Saturday, October 19, 2024

ಸತ್ಯ | ನ್ಯಾಯ |ಧರ್ಮ

ಕೃಷಿ ಕ್ಷೇತ್ರ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಬೇಕು: ಮಧು ಬಂಗಾರಪ್ಪ


ಶಿವಮೊಗ್ಗ, ಅ.19: ಕೃಷಿ ಕ್ಷೇತ್ರನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಹಾಗೂ ಕೈಗಾರಿಕೆಯಂತೆ ಕಾಣಬೇಕಿದೆ ಎಂದು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಶನಿವಾರ ಆಯೋಜಿಸಲಾಗಿದ್ದ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಕೃಷಿ-ತೋಟಗಾರಿಕ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಕೃಷಿ ಮೇಳದಲ್ಲಿ ಹಲವಾರು ಜಿಲ್ಲೆಗಳ ರೈತರು ಆಸಕ್ತಿ ಯಿಂದ ಪಾಲ್ಗೊಂಡಿದ್ದಾರೆ. ಕೃಷಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು.
ಇನ್ನಷ್ಟು ಸಂಶೋಧನೆ ಆಗಬೇಕು. ಪ್ರಸ್ತುತ ಹಗಲು ರಾತ್ರಿ ಸಂಶೋಧನೆ ಮೂಲಕ ರೈತರಿಗೆ ಸಹಕರಿಸುತ್ತಿರುವ ಸಂಶೋಧಕರು, ವಿಜ್ಞಾನಿಗಳಿಗೆ, ತಜ್ಞರಿಗೆ ಕೃತಜ್ಞತೆಗಳು.
ರೈತರ ಹಿತದೃಷ್ಟಿಯಿಂದ ವಿವಿ ಸ್ಥಾಪನೆಯಾಗಿದ್ದು, ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದ ಮಾಜಿ‌ಮುಖ್ಯಮಂತ್ರಿಗಳಾದ ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರು ಹಾಗೂ ಶ್ರಮಿಸಿದ ಎಲ್ಲರಿಗೆ ಧನ್ಯವಾದಗಳು.
ರೈತರಿಗೆ ವೈಜ್ಞಾನಿಕ ಕೃಷಿ ಬಗ್ಗೆ ಸಂಪೂರ್ಣ ವಾಗಿ ಮಾಹಿತಿ ಇಲ್ಲ. ಮಾಹಿತಿ ಕೊರತೆ ಇದೆ. ನಮ್ಮ ದೇಶದಲ್ಲಿ ಶೇ. ೭೦ ರಿಂದ ೮೦ ರೈತ ರಿದ್ದು ಅವರಿಗೆ ನಾವು ಸ್ಪಂದಿಸುವುದು ಬಹಳ ಮುಖ್ಯ. ಎಲೆಚುಕ್ಕಿ, ಕೊಳೆ ರೋಗ ನಿವಾರಣೆ ಗೆ ಕ್ರಮ ವಹಿಸಬೇಕಿದೆ. ಅವು ಬಾರದಂತೆ ತಡೆಯುವ ವ್ಯವಸ್ಥೆ ಮಾಡಬೇಕು. ನಾನೂ ಸರ್ಕಾರದ ಹಂತದಲ್ಲಿ ಪ್ರಯತ್ನಿಸುತ್ತೇನೆ.
ಇರುವಕ್ಕಿಯಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಮಾಡಿ ಎಲ್ಲರ ಗಮನ ಸೆಳೆದು, ಭವಿಷ್ಯದ ಕೃಷಿಗೆ ಒಳ್ಳೆಯ ಸಂದೇಶ ಹೋಗಬೇಕು. ರೈತರಿಗೆ ಅಗತ್ಯ ವಾದ ಎಲ್ಲ ಮಾಹಿತಿ ತಲುಪಿಸಬೇಕು.
ಯುವಜನತೆ ಕೃಷಿಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ನಾವು ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು.
ನದಿ ಮತ್ತು ನೀರು ಸಂರಕ್ಷಣೆ ಮಾಡುವುದು ಅತಿ ಮುಖ್ಯವಾಗಿದ್ದು, ನೀರನ್ನ ಶುದ್ದವಾಗಿಟ್ಟುಕೊಳ್ಳುವ ಸಾಮಾಜಿಕ ಪರಿಜ್ಞಾನ ತರಬೇಕಿದೆ. ನದಿ ಉಳಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗುವುದು.
ವಿಧ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಸಾಮಾನ್ಯ ಜ್ಞಾನ ಕಲಿಕೆ ಆರಂಭಿಸಲಾಗುವುದು. ವ್ಯಕ್ತಿ ತ್ವ ವಿಕಸನ, ಕೃಷಿಯ ಬಗ್ಗೆ ಯೂ ತಿಳಿಸಲಾಗುವುದು.
ಬಸವ ಕೇಂದ್ರದ ಶ್ರೀ ಮರುಳ ಸಿದ್ದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೈತ ಮಹಿಳೆ ಪ್ರಶಸ್ತಿ ವಿತರಣೆ, ತಾಂತ್ರಿಕ ಕೈಪಿಡಿಗಳು, ಸುಧಾರಿತ ಶೇಂಗಾ, ರಾಗಿ ತಳಿಗಳನ್ನು ಬಿಡುಗಡೆಗೊಳಿಸಲಾಯಿತು.
ತರೀಕೆರೆ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ,
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ರಾಜ್ಯ ಭೋವಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಕಾಡಾ ಅಧ್ಯಕ್ಷರಾದ ಡಾ.ಅಂಶುಮಂತ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೋಪಾಲ್, ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದರು.
ಕೆ. ಶಿ.ನಾ.ಕೃ.ತೋ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ , ಡಾ.ರಾಜೇಂದ್ರ ಹೆಗಡೆ, ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page