರೆ ಅವರನ್ನು ಸಾಯಿ ಮಂದಿರಗಳಲ್ಲಿ ಪೂಜಿಸಲಿ, ಅದನ್ನು ಬಿಟ್ಟು ಸನಾತನ ಧರ್ಮದ ಅರಿವಿಲ್ಲದೆ ದೇವಸ್ಥಾನಗಳಲ್ಲೂ ಸಾಯಿಬಾಬಾ ಮೂರ್ತಿ ಪ್ರತಿಷ್ಟಾಪಿಸುವುದು ಸರಿಯಲ್ಲ ಎಂದು ಆಕೋಶ ವ್ಯಕ್ತಪಡಿಸಿದರು.

ದೇವಾಲಯಗಳಲ್ಲಿ ಸೂರ್ಯ, ವಿಷ್ಣು, ಶಿವ, ಶಕ್ತಿ ಮತ್ತು ಗಣೇಶನ ವಿಗ್ರಹಗಳನ್ನು ಮಾತ್ರ ಪ್ರತಿಷ್ಠಾಪಿಸಿ ಪೂಜಿಸಬೇಕು ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page