Wednesday, October 2, 2024

ಸತ್ಯ | ನ್ಯಾಯ |ಧರ್ಮ

ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ 20 ದಿನಗಳ ಪೆರೋಲ್, ಹರಿಯಾಣ ಪ್ರವೇಶಕ್ಕೆ ನಿಷೇಧ

ಬೆಂಗಳೂರು: ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಹರಿಯಾಣ ಸರ್ಕಾರ 20 ದಿನಗಳ ಪೆರೋಲ್ ನೀಡಿದ ನಂತರ ಬುಧವಾರ ಜೈಲಿನಿಂದ ಬಿಡುಗಡೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಿಂಗ್‌ಗೆ ಪದೇ ಪದೇ ಪೆರೋಲ್ ನೀಡಲಾಗುತ್ತಿದೆ.

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳ ಮೊದಲು ಈಗಿನ ಪೆರೋಲ್ ಬಂದಿದೆ. ರಾಜ್ಯದಲ್ಲಿ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದೆ . 

ಸೋಮವಾರ, ಚುನಾವಣಾ ಆಯೋಗವು ಸಿಂಗ್‌ ರಾಜ್ಯ ಪ್ರವೇಶ ಮಾಡದಂತೆ ನಿಷೇಧಿಸಿತು ಮತ್ತು ಜೈಲಿನಿಂದ ಹೊರಗಿರುವಾಗ ಸಾರ್ವಜನಿಕ ಭಾಷಣಗಳನ್ನು ನೀಡುವುದನ್ನು ಅಥವಾ ರಾಜಕೀಯ ಚಟುವಟಿಕೆಯಲ್ಲಿ ತೊಡಗುವುದನ್ನು ನಿಷೇಧಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ .

ಹರಿಯಾಣದ ಸಿರ್ಸಾ ಜಿಲ್ಲೆಯ ಡೇರಾ ಪ್ರಧಾನ ಕಛೇರಿಯಲ್ಲಿ ತನ್ನ ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 2017 ರಲ್ಲಿ ಸಿಂಗ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 2021 ರಲ್ಲಿ, ಅವರ ಪಂಥದ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಕೊಲೆ ಪ್ರಕರಣದಲ್ಲಿ ಈತ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಕೊಲೆ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈತನನ್ನು ಮೇ ತಿಂಗಳಲ್ಲಿ ಖುಲಾಸೆಗೊಳಿಸಿತ್ತು .

ಡಿವಿಶನಲ್ ಕಮಿಷನರ್ ಸಂಜೀವ್ ವರ್ಮಾ ಅವರ ಪೆರೋಲ್ ಅರ್ಜಿಯನ್ನು ಅನುಮೋದಿಸಿದ ನಂತರ ಸಿಂಗ್‌ನನ್ನು ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಿಂದ ಬುಧವಾರ ಬಿಡುಗಡೆ ಮಾಡಲಾಯಿತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 20 ದಿನಗಳ ಕಾಲ ಈತ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಉಳಿದುಕೊಳ್ಳಲಿದ್ದಾನೆ.

ವಿಧಾನಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈತನಿಗೆ ಪೆರೋಲ್ ನೀಡುವ ಮುನ್ನ ರಾಜ್ಯದ ಕಾರಾಗೃಹ ಇಲಾಖೆಯು ಹರಿಯಾಣ ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ಅವರಿಗೆ ಮನವಿ ಪತ್ರವನ್ನು ಕಳುಹಿಸಿದೆ.

ನೀತಿ ಸಂಹಿತೆ ಚುನಾವಣಾ ಆಯೋಗವು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಚುನಾವಣಾ ಸಮಯದಲ್ಲಿ ಅನುಸರಿಸಲು ಹೊರಡಿಸಿದ ಮಾರ್ಗಸೂಚಿಗಳನ್ನು ಒಳಗೊಂಡಿದೆ. ಇದು ಪ್ರಚಾರದ ಘಟನೆಗಳು, ಭಾಷಣಗಳು, ಚುನಾವಣಾ ಪ್ರಣಾಳಿಕೆಗಳು ಮತ್ತು ಮತದಾನದ ಇತರ ಅಂಶಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊಂದಿದೆ.

ರಾಜ್ಯ ಸರ್ಕಾರವು ಅಗರ್ವಾಲ್‌ಗೆ ಸಿಂಗ್ ತನ್ನ ಅರ್ಜಿಯಲ್ಲಿ ಅಕ್ಟೋಬರ್ 5 ರಂದು ತನ್ನ ತಂದೆಯ ಮರಣ ವಾರ್ಷಿಕ ದಿನ, ಕೆಲವು ಸಂಬಂಧಿಕರ ಆನಾರೋಗ್ಯ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸುವ ಕಾರಣಗಳನ್ನು ಪೆರೋಲ್ ಪಡೆಯಲು ಕಾರಣಗಳನ್ನು ಪಟ್ಟಿ ಮಾಡಿಕೊಟ್ಟಿದೆ

ಸೋಮವಾರ ಅಗರ್ವಾಲ್ ಅವರು ಸಿಂಗ್‌ಗೆ “ಪೆರೋಲ್ ಪರಿಗಣಿಸಬಹುದು” ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದಾಗಿಯೂ ಈ ಪೆರೋಲ್ “ಅವರ ಮನವಿಯಲ್ಲಿ ಉಲ್ಲೇಖಿಸಲಾದ ಸತ್ಯಗಳ ನಿಖರತೆಗೆ ಒಳಪಟ್ಟಿರುತ್ತದೆ ಮತ್ತು ಮಾದರಿ ಸಂಹಿತೆಗೆ ಸಂಬಂಧಿಸಿದಂತೆ ಇತರ ಷರತ್ತುಗಳಿಗೆ ಒಪ್ಪಿತವಾಗಿದೆ” ಎಂದು ಮುಖ್ಯ ಚುನಾವಣಾ ಅಧಿಕಾರಿ ಕಾರಾಗೃಹ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

“ಇದಲ್ಲದೆ, ಅಪರಾಧಿಯ ಚಲನವಲನದ ಮೇಲೆ ಕಟ್ಟುನಿಟ್ಟಾದ ನಿಗಾ ಇಡಬೇಕು ಮತ್ತು ಅವನು ಯಾವುದೇ ಚುನಾವಣಾ ಸಂಬಂಧಿತ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಅವರು ಯಾವುದೇ ಆಕ್ಷೇಪಾರ್ಹ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದರೆ, ಅವರ ಪೆರೋಲ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು,” ಎಂದು ಅಗರ್ವಾಲ್ ಹೇಳಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಸಿಂಗ್‌ಗೆ ಎರಡನೇ ಬಾರಿ ಪೆರೋಲ್ ನೀಡಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಆಗಸ್ಟ್ 15 ರಂದು ಈತನ ಜನ್ಮದಿನದ ಮೊದಲು 21 ದಿನಗಳ ಪರೋಲ್ ನೀಡಲಾಯಿತು .

ಜೈಲಿನಲ್ಲಿ ನಿಗದಿತ ಅವಧಿಯನ್ನು ಪೂರೈಸಿದ ನಂತರ ಯಾವುದೇ ಕಾರಣವಿಲ್ಲದೆ ಪರೋಲ್‌ ನೀಡಬಹುದಾದರೂ, ತುರ್ತು ಬೇಡಿಕೆ ಅಥವಾ ಅಗತ್ಯದ ಆಧಾರದ ಮೇಲೆ ಖೈದಿಗಳಿಗೆ ಪೆರೋಲ್ ನೀಡಲಾಗುತ್ತದೆ.

ಜನವರಿ 18 ರಂದು ಸಿಂಗ್‌ಗೆ 50 ದಿನಗಳ ಪೆರೋಲ್ ನೀಡಲಾಯಿತು. ಒಂದು ತಿಂಗಳ ನಂತರ, ಫೆಬ್ರವರಿಯಲ್ಲಿ ಹೈಕೋರ್ಟ್ ತನ್ನ ಅನುಮತಿಯಿಲ್ಲದೆ ಸಿಂಗ್ ಅವರಿಗೆ ಪೆರೋಲ್ ನೀಡಲಾಗುವುದಿಲ್ಲ ಎಂದು ಹರಿಯಾಣ ಸರ್ಕಾರಕ್ಕೆ ತಿಳಿಸಿತ್ತು. ಇದು 24 ತಿಂಗಳಲ್ಲಿ ಅವರ ಏಳನೇ ಮತ್ತು ನಾಲ್ಕು ವರ್ಷಗಳಲ್ಲಿ ಒಂಬತ್ತನೇ ಪೆರೋಲ್ ಆಗಿತ್ತು.

ಮಾರ್ಚ್ 2023 ರಲ್ಲಿ, ಪಂಜಾಬ್ ಸರ್ಕಾರವು ಸಿಂಗ್‌ಗೆ ಆಗಾಗ್ಗೆ ಪೆರೋಲ್ ನೀಡುವುದರಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೈಕೋರ್ಟ್‌ಗೆ ತಿಳಿಸಿತ್ತು .

ಹಾಗಿದ್ದೂ ಭಾರತೀಯ ಜನತಾ ಪಕ್ಷದ ಆಡಳಿತದ ಹರಿಯಾಣ ಸರ್ಕಾರವು ಸಿಂಗ್‌ಗೆ ಪೆರೋಲ್ ನೀಡುವುದನ್ನು ಬೆಂಬಲಿಸಿತ್ತು. ಡೇರಾ ಸಚ್ಚಾ ಸೌದಾದ ಈ ಮುಖ್ಯಸ್ಥ ಕಠಿಣ ಖೈದಿಗಳ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಮತ್ತು ಆತನನ್ನು ಸರಣಿ ಕೊಲೆಗಾರ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿತ್ತು.

ಆ ಸಮಯದಲ್ಲಿ ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್ ಕೂಡ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ನೀಡಲಾದ ಪೆರೋಲ್‌ನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page