ಕಿಂಗ್ಸ್ ಚಾರ್ಲ್ಸ್ ಬ್ರಿಟನ್ನ ಹೊಸ ರಾಜನಾಗಿ ಆಯ್ಕೆ
ಲಿಂಕ್ ನಕಲಿಸಲಾಗಿದೆ ✓
ಲಂಡನ್: ರಾಣಿ 2ನೇ ಎಲಿಜಬೆತ್ ಮರಣ ಹೊಂದಿದ ನಂತರ ಅವರ ಮಗ ಕಿಂಗ್ಸ್ ಚಾರ್ಲ್ಸ್ ಬ್ರಿಟನ್ನ ಹೊಸ ರಾಜ ಎಂದು ಘೋಷಿಸಲಾಯಿತು.
ಲಂಡನ್ನ ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ನೂತನ ರಾಜನಾಗಿ 73 ವರ್ಷದ ಕಿಂಗ್ಸ್ ಚಾರ್ಲ್ಸ್ ಅವರ ಹೆಸರನ್ನು ಘೋಷಿಸಲಾಗಿದ್ದು, ಅವರು ಇಂದು (ಶನಿವಾರ) ಬ್ರಿಟನ್ ಅರಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ʼದೇವರೆ ರಾಜನನ್ನು ರಕ್ಷಿಸುʼ ಎಂದು ಮುಖ್ಯಸ್ಥರು ಹೇಳಿದ ಘೊಷಣೆಯನ್ನು ನಂತರ ಸಭೆಯಲ್ಲಿದ್ದ ಸದಸ್ಯರು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ ಚಾರ್ಲ್ಸ್ ಜೊತೆ ಅವರ ಪತ್ನಿ ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಮತ್ತು ಮಗ ಪ್ರಿನ್ಸ್ ವಿಲಿಯಂ ಸಹ ಇದ್ದರು.
P
Peepal Media
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
ಹಿಂದಿನ ಸುದ್ದಿ