Tuesday, October 8, 2024

ಸತ್ಯ | ನ್ಯಾಯ |ಧರ್ಮ

ಟಿ ಎಂ ಕೃಷ್ಣ ಪ್ರಶಸ್ತಿ ಕೊಡಬೇಡಿ: ಕೋರ್ಟ್ ಮೊರೆ ಹೋದ ಎಂ.ಎಸ್.ಸುಬ್ಬಲಕ್ಷ್ಮಿ ಮೊಮ್ಮಗ

ಬೆಂಗಳೂರು: ಖ್ಯಾತ ಗಾಯಕಿ ದಿವಂಗತ ಎಂ.ಎಸ್.ಸುಬ್ಬುಲಕ್ಷ್ಮಿ ಹೆಸರಿನ ಪ್ರಶಸ್ತಿಯನ್ನು ಚೆನ್ನೈ ಮೂಲದ ಸಂಗೀತ ಅಕಾಡೆಮಿ ಹಲವು ವರ್ಷಗಳಿಂದ ನೀಡುತ್ತಿದ್ದು, ಈ ಬಾರಿ ಟಿ.ಎಂ.ಕೃಷ್ಣ ಅವರಿಗೆ ನೀಡುವುದಾಗಿ ಮ್ಯೂಸಿಕ್ ಅಕಾಡೆಮಿ ಪ್ರಕಟಿಸಿದೆ.

ಇದಕ್ಕೆ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಮೊಮ್ಮಗ ವಿ.ಶ್ರೀನಿವಾಸನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಟಿ.ಎಂ.ಕೃಷ್ಣ ಅವರಿಗೆ ಪ್ರಶಸ್ತಿ ನೀಡಬಾರದು ಎಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಟಿ.ಎಂ.ಕೃಷ್ಣ ಅವರಿಗೆ ಪ್ರಶಸ್ತಿ ನೀಡುವುದು ನಾಸ್ತಿಕರಿಗೆ ಭಕ್ತಿ ಪ್ರಶಸ್ತಿ ನೀಡಿದಂತೆ ಎಂದು ಸುಬ್ಬಲಕ್ಷ್ಮಿ ಅವರ ಮೊಮ್ಮಗ ಆರೋಪಿಸಿದ್ದಾರೆ. ಈ ಹಿಂದೆಯೂ ಟಿಎಂ ಕೃಷ್ಣ ಅವರು ಗಾಯಕಿ ಸುಬ್ಬಲಕ್ಷ್ಮಿ ಅವರ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ್ದರು ಎಂದು ಅವರು ಹೇಳಿದ್ದಾರೆ.

2004ರಲ್ಲಿ ಸುಬ್ಬಲಕ್ಷ್ಮಿ ನಿಧನರಾದ ನಂತರ 2005ರಿಂದ ಅವರ ಹೆಸರಿನಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯಡಿ ಒಂದು ಲಕ್ಷ ಬಹುಮಾನ ನೀಡಲಾಗುತ್ತದೆ. ಕರ್ನಾಟಕ ಸಂಗೀತದ ಶ್ರೇಷ್ಠ ಗಾಯಕಿ ಸುಬ್ಬಲಕ್ಷ್ಮಿ ಅವರನ್ನು ಕೃಷ್ಣ ಪದೇ ಪದೇ ಟೀಕಿಸುತ್ತಿದ್ದು, ಅಂತಹ ವ್ಯಕ್ತಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಹೇಗೆ ಎಂದು ಶ್ರೀನಿವಾಸನ್ ಪ್ರಶ್ನಿಸಿದ್ದಾರೆ. ಶ್ರೀನಿವಾಸನ್ ಅವರು ಸುಬ್ಬಲಕ್ಷ್ಮಿ ಅವರ ಉಯಿಲಿನಲ್ಲಿ ಸ್ಮಾರಕ ಸಂಸ್ಥೆ ಬೇಡ ಎಂದು ಹೇಳಲಾಗಿದೆ ಮತ್ತು ಅವರ ಹೆಸರಿನಲ್ಲಿ ನಿಧಿ ಸ್ಥಾಪಿಸುವುದನ್ನು ವಿರೋಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page